ಮಾದಪ್ಪನದೊಡ್ಡಿ : ನಾವೆಲ್ಲ ನೀರಿಗಾಗಿ ನಡಿಗೆ, ರಾಜ್ಯದ ಜನರಿಗೆ ಪಾದಯಾತ್ರೆ ಮಾಡ್ತಾ ಇದ್ದೇವೆ. ರಾಜ್ಯ ಸರ್ಕಾರ ನನ್ನ ಮೇಲೆ ಮತ್ತು ಪಕ್ಷದ ಮೇಲೆ ಸಂಚು ಹಾಕಿದೆ. ಏನಾದ್ರು ಮಾಡಿ ಪಾದಯಾತ್ರೆ ನಿಲ್ಲಿಸಬೇಕು ಅಂತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆರೋಪ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಮಾದಪ್ಪನದೊಡ್ಡಿಯಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ‌ಮತ್ತು ಕಾಂಗ್ರೆಸ್ ‌ನಾಯಕರ  ಜಂಟಿ ಸುದ್ದಿಗೊಷ್ಠಿಯಲ್ಲಿ ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಟಿ.ಬಿ. ಜಯಚಂದ್ರ, ಉಮಾಶ್ರೀ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಧೃವನಾರಾಯಣ್, ಎಂಎಲ್ಎ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು. 


ಇದನ್ನೂ ಓದಿ : ವೀಕೆಂಡ್ ಕರ್ಫ್ಯೂ ಎಫೆಕ್ಟ್ :  BMTC ಗೆ ₹6 ಕೋಟಿ, KSRTC ಗೆ 10 ಕೋಟಿ ಆದಾಯ ನಷ್ಟ! 


ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಬಂದ ಅಧಿಕಾರಿಗೆ ಕರೋನ ಅಂತೆ. ನಮಗೆ ಕರೋನ(Corona) ಹಬ್ಬಿಸೋಕೆ ಬಂದಿದ್ರು ಅನಿಸುತ್ತೆ. ಸಿಎಂಗೆ ಇಂತಹ ಬುದ್ದಿ ಹೇಗೆ ಬಂತೋ ಗೊತ್ತಿಲ್ಲ. ಆರೋಗ್ಯ ಸಚಿವರಿಂದ ಇಂತಹ ಬುದ್ದಿ ಬಂದಿರಬಹುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿವಕುಮಾರ್ ವಾಗ್ದಾಳಿ ನಡೆಸಿದರು. 


ವಿಮಾನ ನಿಲ್ದಾಣದಲ್ಲಿ ಸುಳ್ಳು ಟೆಸ್ಟ್ ಮಾಡ್ತಾ ಇದ್ದಾರೆ. ಇದು ಬಿಜೆಪಿ(BJP) ಲಾಕ್ ಡೌನ್, ಬಾರದೆ ಇರುವ ಜನಕ್ಕೂ ಕರೋನ ಬರ್ತಾ ಇದೆ. ಕಲೆಕ್ಷನ್ ಕಡಿಮೆ ಆಗಿದೆ ಅನಿಸುತ್ತೆ ಹಾಗಾಗಿ ಕರೋನ ಕೇಸ್ ತೊರಿಸ್ತಾ ಇದ್ದಾರೆ ಎಂದರು. 


ಮೂರು ದಿನಗಳ ಕಾಲ ನಾನು‌ ಮಾತನಾಡುವುದಿಲ್ಲ. ನಾನು ಮಾತನಾಡಿದ್ರೆ ಬೇರೆ ರೀತಿಯಲ್ಲಿ ‌ಮಾಧ್ಯಮದಲ್ಲಿ(Media) ತೊರಿಸ್ತಾ ಇದ್ದಾರೆ. ನಮ್ಮ ಮುಖಂಡರು ಕಾರ್ಯಕ್ರಮದ ಬಗ್ಗೆ ಮಾತನಾಡ್ತಾರೆ. ನಾನು ಮೌನವಾಗಿರುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ. 


ಇದನ್ನೂ ಓದಿ : Bengaluru: ಟಿವಿ ನೋಡಬೇಡ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ..!


ನನಗೆ ಕರೋನ ಬರುವಂತೆ ಮಾಡುವ ಹುನ್ನಾರ ‌ನಡೆದಿತ್ತು. ನನಗೆ ಯಾಕೆ ರೀತಿಯಲ್ಲಿ ಮಾಡ್ತಾ ಇದ್ದಾರೆ ಗೊತ್ತಿಲ್ಲ. ನನ್ನ ಮುಂದಿನ ಗುರಿ ಬಗ್ಗೆ ಅವರಿಗೆ ಗೊತ್ತಿದೆ. ಹಾಗಾಗಿ ಪಾದಯಾತ್ರೆ ತಡೆಯುವ ಕೆಲಸ ‌ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.