ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಅಸಾನಿ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮೇ 14 ರವರೆಗೂ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ವರದಿ ನೀಡಿದೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇಂದು ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಮಳೆಯಾಗಿದೆ. ಜೊತೆಗೆ ಇನ್ನೆರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.


ಇದನ್ನೂ ಓದಿ: ಬಿಜೆಪಿ ಸರ್ಕಾರದ 40% ಕಮೀಷನ್ ಭ್ರಷ್ಟಾಚಾರ ನಿಸರ್ಗದಿಂದಲೇ ಬಯಲು: ಕಾಂಗ್ರೆಸ್


ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದ ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ವರುಣನ ಆರ್ಭಟ ಜೋರಾಗಿರಲಿದೆ ಎಂದು ತಿಳಿದುಬಂದಿದೆ. ಬಿರುಗಾಳಿ ಸಹಿತ ಮಳೆಯಾಗುವ ಹಿನ್ನೆಲೆ ಜನರು ಎಚ್ಚರದಿಂದ ಇರಬೇಕಿದೆ. ಸೌಂತ್ ಅಂಡಮಾನ್‍ನಲ್ಲಿ ಉಂಟಾದ ಸೈಕ್ಲೋನ್ ವಿಶಾಖಪಟ್ಟಣ, ಒಡಿಶಾ ಭಾಗದಲ್ಲಿ ನಾಳೆ ಅಂದರೆ ಬುಧವಾರ ಹಾದು ಹೋಗಲಿದೆ.‌ ಹೀಗಾಗಿ ಇನ್ನೆರಡು ದಿನ ಗುಡುಗು ಮತ್ತು ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ  ಮೇ13 ಮತ್ತು 14 ರಂದೂ ಸಹ ಸಾಧಾರಣ ಮಳೆಯಾಗಲಿದೆ.


ಆದರೆ, ಚಂಡಮಾರುತದಿಂದ ರಾಜ್ಯಕ್ಕೆ ದೊಡ್ಡ ಮಟ್ಟದ ಪರಿಣಾಮ ಆಗುವುದಿಲ್ಲ, ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ 5 ಸೆಂ.ಮೀ ಮಳೆಯಾಗಬಹುದು ಎಂದು ಹಾವಾಮಾನ ಕೇಂದ್ರದ ವಿಜ್ಞಾನಿ ಎ.ಪ್ರಸಾದ್ ತಿಳಿಸಿದ್ದಾರೆ.


ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಪೊಲೀಸ್ ನೋಟಿಸ್‌ಗೆ ಬೆಚ್ಚಿ ಬೀಳುವುದೇಕೆ?: ಬಿಜೆಪಿ


ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ


ಅಸಾನಿ ಚಂಡಮಾರುತ ಪರಿಣಾಮದಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಗಲಿನಲ್ಲೇ ವರುಣನ ಅಬ್ಬರ ಜೋರಾಗಿದೆ. ವಿಧಾನ‌ಸೌಧ, ಗಾಂಧಿನಗರ, ವಸಂತನಗರ, ರೇಸ್ ಕೋರ್ಸ್ ರೋಡ್, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಮುಂತಾದ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.