ನವದೆಹಲಿ : ರಷ್ಯಾ ಉಕ್ರೇನ್ ವಿರುದ್ಧ ಯುದ್ದ (Rusia Ukraine war) ಘೋಷಿಸಿದ ನಂತರ ಉಕ್ರೇನ್ ನಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆಯುತ್ತಿವೆ. ಈ ನಡುವೆ, ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಸುರಕ್ಷಿತ ತಾಣಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸುಮಾರು 16,000 ಭಾರತೀಯರು ಯುದ್ಧ ವಲಯದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ (Indians stuck in Ukraine). ಇದೀಗ ಉಕ್ರೇನ್‌ನಲ್ಲಿ ಸಿಲುಕಿಹಾಕಿಕೊಂಡಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ (Karnataka student died in Ukraine). ಪಶ್ಚಿಮ ಗಡಿಯನ್ನು ತಲುಪಲು ಎಲ್ವಿವ್ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಗುಂಡು ತಗುಲಿ ಮೃತಪಟ್ಟಿದ್ದಾರೆ.
ಕರ್ನಾಟಕ ಮೂಲದ ಮೃತ ವಿದ್ಯಾರ್ಥಿಯನ್ನು ನವೀನ್ ಜ್ಞಾನಗೌಡರ್ ಎಂದು ಗುರುತಿಸಲಾಗಿದೆ (Karnataka student died in Ukraine). ಆತ ಉಕ್ರೇನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ನವೀನ್ (Naveen) ಪಶ್ಚಿಮ ಗಡಿಯನ್ನು ತಲುಪುವ ಉದ್ದೇಶದಿಂದ ಎಲ್ವಿವ್‌ಗೆ ತೆರಳಲು ರೈಲು ನಿಲ್ದಾಣಕ್ಕೆ ಹೋಗುತ್ತಿದ್ದರು ಎಂದು ನವೀನ್ ಸ್ನೇಹಿತರು ತಿಳಿಸಿದ್ದಾರೆ (Russia Ukraine war).
Ministry of External Affairs says that an Indian student lost his life in shelling in Kharkiv, Ukraine this morning. The Ministry is in touch with his family. pic.twitter.com/EZpyc7mtL7
— ANI (@ANI) March 1, 2022
ಇದನ್ನೂ ಓದಿ : ಪರಮಾಣು ನಿರೋಧಕ ಪಡೆಗಳಿಗೆ ಹೈಅಲರ್ಟ್ ನಲ್ಲಿರಲು ಸೂಚಿಸಿದ ಪುಟಿನ್..!
ವಿದ್ಯಾರ್ಥಿಗಳು ಹತಾಶವಾಗಿ ಭಾರತೀಯ ರಾಯಭಾರ ಕಚೇರಿಯ ಸಹಾಯವನ್ನು ಕೋರುತ್ತಿದ್ದಾರೆ. ಏತನ್ಮಧ್ಯೆ, ಖಾರ್ಕಿವ್ ಗಡಿಯಿಂದ ಕೇವಲ 30 ಕಿ.ಮೀ ದೂರದಲ್ಲಿರುವ ಎಂದು ಅವರು ತಿಳಿಸಿದ್ದರಿಂದ ಚೆನ್ನೈನಲ್ಲಿರುವ ನವೀನ್ ಪೋಷಕರು (Naveen parents) ವಿದ್ಯಾರ್ಥಿಗಳನ್ನು ಖಾರ್ಕಿವ್‌ನಿಂದ ಹೊರತರುವಂತೆ ರಷ್ಯಾದ ರಾಯಭಾರ ಕಚೇರಿಯನ್ನು ಕೋರಿದ್ದಾರೆ.
ಇದನ್ನೂ ಓದಿ : Russia Ukraine War: ಅಂತರಾಷ್ಟ್ರೀಯ ಕೋರ್ಟ್ ಗೆ ಮೊರೆ ಹೋದ ಉಕ್ರೇನ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.