ಬೆಂಗಳೂರು : ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಆಗಸ್ಟ್ 28, 29ರಂದು ಪರೀಕ್ಷೆ  ನಡೆಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ(CN Ashwath Narayan), ಸಿಇಟಿ ವಿಚಾರದಲ್ಲಿ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ವಿವಿಧ ಅಧಿಕಾರಿಗಳು, ತಜ್ಞರು ಭಾಗವಹಿಸಿದ್ದರು. ಸಚಿವ ಸುರೇಶ್ ಕುಮಾರ್ ಸಲಹೆಯನ್ನು ನೀಡಿ, ದ್ವಿತೀಯ ಪಿಯು ಅಂಕಗಳನ್ನು ಈ ಬಾರಿ ಪರಿಗಣಿಸದಂತೆ ಮನವಿ ಮಾಡಿದ್ದರು. ಸಿಇಟಿ ಆಧಾರದ ಮೇಲೆ RANK ನೀಡುವ ಕಾರ್ಯ ನಡೆಯಬೇಕು ಎಂಬುದಾಗಿ ತಿಳಿಸಿದ್ದರು. ಈ ವಿಚಾರವಾಗಿ ವಿಸೃತವಾಗಿ ಚರ್ಚೆ ಮಾಡಿ, ಸಂಬಂಧ ಪಟ್ಟ ಎಲ್ಲಾ ಕೌನ್ಸಿಲ್ ಗಳಿಗೆ ಪತ್ರವನ್ನು ಬರೆದು, ಈ ಬಗ್ಗೆ ರಿಲ್ಯಾಕ್ಸೇಷನ್ ಕೊಡುವಂತೆ ಕೋರಲಾಗುತ್ತದೆ ಎಂದರು. 


ಇದನ್ನೂ ಓದಿ : Heavy Rainfall in Karnataka : ಜೂ. 11 ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ..!


ಪಿಯುಸಿ ಅಂಕಗಳನ್ನ ಈ ವರ್ಷ ಪರಿಗಣಿಸುತ್ತಿಲ್ಲ. ಆದ್ರೆ, ಈ ವರ್ಷ ಸಿಇಟಿ ಪರೀಕ್ಷೆ(KCET 2021 Exam)ಯ ಅಂಕಗಳನ್ನ  ಪರಿಗಣಿಸಿಯೇ RANK ನೀಡುವಂತ ಕಾರ್ಯವನ್ನು ಮಾಡಲಾಗುತ್ತದೆ. ಅದೇ ರೀತಿ ಈ ಬಾರಿಯ ಸಿಇಟಿ ಪರೀಕ್ಷೆಯನ್ನು ಆಗಸ್ಟ್ 28, 29ರಂದು ನಡೆಸಲಾಗುತ್ತದೆ. ಮೊದಲ ದಿನ ಮ್ಯಾಥಮೇಟಿಕ್ಸ್ ಹಾಗೂ ಬಯೋಲಜಿ ಪರೀಕ್ಷ ನಡೆಯಲಿದೆ. ಎರಡನೇ ದಿನ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ ಪರೀಕ್ಷೆ ನಡೆಯಲಿದೆ. ಮೂರನೇ ದಿನ ಗಡಿನಾಡಿನ ಕನ್ನಡಿಗರಿಗೆ ಪ್ರತ್ಯೇಕವಾಗಿ ಕನ್ನಡ ಪರೀಕ್ಷೆ ನಡೆಯಲಿದೆ. ಜೂನ್.15ರಿಂದ ಸಿಇಟಿ ಪರೀಕ್ಷೆ ಪರೀಕ್ಷೆಗೆ ನೊಂದಣಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : DK Shivakumar : 'ಜನರ ಜೀವದ ಜತೆ ಚೆಲ್ಲಾಟ‌ ಬಿಡಿ, ಇಲ್ಲವೇ ಅಧಿಕಾರ ಬಿಟ್ಟು ಇಳಿಯಿರಿ ಕೆಳಗೆ'


ರಾಜ್ಯದಲ್ಲಿ ಕೊರೋನಾ ಕಾರಣದಿಂದಾಗಿ ರಾಜ್ಯದಲ್ಲಿನ ದ್ವಿತೀಯ ಪಿಯುಸಿ ಪರೀಕ್ಷೆ(PUC Exam 2021)ಯನ್ನು ರದ್ದು ಮಾಡಿ, ಪ್ರಥಮ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. 


ಇದನ್ನೂ ಓದಿ : Online Ration Card: ಈಗ ನೀವು ಮನೆಯಲ್ಲಿಯೇ ಕುಳಿತು ಪಡಿತರ ಚೀಟಿ ಪಡೆಯಬಹುದು, ಇಲ್ಲಿದೆ ಸುಲಭ ಮಾರ್ಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ