ಬೆಂಗಳೂರು: ನಾಟಕ, ಸಂಗೀತ, ನೃತ್ಯ ಹೀಗೆ ಅನೇಕ ಕಲಾಚಟುವಟಿಕೆಗಳಿಂದ ಸದಾ ಕಳೆಗಟ್ಟಿರುತ್ತಿದ್ದ ಕೆಂಗಲ್‌ ಹನುಮಂತಯ್ಯ (ಹನುಮಂತನಗರದ ಕೆ ಎಚ್)‌ ಕಲಾಸೌಧಕ್ಕೆ ಬೀಗ ಮುದ್ರೆ ಬಿದ್ದಿದೆ. ಕಳೆದ ಒಂದು ವರ್ಷದಿಂದ ಕಲಾಸೌಧದಲ್ಲಿ ಯಾವುದೇ ರಂಗ ಚಟುವಟಿಕೆಗಳ ಕಾರ್ಯಕ್ರಮಗಳಿಲ್ಲದೆ ಪಾಳುಬಿದ್ದ ಮಂದಿರವಾಗಿದೆ.


COMMERCIAL BREAK
SCROLL TO CONTINUE READING

ಹನುಮಂತನಗರದ ರಾಮಾಂಜನೇಯ ಗುಡ್ಡದ ರಮಣೀಯ ಪ್ರಕೃತಿಯ ನಡುವೆ ಇರುವ ಕೆ.ಎಚ್‌. ಕಲಾಸೌಧವು ಪ್ರಮುಖವಾಗಿ ನಾಟಕಗಳ ಪ್ರದರ್ಶನಗಳಿಗೆ ಪ್ರಖ್ಯಾತಿ ಪಡೆದಿದೆ. ಇಂತಹ ಕಲಾಸೌಧದ ಇನ್ನಿತರ ಸಭಾಂಗಣಗಳಾದ ಡಿವಿಜಿ ಕಲಾ ಗ್ಯಾಲರಿ, ಸಂಚಾರಿ ಥಿಯೇಟರ್‌ಗಳ ಬಾಗಿಲನ್ನೂ ಸಹ ಮುಚ್ಚಲಾಗಿದೆ.


ಇದನ್ನೂ ಓದಿ : ನಿಗದಿತ ಅವಧಿಯೊಳಗೆ ಮನೆ ಕಟ್ಟದವರಿಗೆ ದಂಡ ಫಿಕ್ಸ್: ಬಿಡಿಎ ಎಚ್ಚರಿಕೆ


ಇದಕ್ಕೆ ಕಾರಣ ಟೆಂಡರ್‌ ಸಮಸ್ಯೆಯಾಗಿದೆ. ಅಂದರೆ ಟೆಂಡರ್‌ ಸಮಸ್ಯೆಯಿಂದಾಗಿ ಬಿಬಿಎಂಪಿ ಅಧೀನದಲ್ಲಿದ್ದ ಕಲಾಸೌಧದಲ್ಲಿ ಈಗ ಯಾವುದೇ ಕಾರ್ಯಕ್ರಮಗಳು ನಡೆಯದಂತಾಗಿದ್ದು, ಯಾವುದೇ ರೀತಿಯ ನಿರ್ವಹಣೆ ಮತ್ತು ಜನರ ಓಡಾಟ ಇಲ್ಲದೆ ಕಲಾಸೌಧ ಈಗ ಪುಂಡರ ಅಡ್ಡವಾಗಿದೆ. ಈಗಾಗಲೇ ಈ ಸ್ಥಳ ಇಲಿ, ಹಾವು, ಚೇಳುಗಳ ವಾಸ ಸ್ಥಾನವಾಗಿ ಪರಿವರ್ತನೆಯಾಗಿದೆ.


ನಾಡು ಕಂಡಂತಹ ಧೀಮಂತ ರಾಜಕಾರಣಿ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥವಾಗಿ ನಿರ್ಮಿಸಿದ ಕೆ. ಎಚ್.‌ ಕಲಾಸೌಧ ಆರಂಭದಲ್ಲಿ ಬಿಬಿಎಂಪಿಯಿಂದಲೇ ನಿರ್ವಹಣೆಯಾಗುತ್ತಿತ್ತು. ನಂತರ 2009ರಿಂದ 2018ರವರೆಗೂ ಪ್ರಕಸಂ (ಪ್ರದರ್ಶನ ಕಲಾ ಸಂಸ್ಥೆ) ಅಡಿಯಲ್ಲಿತ್ತು. ತದನಂತರ ಪ್ರಭಾತ್‌ ಆಡಿಟೋರಿಯಂ ಗುತ್ತಿಗೆಗೆ ಪಡೆದು ನಿರ್ವಹಣೆ ಮಾಡಿದ್ದು, ಈ ಅವಧಿಯಲ್ಲಿ ಕಲಾಸೌಧದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆದಿವೆ. 


ಆದರೆ ಈಗ ಮೂಲಸೌಕರ್ಯದ ಸಮಸ್ಯೆ ಎದುರಾಗಿದ್ದು, ಇದಕ್ಕಾಗಿ ಟೆಂಡರ್‌ ಕರೆದಿದ್ದು ಅದೂ ಕೂಡ ಅಂತಿಮವಾಗದೆ ಕಲಾ ತಂಡಗಳಿಗೆ ಕಾರ್ಯಕ್ರಮ ಆಯೋಜಿಸಲು ಅಡ್ಡಿಯಾಗಿದೆ. ಇಲ್ಲಿನ ಮೂಲ ಸೌಕರ್ಯಗಳ ವ್ಯವಸ್ಥೆ ಸರಿಯಿಲ್ಲದ ಕಾರಣ ಯಾರೂ ಕೂಡ ಟೆಂಡರ್‌ಗೆ ಮುಂದಾಗುತ್ತಿಲ್ಲ. ಹೀಗಾಗಿ ವ್ಯವಸ್ಥೆ ಅಷ್ಟೇನು ಚೆನ್ನಾಗಿಲ್ಲ ಹಾಗೂ ವಿದ್ಯುತ್‌, ಮತ್ತು ಶೌಚಾಲಯ ವ್ಯವಸ್ಥೆಯೂ ಉತ್ತಮವಾಗಿಲ್ಲದ ಕಾರಣ ಅಲ್ಲಿನ ಸ್ಥಿತಿಗತಿಗಳು ಸರಿಯಾದ ಮೇಲೆ ಟೆಂಡರ್‌ ಕರೆಯುವುದು ಸೂಕ್ತ ಎಂದು ಪ್ರಭಾತ್‌ ಆಡಿಟೋರಿಯಂನ ವರ್ಷಿಣಿ ಪ್ರಭಾತ್‌ ಹೇಳಿದರು.


ಇದನ್ನೂ ಓದಿ: ಬೆಳಗ್ಗೆಯಿಂದಲೇ ಬಸ್ ಗಾಗಿ ಪರದಾಡುತ್ತಿರುವ ಸಾರ್ವಜನಿಕರು


ಇಂತಹ ಕಲಾಸೌಧವು ಈ ರೀತಿಯಾಗಿ ಪಾಳು ಬಿದ್ದಿರುವುದು ಮನ ಮಿಡಿಯುವಂತಹ ಸಂಗತಿಯಾಗಿದೆ.ಹೀಗಾಗಿ ಸರ್ಕಾರ ಆ ಟೆಂಡರ್‌ ಮತ್ತು ಮೂಲ ಸೌಕರ್ಯದ ಸಮಸ್ಯೆಗೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿಸಿ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ


 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.