ಬೆಂಗಳೂರು: ರಾಜ್ಯದ ಗದಗ ಮತ್ತು ಮಡಿಕೇರಿ ದೇಶದಲ್ಲೇ ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುವ ನಗರಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ.


COMMERCIAL BREAK
SCROLL TO CONTINUE READING

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ ಗದಗ ಅತ್ಯುತ್ತಮ ವಾಯುಗುಣಮಟ್ಟದೊಂದಿಗೆ ರಾಷ್ಟ್ರದ ಎಲ್ಲಾ ಪ್ರಮುಖ ನಗರಗಳಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.ಈ ಹಿಂದೆ ಕೂಡ ಗದಗ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು, ಈಗ ಮಡಿಕೇರಿಗೆ ಮೊದಲ ಸ್ಥಾನ ಲಭಿಸಿದೆ.


ಈಗ ಮಡಿಕೇರಿ ಮತ್ತು ಗದಗ ನಗರಗಳನ್ನು (Gadag) ಹೊರತು ಪಡಿಸಿ ಉತ್ತರ ಕರ್ನಾಟಕದ ನಾಲ್ಕು ನಗರಗಳು ಅತ್ಯುತ್ತಮ ವಾಯುಗುಣಮಟ್ಟದಲ್ಲಿ ಸ್ಥಾನವನ್ನು ಪಡೆದಿವೆ, ಅವುಗಳಲ್ಲಿ ಪ್ರಮುಖವಾಗಿ ಬಾಗಲಕೋಟೆ (23), ಹುಬ್ಬಳ್ಳಿ (35), ಯಾದಗಿರಿ (30), ಮತ್ತು ಬೀದರ್ (41 ಸೇರಿವೆ.ವಿಶೇಷವಾಗಿ ಗದಗ ನಗರವು ಜುಲೈ ತಿಂಗಳಿಂದ ಸತತವಾಗಿ ಅತ್ಯುತ್ತಮ ವಾಯುಗುಣಮಟ್ಟದಲ್ಲಿ ಸ್ಥಾನ ಪಡೆದಿದೆ.ಇದಕ್ಕೆ ಪ್ರಮುಖ ಕಾರಣ ಹತ್ತಿರದಲ್ಲೇ ಇರುವ ಕಪ್ಪತ್ತಗುಡ್ಡದ ಶ್ರೇಣಿ ಎನ್ನಲಾಗುತ್ತಿದೆ. ಅಲ್ಲದೆ ಗದಗ ಜಿಲ್ಲೆಯು ಪ್ರಮುಖವಾಗಿ ಕೃಷಿ ಪ್ರಧಾನವಾದ ಜನಸಂಖ್ಯೆಯನ್ನು ಹೊಂದಿದೆ, ಮತ್ತು ಇಲ್ಲಿ ಕಡಿಮೆ ಸಂಖ್ಯೆಯಲ್ಲಿ ಕೈಗಾರಿಕೆಗಳು ಇರುವುದು ಕೂಡ ಉತ್ತಮ ಗುಣಮಟ್ಟವನ್ನು ಹೊಂದಲು ಪ್ರಮುಖ ಕಾರಣವೆನ್ನಲಾಗುತ್ತಿದೆ.


ಇದನ್ನೂ ಓದಿ: ಶುದ್ಧ ವಾಯುಗುಣದಲ್ಲಿ ಗದಗ ಮತ್ತೊಮ್ಮೆ ದೇಶಕ್ಕೆ ನಂಬರ್ 1..!


ಇದಲ್ಲದೆ, ಕರ್ನಾಟಕದ ಹಲವು ನಗರಗಳು ಉತ್ತಮ ವಾಯು ಗುಣಮಟ್ಟ ಸೂಚ್ಯಂಕಗಳ ಪಟ್ಟಿಯಲ್ಲಿವೆ.ಚಾಮರಾಜನಗರ (44), ಚಿಕ್ಕಮಗಳೂರು (33) ಹಾಸನ (25) ಕೊಪ್ಪಳ (46), ದಾವಣಗೆರೆ (23) ಕೋಲಾರ (50), ರಾಮನಗರ ( 40), ಮೈಸೂರು (29) ವಿಜಯಪುರ (45) ಮತ್ತು ಶಿವಮೊಗ್ಗ (37) ಅತ್ಯುತ್ತಮ ವಾಯುಗುಣಮಟ್ಟವನ್ನು ಹೊಂದಿರುವ ನಗರಗಳಾಗಿವೆ.


ಭಾರತದಲ್ಲಿ ವಾಯುಗುಣ ಮಟ್ಟವನ್ನು ಅಳೆಯುವುದು ಹೇಗೆ?


500 ರ ಪಾಯಿಂಟ್ ಸ್ಕೇಲ್‌ನಲ್ಲಿ, ವಾಯುಗುಣಮಟ್ಟದ ಮೌಲ್ಯವು ಎಲ್ಲಾ ಪ್ರಮುಖ ಮಾಲಿನ್ಯಕಾರಕಗಳ ಸಾಂದ್ರತೆಯನ್ನು ಅವಲಂಬಿಸಿರುತ್ತದೆ.ಯಾವುದೇ ನಗರವು 0-50 ನಡುವಿನ ಮೌಲ್ಯವನ್ನು ಪಡೆದರೆ, ಅದನ್ನು ಉತ್ತಮ ವರ್ಗದಲ್ಲಿ ಪರಿಗಣಿಸಲಾಗುತ್ತದೆ.ಇದರ ನಂತರ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ ಮತ್ತು 301-400 ಅತ್ಯಂತ ಕಳಪೆ, ಮತ್ತು 401-500 ತೀವ್ರ ಕಳಪೆ ಎಂದು ಪರಿಗಣಿಸಲಾಗಿದೆ.ಇತ್ತೀಚೆಗೆ ದೆಹಲಿಯು ಸೂಚ್ಯಂಕದಲ್ಲಿ 362 ರ ವಾಯುಗುಣಮಟ್ಟದ ಮೌಲ್ಯದೊಂದಿಗೆ ಅತ್ಯಂತ ಕಳಪೆ ವಿಭಾಗದಲ್ಲಿ ಸ್ಥಾನ ಪಡೆದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.