ಹುಬ್ಬಳ್ಳಿ : ಎಲ್ಲ ಪಕ್ಷದರಿಗೂ,ರಾಜ್ಯದ ಜನತೆಗೆ  ಹೊಸ ವರ್ಷದ ಶುಭಾಶಯಗಳು. ಎಲ್ಲ ಪಾರ್ಟಿಯವರಿಗೆ ಒಳ್ಳೆದಾಗಲಿ, ಅಧಿಕಾರ ಮಾತ್ರ ನಮಗೆ ಸಿಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮತ್ತೆ ಅಧಿಕಾರದ ಆಸೆ ಬಿಚ್ಚಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಏರಪೋರ್ಟ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಸಿಎಂ ನಾನಗೋದಲ್ಲ ಅದು ಹೈಕಮಾಂಡ್ ಖರ್ಗೆ ,ರಾಹುಲ್ ಗಾಂಧಿ ತೀರ್ಮಾನ ಮಾಡ್ತಾರೆ. ಅವರ ಏನ್ ಹೇಳ್ತಾರೆ ಅದು ನಮಗೆ ಪ್ರಸಾದ ಎಂದು ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : Omicron BF.7 : ರಾಜ್ಯದಲ್ಲೂ ಹೆಚ್ಚಾಯ್ತು BF.7 ಆತಂಕ : ಮುಂದಿನ 40 ದಿನ ಕಠಿಣ ಎಂದ ತಜ್ಞರು


ಇನ್ನು ಮಹದಾಯಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಸುಳ್ಳಿನ ಯುನಿವರ್ಸಿಟಿ. ಮೂರುವರೆ ವರ್ಷದಿಂದ ಏನೂ ಮಾಡೋಕೆ ಆಗಲಿಲ್ಲ. ಆಪರೇಶನ್ ಲೋಟಸ್ ಮಾಡಿ ಗೋವಾದಲ್ಲಿ ನಮ್ಮವರನ್ನ ತಗೆದುಕೊಂಡಿದ್ದಾರೆ. ಇದೀಗ ನಾವ ಧ್ವನಿ ಎತ್ತಿದ್ದೇವೆ, ಕಲಾವಿದರು, ರೈತರು ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಇದು ಸ್ಟಾರ್ಟ್ ಆಯ್ತು. ಏನೋ ಒಂದು ಲೆಟರ್ ಕಳಸಿಕೊಟ್ರು. ರಾಜ್ಯದಲ್ಲಿ 26 ಜನ ಸಂಸದರಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 


ಸುಮಲತಾ ಕುರಿತು ಡಿಕೆ ಶಾಕಿಂಗ್ ಸ್ಟೇಟಮೆಂಟ್


ಇನ್ನೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪಿಎಂ ಮೋದಿ ಭೇಟಿ ಮಾಡದ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ಅವರು ಬಿಜೆಪಿ ಅಸೋಶಿಯಟ್ ಮೆಂಬರ್. ಡಿಕೆ ಸುರೇಶ್, ಪ್ರಜ್ವಲ್ ರೇವಣ್ಣ ಬಿಟ್ಟ ಬಿಡಿ, ಉಳಿದವರು ಯಾಕೆ ಪ್ರಧಾನಿ ಭೇಟಿ ಮಾಡಿಲ್ಲ ಎಂದು ಪ್ರಶ್ನಿಸಿದರು.


ಇದನ್ನೂ ಓದಿ : KC Narayana Gowda : ಕೆಆರ್ ಪೇಟೆ ಕ್ಷೇತ್ರ ಬಿಟ್ಟು ಕೊಡಲು ಮುಂದಾದ ಸಚಿವ ಕೆಸಿ ನಾರಾಯಣ್ ಗೌಡ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.