KSOU Admission: ರಾಜ್ಯ ಮುಕ್ತ ವಿವಿ; ವಿವಿಧ ಕೋರ್ಸ್ ಪ್ರವೇಶಕ್ಕೆ ನ.15 ಕಡೆ ದಿನ
ನಿಮ್ಮ ಮನೆಯೇ ನಿರಂತರ ಪಾಠಶಾಲೆ” ಎಂಬ ಧ್ಯೆಯವಾಕ್ಯದೊಂದಿಗೆ ಯು.ಜಿ.ಸಿ ಅನುಮೋದಿತ ಶಿಕ್ಷಣ ಕ್ರಮಗಳ ಅಧ್ಯಯನದ ಅವಕಾಶವನ್ನು ವಿದ್ಯಾರ್ಥಿಗಳಿಗೆ ಈಗಾಗಲೇ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿ ಮುಕ್ತ ಶಿಕ್ಷಣ ನೀಡುವ ಏಕೈಕ ವಿದ್ಯಾಲಯವಾಗಿದೆ.
ಮಡಿಕೇರಿ :-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತನ್ನ 2024-25ನೇ ಜುಲೈ ಆವೃತ್ತಿಗೆ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶಾತಿಗೆ ಈಗಾಗಲೇ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾಸುಬ್ಬಯ್ಯ ತಿಳಿಸಿದ್ದಾರೆ.
ಮುಕ್ತ ವಿಶ್ವವಿದ್ಯಾಲಯವು “ ನಿಮ್ಮ ಮನೆಯೇ ನಿರಂತರ ಪಾಠಶಾಲೆ” ಎಂಬ ಧ್ಯೆಯವಾಕ್ಯದೊಂದಿಗೆ ಯು.ಜಿ.ಸಿ ಅನುಮೋದಿತ ಶಿಕ್ಷಣ ಕ್ರಮಗಳ ಅಧ್ಯಯನದ ಅವಕಾಶವನ್ನು ವಿದ್ಯಾರ್ಥಿಗಳಿಗೆ ಈಗಾಗಲೇ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿ ಮುಕ್ತ ಶಿಕ್ಷಣ ನೀಡುವ ಏಕೈಕ ವಿದ್ಯಾಲಯವಾಗಿದೆ.
ಸ್ನಾತಕ ಶಿಕ್ಷಣ ಕಾರ್ಯಕ್ರಮಗಳ ಅಡಿಯಲ್ಲಿ ಬರುವ [ಬಿ.ಎ, ಬಿ.ಕಾಂ, ಬಿ.ಲಿಬ್ ಐಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್ಸಿ, ಬಿ.ಎಸ್.ಡಬ್ಲ್ಯೂ] ಹಾಗು ಸ್ನಾತಕೋತ್ತರ ಪಿ.ಜಿ. ಕೋರ್ಸ್‍ಗಳಾದ [ಎಂ.ಎ, ಎಂ.ಎ-ಪತ್ರಿಕೋದ್ಯಮ, ಎಂ.ಕಾಂ, ಎಂ.ಬಿ.ಎ, ಎಂ.ಲಿಬ್‍ಐ.ಎಸ್ಸಿ, ಎಂ.ಎಸ್ಸಿ, ಎಂ.ಸಿ.ಎ, ಎಂ.ಎಸ್.ಡಬ್ಲೂ] [ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್] ಕೋಸ್ರ್ಗಳಿಗೆ ಪ್ರವೇಶಾತಿ ಪ್ರಾರಂಭವಾಗಿರುತ್ತದೆ.
ಇದನ್ನೂ ಓದಿ: ಔಟ್ ಆಗಿದ್ದಕ್ಕೆ ತಡೆಯಲಾರದ ಕೋಪ... ತಾಳ್ಮೆ ಕಳೆದುಕೊಂಡು ನೀರಿನ ಬಾಕ್ಸ್‌ಗೆ ಬ್ಯಾಟ್‌ನಿಂದ ಬಡಿದ ವಿರಾಟ್! ವಿಡಿಯೋ ನೋಡಿ
ಪ್ರವೇಶಾತಿಗೆ ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿರುತ್ತದೆ. ಎಸ್.ಎಸ್.ಲ್.ಸಿ ಅಂಕಪಟ್ಟಿ ಜೆರಾಕ್ಸ್. ಪಿ.ಯು.ಸಿ ಅಥವಾ ತತ್ಸಮಾನ ಅಂಕಪಟ್ಟಿ ಜೆರಾಕ್ಸ್. ಪದವಿ ಅಂಕಪಟ್ಟಿ ಜೆರಾಕ್ಸ್ (ಎಲ್ಲಾ ವರ್ಷಗಳ ಅಥವಾ ಎಲ್ಲಾ ಸೆಮಿಸ್ಟರ್ಗಳು), ಆಧಾರ್ ಕಾರ್ಡ್ ಜೆರಾಕ್ಸ್ , ಬ್ಯಾಂಕ್ ಖಾತೆ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಖಾತೆ ಹೋಲ್ಡರ್ ಹೆಸರು, ಬ್ಯಾಂಕ್ನ ಹೆಸರು, IಈSಅ ಕೋಡ್. ನಾಲ್ಕು ಫೆÇೀಟೋಗಳು. ದೂರವಾಣಿ ಸಂಖ್ಯೆ, ವಿದ್ಯಾರ್ಥಿ ಇ-ಮೇಲ್ ಐಡಿ, ಪಡಿತರ ಚೀಟಿ, (ಮಹಿಳೆಯರಿಗೆ ಮಾತ್ರ). ಎಟಿಎಂ ಕಾರ್ಡ್/ ಫೆÇೀನ್ ಪೇ/ ಗೂಗಲ್ ಪೇ/ ನೆಟ್ ಬ್ಯಾಂಕಿಂಗ್- ಶುಲ್ಕ ಪಾವತಿಗಾಗಿ ಹೆಚ್ಚಿನ ಮಾಹಿತಿಗೆ ಮಡಿಕೇರಿ ಜೂನಿಯರ್ ಕಾಲೇಜು ಆವರಣದ ಭವನದಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ ಮತ್ತು 9844395986, 8296215714, 9483570900, 7411233007. ದೂರವಾಣಿಯ ಮುಖಾಂತರ ವಿವರ ಪಡೆಯಬಹುದಾಗಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಡಿಕೇರಿ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ 2024-25 ಜುಲೈ ಆವೃತ್ತಿಯ ಪ್ರವೇಶಾತಿಯನ್ನು ಎಲ್ಲಾ ಸರ್ಕಾರಿ ರಜೆ ದಿನದಂದು ಹಾಗೂ ಎಲ್ಲಾ ಶನಿವಾರ ಮತ್ತು ಭಾನುವಾರದಂದು ಪ್ರವೇಶಾತಿ ಮಾಡಲಾಗುವುದು. ಕ.ರಾ.ಮು.ವಿ 2024-25 ಜುಲೈ ಆವೃತ್ತಿಯ ಪ್ರವೇಶಾತಿಯು ನವೆಂಬರ್ 15 ರಂದು ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.