Raichur Weather: ಕರ್ನಾಟಕದಲ್ಲಿ ಬಿಸಿಲುನಾಡು ಎಂತಲೇ ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು, ಬಿಸಿಲಿನ ಹೊಡೆತಕ್ಕೆ ಜನ ಹೈರಾಣಾಗಿದ್ದು  ಮನೆಯಿಂದ ಹೊರಗೆಯೇ ಬರುತ್ತಿಲ್ಲ. 


COMMERCIAL BREAK
SCROLL TO CONTINUE READING

ಹೌದು.. ಈ ಬಾರಿ ಬೇಸಿಗೆ ಆರಂಭಲ್ಲೇ ಬಿಸಿಲಿನ ತಾಪಮಾನ (Temperature) ತೀರಾ ಹೆಚ್ಚಾಗಿತ್ತು.. ದಿನಗಳೆದಂತೇ ಬೇಸಿಗೆ ಬಿಸಿ ಹೆಚ್ಚಾಗುತ್ತಲೇ ಇದೆ.. ಇಡೀ ರಾಜ್ಯದಲ್ಲಿ ಬಿಸಿಲನಾಡು ಎಂದು ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯಲ್ಲೇ ಅತೀ ಹೆಚ್ವಿನ ತಾಪಮಾನ ದಾಖಲಾಗ್ತಿದೆ.. 20 ವರ್ಷಗಳಲ್ಲೇ ಕಳೆದ ವರ್ಷದ ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ತಾಪಮಾನ 40-43°c ವರೆಗೆ ಬಿಸಿಲಿನ ತಾಪಮಾನ  ದಾಖಲಾಗಿತ್ತು‌..ಈ ಬಾರಿಯೂ ಇದೇ ವಾತಾವರಣ ಮುಂದುವರೆದಿದೆ..ಇದ್ರಿಂದ ಜಿಲ್ಲೆಯ ಜನ ತತ್ತರಿಸಿದ್ದಾರೆ.. ಬಿಸಿಲಿನ ಹೊಡೆತಕ್ಕೆ ಬೆಚ್ಚಿಬಿದ್ದಿರೊ ಜಿಲ್ಲೆಯ ಜನ ಮನೆ ಬಿಟ್ಟು ಹೊರಬರ್ತಿಲ್ಲ.. 


ಇದನ್ನೂ ಓದಿ- ಅಗತ್ಯ ಭೂಮಿಗೆ ಲೆನ್ಸ್ ಕಾರ್ಟ್ 'ಎಕ್ಸ್' ಮೂಲಕ ಬೇಡಿಕೆ : ಮಿಂಚಿನ ವೇಗದಲ್ಲಿ ಸಚಿವರ ಸ್ಪಂದನ


ಸದ್ಯ ಜಿಲ್ಲೆಯಲ್ಲಿ 41°c ತಾಪಮಾನ ಮುಂದುವರೆದಿದ್ದು ಜನ ತತ್ತರಿಸಿದ್ದಾರೆ.. ಮಕ್ಕಳು, ವೃದ್ಧರು ಮದ್ಯಾಹ್ನ 12-4 ಗಂಟೆ ಅವಧಿಯಲ್ಲಿ ಮನೆಯಿಂದ ಹೊರಬರಬಾರ್ದು ಅಂತ ತಜ್ಞರು ಎಚ್ಚರಿಸಿದ್ದಾರೆ‌.


ಹೌದು.. ಬಿಸಿಲಿನ ಬೇಗೆಗೆ ಜನ ಸಂಪೂರ್ಣ ಹೈರಾಣಾಗಿ ಹೋಗಿದ್ದಾರೆ.. ಕಳೆದ 20 ವರ್ಷಗಳಿಗೆ ಹೋಲಿಸಿದರೇ ಈ ಮಾರ್ಚ್ ನ ಸರಾಸರಿ ತಾಪಮಾನ 0.5°c ಹೆಚ್ಚಾಗಿದೆ. ಇದರಿಂದ ಮನೆಯಿಂದ ಜನ ಹೊರಬರ್ತಿಲ್ಲ.. ಓಡಾಡ್ತಿಲ್ಲ... ನೆರಳಿನಲ್ಲಿ ಇದ್ರೆ ಸಾಕು ಅನ್ನೋ ಸ್ಥಿತಿಯಲ್ಲಿ ಜನ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಿಸಿಲಿನ ತಾಪಮಾನ ಹೆಚ್ಚಾಗಿರೋದರ ಮಧ್ಯೆ ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ ಆಟ ಆಡ್ತಿದೆ. ಹೀಗಾಗಿ ಜನ ನರಳಾಡೋ ಸ್ಥಿತಿ ನಿರ್ಮಾಣವಾಗಿದೆ.


ಇದನ್ನೂ ಓದಿ- ಚುನಾವಣಾ ನೀತಿ ಸಂಹಿತೆ- ಬಿಎಂಟಿಸಿ ಡಬಲ್ ಡೆಕ್ಕರ್ ಬಸ್ ಮತ್ತಷ್ಟು ವಿಳಂಬ


ಇದಷ್ಟೇ ಅಲ್ಲ ಇತ್ತ ವಿವಿಧ ಕಾರಣಗಳಿಂದ ಮನೆಯಿಂದ ಹೊರ ಬರೋ ಜನ ಗಾರ್ಡನ್ಗಳು, ಮರಗಳ ಬುಡದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಜನ ತಂಪು ಪಾನೀಯಗಳ‌ ಮೊರೆ ಹೋಗಿದ್ದಾರೆ.. ಇದೆಲ್ಲರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನ ಪ್ರಚಾರ ಮಾಡಿ ಜನರನ್ನ ಎಚ್ಚರಿಸಬೇಕಿದ್ದ ಜಿಲ್ಲಾಡಳಿತ, ಬರೀ ಪ್ರಕಟಣೆ ಹೊರಡಿಸಿ ಕೈತೆಳೆದುಕೊಂಡಿರೊ ಆರೋಪ ಕೇಳಿ ಬಂದಿದೆ. ಜನ ಇನ್ನೇರಡು ತಿಂಗಳು ಎಚ್ಚರದಿಂದರಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.