ಬೆಂಗಳೂರು: ತಮ್ಮನ್ನು‌ ಖಾಯಂಗೊಳಿಸುವಂತೆ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಒಂದೆಡೆ ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನೊಂದೆಡೆ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿರುವ ನೌಕರರ ವಿರುದ್ಧ ಎಸ್ಮಾ ಜಾರಿಗೊಳಿಸುವ ಬಗ್ಗೆ ಇಂದು ನಿರ್ಧಾರವಾಗಲಿದೆ.


COMMERCIAL BREAK
SCROLL TO CONTINUE READING

ಇಂದು ಸಹ ಸಾರಿಗೆ ನೌಕರರಿಂದ ಮುಂದುವರೆದ ಮುಷ್ಕರ ಹಿನ್ನಲೆಯಲ್ಲಿ ಡಿಪೋದಿಂದ‌ ಮೆಜೆಸ್ಟಿಕ್ ಬಸ್ ನಿಲ್ದಾಣದ ಕಡೆಗೆ ಬಸ್ ಗಳು ಹೊರಟಿಲ್ಲ.‌ ನಿನ್ನೆ ರಾತ್ರಿಯೇ 27 ಸ್ಲೀಪರ್ ಕೋಚ್ ಗಳು ಮಾತ್ರ ಕೆಎಸ್‌ಆರ್ ಟಿಸಿ (KSRTC) ಬಸ್ ನಿಲ್ದಾಣಕ್ಕೆ ಬಂದಿದ್ದವು. ಇದರಿಂದ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.


ಯಶವಂತಪುರ, ಪೀಣ್ಯಾ, ಇಂದಿರಾನಗರ, ದೀಪಾಂಜಲಿನಗರ ಡಿಪೋದಿಂದ ಪೊಲೀಸ್ ಭದ್ರತೆಯಲ್ಲಿ ಕೆಲ ಬಸ್ ಗಳ ಸಂಚಾರಕ್ಕೆ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಕರ್ತವ್ಯಕ್ಕೆ ಯಾರೇ ಸಾರಿಗೆ ನೌಕರರು ಬಂದರೂ ಅವರಿಗೆ ಪೊಲೀಸ್ ಭದ್ರತೆ ನೀಡುವುದಾಗಿ ತಿಳಿಸಲಾಗಿದೆ. ಬಸ್ ಹೋಗುವ ವೇಳೆ ಯಾರಾದರೂ ಅಶಿಸ್ತು ಪ್ರದರ್ಸಿಸಿದರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ರವಾನಿಸಲಾಗಿದೆ.


ಸಚಿವ ಲಕ್ಷ್ಮಣ ಸವದಿಗೆ ಕರೆ ಮಾಡಿದ ಮಾಜಿ ಸಿಎಂ: ಯಾಕೆ ಗೊತ್ತಾ?


ಮುಂಜಾನೆಯಿಂದಲೇ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಹಾಗೂ ಆಟೋಗಳ ದರ್ಬಾರ್ ನಡೆಯುತ್ತಿದೆ. ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ (BMTC) ಎರಡೂ ಬಸ್ ಗಳ ನಿಲುಗಡೆ ಇದ್ದು ಮೈಸೂರು, ಕೊಳ್ಳೇಗಾಲ, ಚಾಮರಾಜನಗರ ಭಾಗಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡುತ್ತವೆ. ಬೆಂಗಳೂರು- ಮೈಸೂರು ನಡುವೆ ಪ್ರತಿ ದಿನ ಸುಮಾರು 500 ಬಸ್ ಗಳು  ಸಂಚರಿಸುತ್ತವೆ. ಆದರೆ ನಿನ್ನೆಯಿಂದ ಸಂಚರಿಸಿರುವುದು ಕೇವಲ 40 ಬಸ್ ಗಳು.


ಯಶವಂತಪುರ ಬಸ್ ನಿಲ್ದಾಣದಲ್ಲಿ ನಿನ್ನೆ ಎರಡು ಡಿಪೊಗಳಿಂದ ನಾಲ್ಕು ಬಸ್ ಪ್ರಯಾಣಿಸಿದ್ದವು. ಇಂದು ಒಂದೇ ಒಂದೂ ಬಸ್ ಕೂಡ ಕಾಣಿಸಿಕೊಂಡಿಲ್ಲ. ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಣಗುಡುತ್ತಿದೆ. ಡಿಪೋಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದ್ದು ಕೆಲವೇ ಕೆಲವು ಸಿಬ್ಬಂದಿ ಹಾಜರಾಗುತ್ತಿದ್ದಾರೆ.


ಕೆ.ಎಸ್.ಆರ್.ಟಿ.ಸಿ ಯಿಂದ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ


ಇಂದು ಎಸ್ಮಾ ಜಾರಿ ಬಗ್ಗೆ ನಿರ್ಧಾರ :
ಇಂದು ಪರಿಸ್ಥಿತಿ ಸುಧಾರಿಸದಿದ್ದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಜೊತೆ ಚರ್ಚಿಸಿ ಎಸ್ಮಾ ಕಾಯಿದೆ ಜಾರಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.