Republic Day Parade : ದೆಹಲಿಯ ರಾಜಪಥದ ಪೆರಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಾ. ರಾಜಕುಮಾರ್!
ಕೃಷ್ಣದೇವರಾಯನ ಕಾಲದ ಆಡಳಿತ ವೈಭವ, ಸೈನ್ಯದ ಮಹತ್ವ, ಮತ್ತು ವಾಸ್ತುಶಿಲ್ಪಗಳೆಲ್ಲದರ ಸಂಕ್ಷಿಪ್ತ ರೂಪವು ಸ್ತಬ್ದಚಿತ್ರದಲ್ಲಿ ರೂಪುಗೊಂಡಿವೆ. ಇದಲ್ಲದೆ ಹಂಪಿಯಲ್ಲಿನ ಐತಿಹಾಸಿಕ ದೇವಾಲಯಗಳು, ಹನುಮಂತನ ಜನ್ಮಸ್ಥಾನ ಅಂಜನಾದ್ರಿ ಬೆಟ್ಟ, ಸಂಗೀತ ಹೊಮ್ಮಿಸುವ ಕಂಬಗಳೆಲ್ಲವನ್ನೂ ಕಾಣಬಹುದಾಗಿದೆ.
ನವದೆಹಲಿ: ವರನಟ ಡಾ. ರಾಜಕುಮಾರ್ (Dr. Rajakumar) ಅವರು ಗಣರಾಜ್ಯೋತ್ಸವದ ದಿನ (Republic Day) ದೆಹಲಿಯ ರಾಜಪಥದಲ್ಲಿ (Rajpath) ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಯಾರೋ ವ್ಯಕ್ತಿ ರಾಜಕುಮಾರ್ ಅವರಂತೆ ವೇಷ ಧರಿಸಿ ಮೆರವಣಿಗೆ ಮಾಡುತ್ತಾರೆ ಎಂದುಕೊಳ್ಳಬೇಡಿ. ಬೇರೆಯದೇ ರೀತಿಯಲ್ಲಿ ನೀವು ರಾಜಕುಮಾರ್ ಅವರನ್ನು ಕಾಣಬಹುದು.
ಗಣರಾಜ್ಯೋತ್ಸವದ ದಿನ (Republic Day) ದೆಹಲಿಯ ರಾಜಪಥದಲ್ಲಿ (Rajpath) ಈ ಬಾರಿಯ ಪಥಸಂಚಲನದ ವೇಳೆ ಕರ್ನಾಟಕ ಪ್ರಸ್ತುತ ಪಡಿಸುತ್ತಿರುವುದು, ಅಂದರೆ ಸ್ತಬ್ದ ಚಿತ್ರ ಮಾಡಿರುವುದು ಯುನೆಸ್ಕೋದಿಂದ (United Nations Educational, Scientific and Cultural Organization) ವಿಶ್ವ ಪಾರಂಪರಿಕ ತಾಣ (World Heritage Center) ಎಂದು ಗುರುತಿಸಲ್ಪಟ್ಟಿರುವ ಹಂಪಿ - ವಿಜಯನಗರ ಆಡಳಿತದ ವೈಭವವನ್ನು. ವಿಜಯನಗರದ ವೈಭವ ಎಂದರೆ ಕೃಷ್ಣದೇವರಾಯ ನೆನಪಾಗಲೇಬೇಕು. ಅದೇ ರೀತಿ ಕೃಷ್ಣದೇವರಾಯ ಎಂದರೆ ನೆನಪಾಗುವುದು ಡಾ. ರಾಜಕುಮಾರ್ (Dr. Rajakumar) ಅಲ್ಲವೇ?
ಇದನ್ನೂ ಓದಿ - ಕೊರೋನಾ ಕಾರಣಕ್ಕೆ ಈ ಬಾರಿ ದೆಹಲಿ ರಾಜಪಥದಲ್ಲಿ ಯಾವ ರೀತಿಯ ನಡೆಯಲಿದೆ Republic Day Parade
ಅದೇ ಕಾರಣಕ್ಕೆ 'ಹಂಪಿ - ವಿಜಯದ ನಗರ' (City of Victory) ಎಂಬ ಥೀಮ್ (Theme) ಇಟ್ಟುಕೊಂಡು ಸ್ತಬ್ಧ ಚಿತ್ರ ವಿನ್ಯಾಸ ಮಾಡಿರುವ ಕಲಾವಿದ ಶಶಿಧರ ಅಡಪ ನೇತೃತ್ವದ ತಂಡವು ಕೃಷ್ಣದೇವರಾಯನ ಕಲಾಕೃತಿಯನ್ನು ರಾಜಕುಮಾರ್ ಹೋಲುವಂತೆ ಚಿತ್ರಿಸಿದೆ. ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರಖ್ಯಾತಿ ಮತ್ತು ಪ್ರಾಮುಖ್ಯತೆ ಪಡೆದಿದ್ದು ಕೃಷ್ಣದೇವರಾಯ ಆಗಿದ್ದರಿಂದ ಆತನ ಪಟ್ಟಾಭಿಷೇಕದ ಸಂದರ್ಭವನ್ನು ಸ್ತಬ್ದಚಿತ್ರವು ಸಾರಿ ಹೇಳುತ್ತದೆ.
ಇದನ್ನೂ ಓದಿ - 55 ವರ್ಷಗಳಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸಕ್ಕೆ ಯಾವುದೇ ವಿದೇಶಿ ಅತಿಥಿ ಇಲ್ಲ....!
ಅಲ್ಲದೆ ಕೃಷ್ಣದೇವರಾಯನ ಕಾಲದ ಆಡಳಿತ ವೈಭವ, ಸೈನ್ಯದ ಮಹತ್ವ, ಅದರಲ್ಲೂ 1,200 ಮಹಿಳಾ ಸೈನಿಕರು ಮೆರೆದ ಪರಾಕ್ರಮ, ಅಲ್ಲಿನ ವಾಸ್ತುಶಿಲ್ಪಗಳೆಲ್ಲದರ ಸಂಕ್ಷಿಪ್ತ ರೂಪವು ಸ್ತಬ್ದಚಿತ್ರದಲ್ಲಿ ರೂಪುಗೊಂಡಿವೆ. ಇದಲ್ಲದೆ ಹಂಪಿ (Hampi)ಯಲ್ಲಿನ ಐತಿಹಾಸಿಕ ದೇವಾಲಯಗಳು, ಹನುಮಂತನ ಜನ್ಮಸ್ಥಾನ ಅಂಜನಾದ್ರಿ ಬೆಟ್ಟ, ಸಂಗೀತ ಹೊಮ್ಮಿಸುವ ಕಂಬಗಳೆಲ್ಲವನ್ನೂ ಕಾಣಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.