HD Kumaraswamy: '2006ರಲ್ಲಿ ಯಡಿಯೂರಪ್ಪ ಜೆಡಿಎಸ್‌ ಸೇರಲು ಬಂದಿದ್ದರು'

ನಾನು ನೋಡದಿರುವ ಬಿಜೆಪಿ ಪಕ್ಷನಾ..? ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ

Last Updated : Feb 26, 2021, 04:18 PM IST
  • ನಾನು ನೋಡದಿರುವ ಬಿಜೆಪಿ ಪಕ್ಷನಾ..? ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ
  • ಹಾಗಾಗಿ ಬಿಜೆಪಿಯಿಂದ ನನ್ನನ್ನು ಏನು ಮಾಡಲು ಆಗಲ್ಲ ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ
  • 2006ರಲ್ಲಿ ಎಲ್ಲ ಮಂಗನ ರೀತಿ ಹಾರಲು ರೆಡಿಯಾಗಿದ್ದರು. ಅವತ್ತು, ಬಿಜೆಪಿಯನ್ನು ಉಳಿಸಿದ್ದು ನಾನು.
HD Kumaraswamy: '2006ರಲ್ಲಿ ಯಡಿಯೂರಪ್ಪ ಜೆಡಿಎಸ್‌ ಸೇರಲು ಬಂದಿದ್ದರು' title=

ರಾಮನಗರ: ನಾನು ನೋಡದಿರುವ ಬಿಜೆಪಿ ಪಕ್ಷನಾ..? ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನೇ. ಹಾಗಾಗಿ ಬಿಜೆಪಿಯಿಂದ ನನ್ನನ್ನು ಏನು ಮಾಡಲು ಆಗಲ್ಲ ಎಂದು ಮಾಜಿ‌ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ಮಾತನಾಡಿದ ಹೆಚ್. ಡಿ ಕುಮಾರಸ್ವಾಮಿ(HD Kumaraswamy), 2006ರಲ್ಲಿ ಎಲ್ಲ ಮಂಗನ ರೀತಿ ಹಾರಲು ರೆಡಿಯಾಗಿದ್ದರು. ಅವತ್ತು, ಬಿಜೆಪಿಯನ್ನು ಉಳಿಸಿದ್ದು ನಾನು. ಆಗ ಇದೇ ಯಡಿಯೂರಪ್ಪನವರು ನಮ್ಮ ಪಕ್ಷಕ್ಕೆ ಅರ್ಜಿ ಹಾಕೊಂಡು ನನ್ನತ್ತಿರ ಬಂದಿದ್ದರು. ನನಗೆ ಮಂತ್ರಿ ಮಾಡಿ ಬಿಜೆಪಿಗೆ ರಾಜೀನಾಮೆ ಕೊಡ್ತೀನಿ ಎಂದು ಬಂದಿದ್ದರು ಎಂದರು.

Dr K Sudhakar: ಆರೋಗ್ಯ ‌ಸಚಿವ ಡಾ. ಕೆ. ಸುಧಾಕರ್‌ಗೆ 'ಹೈಕೋರ್ಟ್ ನೋಟಿಸ್‌'..!

ಇದಲ್ಲದೇ, ರಾಮನಗರ ಜಿಲ್ಲೆಯಲ್ಲಿ ನನ್ನನ್ನು ಖಾಲಿ ಮಾಡಿಸಲು ಎಲ್ಲಾ ನಿಂತಿದ್ದಾರೆ. ಆದರೆ, ದೇವೇಗೌಡ(HD Devegouda)ರ ಕುಟುಂಬದ ಕೊಡುಗೆ ಜಿಲ್ಲೆಯ ಜನರಿಗೆ ಗೊತ್ತಿದೆ. ನಾನು ಬಂಡೆ ಹೊಡೆದಿಲ್ಲ, ಜನರ ಹಣ ಲೂಟಿ ಮಾಡಿಲ್ಲ. ನನ್ನನ್ನು ಖಾಲಿ ಮಾಡಿಸಲು ಬಂದವರು ಅವರೇ ಖಾಲಿಯಾಗಿದ್ದಾರೆ ಎಂದು ಹೇಳಿದರು.

BY Vijendra: ಬಸವಕಲ್ಯಾಣ ಬೈಎಲೆಕ್ಷನ್: ಬಿಜೆಪಿಯಿಂದ ಸಿಎಂ ಪುತ್ರ ವಿಜಯೇಂದ್ರ ಸ್ಪರ್ಧೆ!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News