Karnataka TET Result 2021: ಕರ್ನಾಟಕ ಟಿಇಟಿ ಫಲಿತಾಂಶ ಪ್ರಕಟ, ರಿಸಲ್ಟ್ ಇಲ್ಲಿ ನೋಡಿ
ಕೆಟಿಇಟಿ 2021 ಪರೀಕ್ಷೆಯಲ್ಲಿ ಶೇ.60 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಅರ್ಹರೆಂದು ಘೋಷಿಸಲಾಗುತ್ತದೆ.
ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET) 2021ರ ಫಲಿತಾಂಶವನ್ನು ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ schooleducatio.kar.nic.in ನಲ್ಲಿ ಪರಿಶೀಲಿಸಬಹುದು.
ಕಳೆದ ತಿಂಗಳು ಆಗಸ್ಟ್ 22 ರಂದು ಕರ್ನಾಟಕ ಟಿಇಟಿ ಪರೀಕ್ಷೆ(Karnataka TET Result 2021)ಯನ್ನು ನಡೆಸಲಾಗಿತ್ತು. ರಾಜ್ಯಾದ್ಯಂತ ಶಾಲೆಗಳಲ್ಲಿ 1 ರಿಂದ 8ನೇ ತರಗತಿಗಳಿಗೆ ಶಿಕ್ಷಕರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಟಿಇಟಿ ಪರೀಕ್ಷೆ ಏರ್ಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿಕ್ಷಕರನ್ನು ಅವರು ಪಡೆದ ಅಂಕಗಳಿಗೆ ಅನುಗುಣವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಇದನ್ನೂ ಓದಿ: ಸಮಾನತೆಗಾಗಿ ಕಾಂಗ್ರೆಸ್ ಮತ್ತು RSS ಎರಡನ್ನೂ ಸೋಲಿಸಬೇಕು: ನಟ ಚೇತನ್ ಅಹಿಂಸಾ
ಕೆಟಿಇಟಿ(KTET) 2021ರಲ್ಲಿ ಪೇಪರ್ 1 ಪರೀಕ್ಷೆಯನ್ನು 1 ರಿಂದ 5 ನೇ ತರಗತಿಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಮತ್ತು ಪೇಪರ್ 2 ಅನ್ನು 6 ರಿಂದ 8ನೇ ತರಗತಿಯ ಶಿಕ್ಷಕರನ್ನು ನೇಮಿಸಿಕೊಳ್ಳಲು ನಡೆಸಿತ್ತು. ಇನ್ನೂ ಕೂಡ ತಮ್ಮ ಫಲಿತಾಂಶ(Result)ಗಳನ್ನು ಪರಿಶೀಲಿಸದ ಅಭ್ಯರ್ಥಿಗಳು ಕೆಳಗೆ ಸೂಚಿಸಿದ ಹಂತಗಳನ್ನು ಅನುಸರಿಸಿ ಅಥವಾ ಲಿಂಕ್ ಅನ್ನು ನೇರವಾಗಿ ಕ್ಲಿಕ್ ಮಾಡುವ ಮೂಲಕ ವೀಕ್ಷಿಸಬಹುದಾಗಿದೆ.
ಆನ್‌ಲೈನ್‌ನಲ್ಲಿ ಟಿಇಟಿ ಫಲಿತಾಂಶ ಪರಿಶೀಲಿಸುವುದು ಹೇಗೆ?
ಹಂತ 1: ಅಭ್ಯರ್ಥಿಗಳು ಮೊದಲು KTETಯ schooleducation.kar.nic.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಹಂತ 2: ಮುಖಪುಟದಲ್ಲಿ ಕಾಣುವ KARTET 2021 ಫಲಿತಾಂಶದ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
ಹಂತ 4: ನಿಮ್ಮ ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ.
ಹಂತ 5: ನಿಮ್ಮ ಟಿಇಟಿ ಫಲಿತಾಂಶವನ್ನು ಈಗ ಸ್ಕ್ರೀನ್ ಮೇಲೆ ಕಾಣಬಹುದು
ಹಂತ 6: ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಕೆಟಿಇಟಿ 2021 ಪರೀಕ್ಷೆಯಲ್ಲಿ ಶೇ.60 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಅರ್ಹರೆಂದು ಘೋಷಿಸಲಾಗುತ್ತದೆ. ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಕರ್ನಾಟಕ TET 2021 ಪ್ರಮಾಣಪತ್ರದ ಸಿಂಧುತ್ವವು ಜೀವಿತಾವಧಿಯಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ schooleducation.kar.nic.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕೆ ಬಿಜೆಪಿ ಸರ್ಕಾರ ಜನತೆಗೆ ನೀಡಿದ ಕೊಡುಗೆ ಬೆಲೆ ಏರಿಕೆ: ಕಾಂಗ್ರೆಸ್ ಟೀಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.