ನವದೆಹಲಿ: ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿಯ ನಿರ್ವಹಣೆಗೆ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಸಹಾಯ (Special Financial Assistance)ವನ್ನು ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ (KC Ramamurthy) ಅವರು ಒತ್ತಾಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಬುಧವಾರ ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೆ.ಸಿ. ರಾಮಮೂರ್ತಿ ಅವರು, ಕಳೆದ ಮೂರು ವರ್ಷಗಳಿಂದ ನಿರಂತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗುತ್ತಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಬೆಳೆ ಮತ್ತು ಆಸ್ತಿ ನಷ್ಟವಾಗುತ್ತಿದೆ ಎಂದು ಗಮನಸೆಳೆದರು.


ಕರ್ನಾಟಕದಲ್ಲಿ ಪ್ರವಾಹ (Flood)ದಿಂದ ಈ ಬಾರಿ 61 ಮಂದಿ ಸಾವನ್ನಪ್ಪಿದ್ದಾರೆ. 11,000 ಮನೆಗಳು ಹಾನಿಗೊಳಗಾಗಿವೆ.‌ ಸುಮಾರು ನಾಲ್ಕು ಲಕ್ಷ‌ ಹೆಕ್ಟೇರ್ ನಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ.‌‌ ಒಟ್ಟಾರೆ 9,442  ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಬೆಳೆ ನಷ್ಟವಾಗಿದೆ ಎಂದು ವಿವರಿಸಿದರು.


50 ಲಕ್ಷ ರೂ. ಪ್ರವಾಹ‌ ಪರಿಹಾರ ನೀಡಿದ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ


ಪ್ರಸ್ತಕ್ತ ಸಾಲಿನಲ್ಲಿ ರಾಜ್ಯದ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ವಾಡಿಕೆಗಿಂದ ಶೇಖಡ 500ರಷ್ಟು ಹೆಚ್ಚು ಮಳೆಯಾಗಿದೆ. ಕೆಲವು ಕಡೆ ಭೂ ಕುಸಿತ ಕೂಡಾ ಆಗಿದೆ. ಈ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆದರೆ ಹೆಚ್ಚಿನ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಸಹಾಯದ ಅಗತ್ಯ ಇದ್ದು, ಕೇಂದ್ರ ಕೂಡಲೇ ವಿಶೇಷ ಆರ್ಥಿಕ ಸಹಾಯ (Special Financial Assistance)ವನ್ನು ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಆಗ್ರಹಿಸಿದರು.


ಅಲ್ಲದೆ ಪ್ರತಿವರ್ಷವೂ ರಾಜ್ಯದಲ್ಲಿ ಪ್ರವಾಹ ಉಂಟಾಗುತ್ತಿದ್ದು ಪ್ರವಾಹ ತಡೆಗಟ್ಟವ ನಿಟ್ಟಿನಲ್ಲಿ ವಿಶೇಷ ಸಮಿತಿ ರಚಿಸಬೇಕು. ಇದರಿಂದ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.