ಬೆಂಗಳೂರು: ಆರ್ಥಿಕ ಸಂಕಷ್ಟ ಮತ್ತು ಆರ್ಥಿಕ ಬಿಕ್ಕಟ್ಟಿನ ನಡುವೆಯೇ ರಾಜ್ಯ ಸರ್ಕಾರ ತನ್ನ 32 ಸಚಿವರು ಮತ್ತು 28 ಸಂಸದರಿಗೆ 13.8 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಇನೋವಾ ಕಾರುಗಳನ್ನ ಖರೀದಿಸಲು ಅನುಮೋದನೆ ನೀಡಿದೆ.


COMMERCIAL BREAK
SCROLL TO CONTINUE READING

ಸಿಬ್ಬಂದಿ ಮತ್ತು ಆಡಳಿತ ಸೇವೆಗಳ ಇಲಾಖೆ (DPAR) ಹೊರಡಿಸಿರುವ ಆದೇಶದ ಪ್ರಕಾರ, ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಚಿವರು ಮತ್ತು ಸಂಸದರ ವಾಹನ ಖರೀದಿಗೆ ನೀಡಿರುವ ಭತ್ಯೆಯನ್ನ 23 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ.


HD Kumaraswamy: '2006ರಲ್ಲಿ ಯಡಿಯೂರಪ್ಪ ಜೆಡಿಎಸ್‌ ಸೇರಲು ಬಂದಿದ್ದರು'


ಸರ್ಕಾರದ ಈ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ಅವ್ರು, 'ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಂದು ವರ್ಷ ಮುಂದೂಡಬೇಕಿತ್ತು' ಎಂದಿದ್ದಾರೆ.


Dr K Sudhakar: ಆರೋಗ್ಯ ‌ಸಚಿವ ಡಾ. ಕೆ. ಸುಧಾಕರ್‌ಗೆ 'ಹೈಕೋರ್ಟ್ ನೋಟಿಸ್‌'..!


ನಿಯಮಗಳ ಪ್ರಕಾರ, ಮಂತ್ರಿಗಳು ಅಥವಾ ಚುನಾಯಿತ ಪ್ರತಿನಿಧಿಗಳು ಒಂದು ಲಕ್ಷ ಕಿ.ಮೀ ಓಟವನ್ನು ಪೂರ್ಣಗೊಳಿಸಿದ ನಂತರ ಅಥವಾ ಖರೀದಿಸಿದ ಏಳು ವರ್ಷಗಳ ನಂತರವಷ್ಟೇ ತಮ್ಮ ಕಾರು(Car)ಗಳನ್ನ ಬದಲಾಯಿಸಬೇಕು. ನಂತರ ಈ ಕಾರನ್ನ ಸಾಮಾನ್ಯವಾಗಿ ಜಿಲ್ಲಾ ಕೇಂದ್ರಗಳಲ್ಲಿ ಇರಿಸಲಾಗುತ್ತೆ ಮತ್ತು ಜಿಲ್ಲೆಗಳಿಗೆ ಭೇಟಿ ನೀಡುವ ವಿಐಪಿಗಳ ಪ್ರಯಾಣದ ಅಗತ್ಯಗಳಿಗೆ ಬಳಸಲಾಗುತ್ತದೆ.


BY Vijendra: ಬಸವಕಲ್ಯಾಣ ಬೈಎಲೆಕ್ಷನ್: ಬಿಜೆಪಿಯಿಂದ ಸಿಎಂ ಪುತ್ರ ವಿಜಯೇಂದ್ರ ಸ್ಪರ್ಧೆ!?


ಈ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ಸಂಸದರಿಗೆ 33 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಮತ್ತು 17 ಟೊಯೊಟಾ ಇನ್ನೋವಾ ಕ್ರಿಸ್ಟಸ್(Toyota Innova Crysta) (23 ಲಕ್ಷ ಎಕ್ಸ್ ಶೋರೂಂ) ಐಷಾರಾಮಿ ಎಸ್ ಯುವಿ, ಟೊಯೊಟಾ ಫಾರ್ಚೂನರ್ʼನ್ನ ಆಯ್ಕೆ ಮಾಡಿದ್ದರು.


By Election: 3 ವಿ.ಸಭಾ, 1 ಲೋಕಸಭೆಯ 'ಚುನಾವಣೆಗೆ' ಇಂದೇ ಮಹೂರ್ತ ಫಿಕ್ಸ್‌..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.