ಬೆಂಗಳೂರು: ಗೌರಿ-ಗಣೇಶ ಹಬ್ಬಕ್ಕೆ ರಾಜ್ಯದ ಜನತೆಗೆ ಬಿಜೆಪಿ ಸರ್ಕಾರ(BJP Govt.) ನೀಡಿದ ಕೊಡುಗೆ ಬೆಲೆ ಏರಿಕೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.ಶುಕ್ರವಾರ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ಪೆಟ್ರೋಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಸಿ ಹಬ್ಬದ ಸಂದರ್ಭದಲ್ಲಿ ಬಿಜೆಪಿ ಜನರ ಸಂಭ್ರಮವನ್ನೂ ಕಿತ್ತುಕೊಂಡಿದೆ. ಸರ್ಕಾರಿ ದರೊಡೆಗೆ ತೆರಿಗೆ ಎಂದು ನಾಮಕರಣ ಮಾಡಿಕೊಂಡು ಜನರ ಜೀವ ಹಿಂಡುತ್ತಿದೆ. ಬಿಜೆಪಿ ದುರಾಡಳಿತದಲ್ಲಿ ಜನರು ಹಬ್ಬವಿರಲಿ, ಬದುಕು ನಡೆಸುವುದೂ ಕಷ್ಟವಾಗಿದೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
‘ಕೂಲಿ ಕೊಡಲು ಹಣವಿಲ್ಲದೆ ತಾನು ಬೆಳೆದ ಬೆಳೆಯನ್ನೇ ನೀಡುವ ಹಂತಕ್ಕೆ ರೈತ ಬಂದಿದ್ದಾನೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಯೋಜನೆ ರೂಪಿಸಬೇಕಾದ ಕೃಷಿ ಸಚಿವ ಬಿ.ಸಿ.ಪಾಟೀಲ್(BC Patil) ಹಾಗೂ ಬಿಜೆಪಿ ಸರ್ಕಾರ ರೈತರನ್ನೇ ಹೇಡಿಗಳು ಎನ್ನುತ್ತಾ, ರೈತರ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಈ ಸರ್ಕಾರ ಒಂದಾದರೂ ರೈತಸ್ನೇಹಿ ಯೋಜನೆ ರೂಪಿಸಿದೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಗೌರಿ ಗಣೇಶ ಹಬ್ಬಕ್ಕೆ ಬಿಜೆಪಿ ಸರ್ಕಾರ ಜನತೆಗೆ ನೀಡಿದ ಕೊಡುಗೆ "ಬೆಲೆ ಏರಿಕೆ"
ಪೆಟ್ರೋಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ಸಂಭ್ರಮವನ್ನೂ ಕಿತ್ತುಕೊಂಡಿದೆ ಬಿಜೆಪಿ.
ಸರ್ಕಾರಿ ದರೊಡೆಗೆ 'ತೆರಿಗೆ' ಎಂದು ನಾಮಕರಣ ಮಾಡಿಕೊಂಡು ಜನರ ಜೀವ ಹಿಂಡುತ್ತಿದೆ!
ಬಿಜೆಪಿ ದುರಾಡಳಿತದಲ್ಲಿ ಹಬ್ಬವಿರಲಿ, ಬದುಕು ನಡೆಸುವುದೂ ಕಷ್ಟವಾಗಿದೆ
— Karnataka Congress (@INCKarnataka) September 9, 2021
ಇದನ್ನೂ ಓದಿ: Ganesh Chaturthi 2021: ಗಣೇಶ ಚತುರ್ಥಿ ಪ್ರಯುಕ್ತ 1000 ಹೆಚ್ಚುವರಿ KSRTC ಬಸ್ ಸೇವೆ
‘ಕೇಂದ್ರ ಸರ್ಕಾರ ಕೇವಲ 1.34 ಲಕ್ಷ ಕೋಟಿ ರೂ. ಆಯಿಲ್ ಬಾಂಡ್ ಹೆಸರು ಹೇಳಿಕೊಂಡು ದೇಶದ ಜನರಿಂದ 24 ಲಕ್ಷ ಕೋಟಿ ರೂ. ತೆರಿಗೆ ವಸೂಲಿ ಮಾಡಿದೆ. ಇದಕ್ಕಿಂತ ಸುಲಿಗೆ ಬೇಕಾ? ಜನರಿಗೆ ಎಲ್ಲ ಸತ್ಯಗಳೂ ಈಗ ಅರ್ಥವಾಗುತ್ತಿವೆ. ಪ್ರಧಾನಿ ಮೋದಿ ಮಾಧ್ಯಮದವರನ್ನೂ ಸೇರಿದಂತೆ ತಮ್ಮ ವಿರುದ್ಧ ದನಿ ಎತ್ತುವ ಎಲ್ಲರನ್ನೂ ಹೆದರಿಸುತ್ತಿದ್ದಾರೆ’ ಎಂಬ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್(Congress) ಆಕ್ರೋಶ ವ್ಯಕ್ತಪಡಿಸಿದೆ.
ತನ್ನ ಮೊತ್ತೊಂದು ಟ್ವೀಟ್ ನಲ್ಲಿ ‘ಈಗ ಸೃಷ್ಟಿಯಾಗಿರುವ ಶೈಕ್ಷಣಿಕ ಬಿಕ್ಕಟ್ಟು ಹಾಗೂ ಕುಂಠಿತಗೊಂಡ ಮಕ್ಕಳ ಕಲಿಕಾ ಸಾಮರ್ಥ್ಯದಿಂದ ದೇಶದ ಭವಿಷ್ಯಕ್ಕೆ, ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ. ಮಕ್ಕಳ ಭವಿಷ್ಯದಲ್ಲಿಯೇ ದೇಶದ ಭವಿಷ್ಯ ಅಡಗಿದೆ ಎಂದು ಸರ್ಕಾರ ಯೋಚಿಸುತ್ತಲೇ ಇಲ್ಲ. ಈ ಶೈಕ್ಷಣಿಕ ಅಸಮಾನತೆ ಗಂಭೀರ ಹಂತಕ್ಕೆ ಹೋಗುವ ಮುನ್ನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಸಲಹೆ ನೀಡಿದೆ.
ಇದನ್ನೂ ಓದಿ: Deadly Virus: ನಿಫಾ ವೈರಸ್ ವಕ್ಕರಿಸಿದರೆ ಪ್ರಾಣಕ್ಕೆ ಕುತ್ತು ಗ್ಯಾರಂಟಿ..!
‘ಲಾಕ್ಡೌನ್(Corona Lockdown)ನಲ್ಲಿನ ಶೈಕ್ಷಣಿಕ ಬಿಕ್ಕಟ್ಟನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದ ಪರಿಣಾಮ ಬಹು ಸಂಖ್ಯೆಯ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಡಿಜಿಟಲ್ ಇಂಡಿಯಾ ಎಂದು ಭಾಷಣ ಬಿಗಿಯುವ ಸರ್ಕಾರ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ವಿಫಲವಾಗಿದೆ. ಈ ಶೈಕ್ಷಣಿಕ ಅಸಮತೋಲನ ತೊಲಗಿಸಲು ಬಹುದೊಡ್ಡ ಯೋಜನೆ ರೂಪಿಸುವ ಅಗತ್ಯವಿದೆ, ಆದರೆ ಈ ಸರ್ಕಾರ ಮಾಡುವುದೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.