`ದ್ವಿತೀಯ PUC` ವಿದ್ಯಾರ್ಥಿಗಳ ಗಮನಕ್ಕೆ : ಇಂದಿನಿಂದ CET-2021 ಪರೀಕ್ಷೆಗೆ ಅರ್ಜಿ ಆರಂಭ
, ಆನ್ ಲೈನ್ ಮೂಲಕ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ 13-07-2021 ಆಗಿರುತ್ತದೆ.
ಬೆಂಗಳೂರು : ರಾಜ್ಯ ಸರ್ಕಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಿದೆ. ಆದ್ರೇ ಹಿಂದಿನ ತರಗತಿಯ ಫಲಿತಾಂಶದ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಿದೆ. ಇದರ ಮಧ್ಯೆ ವೃತ್ತಿಪರ ಕೋರ್ಸ್ ಗಳ ಆಯ್ಕೆಗಾಗಿ ನಡೆಸುವಂತ ಸಾಮಾನ್ಯ ಪ್ರವೇಶ ಪರೀಕ್ಷೆ -2021(CET)ಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examinations Authority)ವು, ಸರ್ಕಾರದ ಆದೇಶದಂತೆ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ, 2ನೇ ವರ್ಷದ ಬಿ-ಫಾರ್ಮ್ ಮತ್ತು ಫಾರ್ಮ್-ಡಿ, ಕೃಷಿ ವಿಜ್ಞಾನ ಕೋರ್ಸುಗಳು ಹಾಗೂ ವೆಟರಿನರಿ ಕೋರ್ಸುಗಳ ಪ್ರವೇಶಕ್ಕಾಗಿ ದಿನಾಂಕ 28-08-2021 ಮತ್ತು 29-08-2021 ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2021 ನಡೆಯಲಿದೆ.
ಇದನ್ನೂ ಓದಿ : Heavy Rainfall : ಮುಂಗಾರು ಮಳೆ ಚುರುಕು ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ!
ಇಂತಹ ಪರೀಕ್ಷೆಗೆ ಆನ್ ಲೈನ್(Online) ಮೂಲಕ, ಅರ್ಜಿ ಸಲ್ಲಿಸಲು ಅರ್ಹ ಕರ್ನಾಟಕ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭಗೊಳ್ಳುತ್ತಿದ್ದು, ಆನ್ ಲೈನ್ ಮೂಲಕ http://kea.kar.nic.in ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ : SSLC Exam Postponed : ಜೂನ್ 21ರಿಂದ ನಡೆಯಬೇಕಿದ್ದ 'SSLC ಪರೀಕ್ಷೆ' ಮತ್ತೆ ಮುಂದೂಡಿಕೆ!
ದಿನಾಂಕ 15-06-2021 ರ ಮಧ್ಯಾಹ್ನ 12 ರಿಂದ ಅರ್ಜಿ ಸಲ್ಲಿಕೆ ಆರಂಭ(Application Start)ಗೊಳ್ಳಲಿದ್ದು, ಆನ್ ಲೈನ್ ಮೂಲಕ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ 13-07-2021 ಆಗಿರುತ್ತದೆ. ಅರ್ಜಿ ಸಲ್ಲಿಸಿದಂತ ವಿದ್ಯಾರ್ಥಿಗಳು ಮಾಹಿತಿಗಳನ್ನು ಅವಶ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳಲು(ಶುಲ್ಕ ಪಾವತಿ ಮಾಡುವವರಿಗೆ ಮಾತ್ರ) ದಿನಾಂಕ 19-07-2021 ರ ಬೆಳಿಗ್ಗೆ 11 ರಿಂದ 22-07-2021ರ ಸಂಜೆ 5.30ರವರೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : BJP Core Committee Meeting : ರಾಜ್ಯ 'ಬಿಜೆಪಿ ಕೋರ್ ಕಮಿಟಿ' ಸಭೆಗೆ ದಿನಾಂಕ ಫಿಕ್ಸ್!
ದಿನಾಂಕ 15-06-2021ರ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭಗೊಂಡು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 10-07-2021ರ ಸಂಜೆ 5.30 ಆಗಿರುತ್ತದೆ. ಹೀಗೆ ಅರ್ಜಿ ಸಲ್ಲಿಸಿದಂತ ವಿದ್ಯಾರ್ಥಿಗಳು ಸಿಇಟಿ-2021(KCET-2021)ಕ್ಕೆ ಪ್ರವೇಶ ಪತ್ರಗಳನ್ನು ದಿನಾಂಕ 13-08-2021ರ ಬೆಳಿಗ್ಗೆ 11 ರಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ : BS Yediyurappa : ಕೊರೋನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ!
ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ, ಹೋಮಿಯೋಪತಿ ಸೀಟುಗಳ ಪ್ರವೇಶಕ್ಕಾಗಿ, ಅಭ್ಯರ್ಥಿಗಳು (NEET) -2021ರಲ್ಲಿ ಅರ್ಹತೆಯನ್ನ ಪಡೆದಿರಬೇಕು. ಆರ್ಕಿಟೆಕ್ಚರ್ ಸೀಟುಗಳ ಪ್ರವೇಶಕ್ಕಾಗಿ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ರವರು ನಡೆಸುವ NATA-2021ರಲ್ಲಿ ಅಥವಾ 2021ರ JEE Paper-2 ಪರೀಕ್ಷೆಯಲ್ಲಿ ಕಡ್ಡಾಯವಾಗಿ ಅರ್ಹತೆಯನ್ನು ಪಡೆದಿರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಗೆ ಭೇಟಿ ನೀಡಲು ಸೂಚಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ