Milestone Issue: ಕನ್ನಡಕ್ಕೂ ಇಂಗ್ಲೀಷ್ ಗೂ ಇದ್ದಿದ್ದು ಮೂರೇ ಕಿ.ಮೀ ಅಂತರ! ಮುಂದೇನಾಯ್ತು..?
Wrong Printing of KM in Milestone: ಕರ್ನಾಟಕ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಈ ತಪ್ಪು ನಡೆದಿದೆ ಎಂದು ಹೇಳಲಾಗಿತ್ತು. ಇನ್ನು ಈ ಫೋಟೋವನ್ನು ಇನ್ಸ್ಟಾ ಗ್ರಾಂನಲ್ಲಿ ‘mangaloremerijaanofficial’ ಪೇಜ್ ಹಂಚಿಕೊಂಡಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ವಿಧ ವಿಧವಾಗಿ ಕಮೆಂಟ್ ಗಳನ್ನು ಮಾಡಲು ಮುಂದಾಗಿದ್ದಾರೆ. ಓರ್ವ ನೆಟ್ಟಿಗ ‘ನಾವು ಕನ್ನಡದಲ್ಲಿ ಹೋಗುವ, ಪೆಟ್ರೋಲ್ ಬೆಲೆ ಹೆಚ್ಚಿದೆಯೆಲ್ಲವೇ’ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದರು.
Wrong Printing of KM in Milestone: ಪ್ರಯಾಣ ಸಂದರ್ಭದಲ್ಲಿ ನಾವೆಲ್ಲರೂ ಮೈಲಿಗಲ್ಲುಗಳ ಸಹಾಯದಿಂದ ಸಂಚಾರ ಮಾಡುತ್ತೇವೆ. ಅಂತರ್ಜಾಲ ಎಷ್ಟೇ ಮುಂದುವರೆದರೂ ಕೆಲವೊಂದು ಬಾರಿ ಇಂಟರ್ನೆಟ್ ಸರಿಯಾಗಿ ಸಿಗದೆ ಪ್ರಯಾಣದ ಸಂದರ್ಭದಲ್ಲಿ ಪರದಾಡುವುದುಂಟು. ಈ ಎಲ್ಲಾ ಸಮಸ್ಯೆಗಳಿದ್ದರೂ ಸಹ ನಮಗೆ ಸಹಾಯ ಮಾಡುವುದು ಇಂತಹ ಮೈಲಿಗಲ್ಲುಗಳು. ಆದರೆ ಅದರಲ್ಲೇ ಸಮಸ್ಯೆ ಕಂಡುಬಂದರೆ, ಏನು ಮಾಡೋದು?
ಇದನ್ನೂ ಓದಿ: Viral News: ಗಂಡನ ಈ ಕೃತ್ಯದಿಂದ ಬೇಸತ್ತ 42 ವರ್ಷದ ಅತ್ತೆ 27ರ ಅಳಿಯನ ಜೊತೆ ಎಸ್ಕೇಪ್!
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮೈಲಿಗಲ್ಲಿನಲ್ಲಿ ಮಹಾ ಎಡವಟ್ಟಾಗಿತ್ತು. ಯಾವ ಕಿ.ಮೀ ಸೂಚಿ ಸರಿಯಾಗಿದೆ ಎಂಬುದೇ ತಿಳಿಯುತ್ತಿರಲಿಲ್ಲ. ಈ ಮೈಲಿಗಲ್ಲಿನಲ್ಲಿ ಸಿಗಂದೂರು, ಕೊಲ್ಲೂರು ಮತ್ತು ಭಟ್ಕಳಕ್ಕಿರುವ ಕಿ.ಮೀ ಅಂತರವನ್ನು ಬರೆಯಲಾಗಿತ್ತು. ಆದರೆ ಕನ್ನಡ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಮೂರು ಕಿ.ಮೀ ಅಂತರ ಕಂಡುಬಂದಿತ್ತು. ಸಿಗಂದೂರಿಗೆ ಅಂತರ ಸರಿಯಾಗಿದೆ. ಇನ್ನು ಕೊಲ್ಲೂರು ಮತ್ತು ಭಟ್ಕಳ ತಾಲೂಕಿನ ಕಿ.ಮೀ ಅಂತರ ಕನ್ನಡದಲ್ಲಿ ಕ್ರಮವಾಗಿ 93 ಮತ್ತು 76 ಇದ್ದರೆ ಇಂಗ್ಲೀಷ್ ಭಾಷೆಯಲ್ಲಿ 96 ಮತ್ತು 73 ಎಂದಿದೆ.
Viral News: ವರನ ಕಾಲು ಮುಟ್ಟಲು ಸಹೋದರ ನಿರಾಕರಿಸಿದನೆಂದು ಮದುವೆ ಮಂಟಪದಲ್ಲಿದ್ದ ವಧು ಮಾಡಿದ್ದೇನು ಗೊತ್ತಾ?
ಮತ್ತೊಂದೆಡೆ ಈ ಪೋಸ್ಟ್ ವೈರಲ್ ಆಗಿದ್ದೇ ತಡ ಎಚ್ಚೆತ್ತ ಇಲಾಖೆ ಮೈಲಿಗಲ್ಲನ್ನು ಸರಿಪಡಿಸಿದೆ. ಇದೀಗ ಕೊಲ್ಲೂರಿಗೆ 93 ಮತ್ತು ಭಟ್ಕಳಕ್ಕೆ 76 ಕಿ.ಮೀ ಎಂದು ಬರೆಯಲಾಗಿದೆ. ಮತ್ತೆ ಈ ಪೋಸ್ಟ್ ನ್ನು ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕೆ ಸೋಶಿಯಲ್ ಮೀಡಿಯಾ ಎನ್ನುವುದು ಅಂತಾ ಅನೇಕರು ಕಮೆಂಟ್ ಗಳನ್ನು ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.