ಬೆಂಗಳೂರು: ಕೆಜಿಎಫ್ ಬಾಬುರವರ 35 ಕೋಟಿ ರೂ.ಗೂ ಅಧಿಕ ಮೌಲ್ಯದ ಬಿಬಿಎಂಪಿ ಸ್ವತ್ತನ್ನು(KGF Babu Illegal Assets)ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್(NR Ramesh) ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KIADB ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಬೇಡವೆಂದವರಿಗೆ ಸೈಟ್: ಸಚಿವ ನಿರಾಣಿ


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 3 ತಿಂಗಳ ಹಿಂದೆ ಕೆಜಿಎಫ್ ಬಾಬು(KGF Babu) ಭೂ ಕಬಳಿಕೆ ಆರೋಪ ಸಂಬಂಧ ಅಕ್ರಮವಾಗಿ ಕಬಳಿಸಿದ್ದ ದಾಖಲೆಗಳನ್ನು ಬಿಡುಗಡೆ ಮಾಡಲಾಗಿತ್ತು. ಬೆಂಗಳೂರು ಉತ್ತರ ತಾಲೂಕು, ಯಲಹಂಕ ಹೋಬಳಿ, ಶ್ರೀನಿವಾಸಪುರ ಗ್ರಾಮದ ಸರ್ವೆ ನಂಬರ್ 22ರಲ್ಲಿ ಇದ್ದಂತಹ ಸುಮಾರು 35 ಕೋಟಿ ರೂ.ಗೂ ಹೆಚ್ಚು ಮೌಲ್ಯವಿರುವ  2.21 ಎಕರೆ‌ ಸರ್ಕಾರಿ ಸ್ವತ್ತನ್ನು ಅಂದಿನ ಜಿಲ್ಲಾಧಿಕಾರಿ 2014ರಲ್ಲಿ ಬಿಬಿಎಂಪಿ(BBMP) ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವ ಸಂಬಂಧ ನಿಯಮಾನುಸಾರ ಪಾಲಿಕೆಗೆ ಹಸ್ತಾಂತರಿಸಿದ್ದರು.


ಇದನ್ನೂ ಓದಿ: Siddharamaiah Allegations On BJP: ಜೇಮ್ಸ್ ಚಿತ್ರ ನಿಲ್ಲಿಸಲು ಬಿಜೆಪಿ ಒತ್ತಡ, ಸಿದ್ದರಾಮಯ್ಯ ಆರೋಪ!


ಆದರೆ, ಕೆಜಿಎಫ್ ಬಾಬು(KGF Babu) ಅಕ್ರಮವಾಗಿ  ಸರ್ಕಾರಿ ಸ್ವತ್ತನ್ನು ರಾಜಕೀಯ ಪ್ರಭಾವಗಳಿಂದಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ದೂರು ನೀಡಲಾಗಿತ್ತು‌. ಇದೀಗ ಜಿಲ್ಲಾಧಿಕಾರಿಗಳು ಮತ್ತು ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಭಾಗದ ತಹಶೀಲ್ದಾರ್, ಯಲಹಂಕ ವಲಯದ ಜಂಟಿ ಆಯುಕ್ತರು ಹಾಗೂ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರು ಸರ್ವೆ ಕಾರ್ಯ ಮುಗಿಸಿ, 35 ಕೋಟಿ ರೂ.ಗೂ ಹೆಚ್ಚು ಸರ್ಕಾರಿ ಮೌಲ್ಯವಿರುವ ಪಾಲಿಕೆಯ ಸ್ವತ್ತನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆಂದು ಎನ್.ಆರ್.ರಮೇಶ್ ಮಾಹಿತಿ ನೀಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.