ಬೆಂಗಳೂರು: ಲೋಕಸಭಾ ಚುನಾವಣೆಗೆ ಇಂದು ಮೊದಲ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಈ ಹಂತದಲ್ಲಿ ರಾಜ್ಯದ 2,63,38,227 ಮತದಾರರು ಮತಚಲಾಯಿಸಲಿದ್ದಾರೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ 30,410 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.


COMMERCIAL BREAK
SCROLL TO CONTINUE READING

ಒಟ್ಟು ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ,  ಮೈಸೂರು-ಕೊಡಗು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ,  ಚಾಮರಾಜನಗರ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.


ಈ 14 ಲೋಕಸಭಾ ಕ್ಷೇತ್ರಗಳಿಂದ ಕಾಂಗ್ರೆಸ್ ನಿಂದ 10, ಜೆಡಿಎಸ್ ನಿಂದ 4, ಬಿಜೆಪಿಯಿಂದ 13 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 241 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಇಂದು ನಿರ್ಧರಿಸಲಿದ್ದಾನೆ.


ಲೋಕಸಮರದ ಕಣದಲ್ಲಿರುವ ಪ್ರಮುಖ ಹುರಿಯಾಳುಗಳು:
ಕ್ಷೇತ್ರ     ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ
ಬೆಂಗಳೂರು ಗ್ರಾಮಾಂತರ ಅಶ್ವಥ್ ನಾರಾಯಣ ಡಿ.ಕೆ. ಸುರೇಶ್
ಬೆಂಗಳೂರು ಉತ್ತರ     ಡಿ.ವಿ.ಸದಾನಂದ ಗೌಡ ಕೃಷ್ಣಬೈರೇಗೌಡ
ಬೆಂಗಳೂರು ಕೇಂದ್ರ     ಪಿ.ಸಿ. ಮೋಹನ್ ರಿಜ್ವಾನ್ ಅರ್ಷದ್
ಬೆಂಗಳೂರು ದಕ್ಷಿಣ     ತೇಜಸ್ವಿ ಸೂರ್ಯ ಬಿ.ಕೆ. ಹರಿಪ್ರಸಾದ್
ಚಿಕ್ಕಬಳ್ಳಾಪುರ ಬಿ.ಎನ್. ಬಚ್ಚೇಗೌಡ ವೀರಪ್ಪ ಮೊಯ್ಲಿ
ಕೋಲಾರ     ಎಸ್. ಮುನಿಸ್ವಾಮಿ ಕೆ.ಎಚ್. ಮುನಿಯಪ್ಪ
ಮೈಸೂರು-ಕೊಡಗು     ಪ್ರತಾಪ್ ಸಿಂಹ ಸಿ.ಎಚ್.ವಿಜಯಶಂಕರ್
ಹಾಸನ     ಎ. ಮಂಜು ಪ್ರಜ್ವಲ್ ರೇವಣ್ಣ
ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್ ಮಿಥುನ್ ರೈ
ಚಿತ್ರದುರ್ಗ ಎ. ನಾರಾಯಣಸ್ವಾಮಿ ಬಿ.ಎನ್. ಚಂದ್ರಪ್ಪ
ತುಮಕೂರು ಜಿ.ಎಸ್. ಬಸವರಾಜು     ಹೆಚ್.ಡಿ. ದೇವೇಗೌಡ
ಮಂಡ್ಯ ಸುಮಲತಾ ಅಂಬರೀಶ್
(ಬಿಜೆಪಿ ಬೆಂಬಲಿತ)
ನಿಖಿಲ್ ಕುಮಾರಸ್ವಾಮಿ
ಚಾಮರಾಜನಗರ ವಿ. ಶ್ರೀನಿವಾಸ ಪ್ರಸಾದ್ ಆರ್. ಧ್ರುವನಾರಾಯಣ
ಉಡುಪಿ-ಚಿಕ್ಕಮಗಳೂರು  ಶೋಭಾ ಕರಂದ್ಲಾಜೆ     ಪ್ರಮೋದ್ ಮಧ್ವರಾಜ್