ಮಳೆಯಿಂದಾಗಿ KSRTC ಗೆ ಎಷ್ಟು ನಷ್ಟ ಆಗಿದೆ ಗೊತ್ತಾ?
17,175 ಮುಂಗಡ ಟಿಕೇಟುಗಳ ರದ್ಧತಿಯಿಂದಾಗಿ ಪ್ರಯಾಣಿಕರಿಗೆ 1.18 ಕೋಟಿ ರೂ. ಹಣವನ್ನು ಮರುಪಾವತಿಸಲಾಗಿದೆ. ಒಟ್ಟು ನಷ್ಟದಲ್ಲಿ ಈ ಮೊತ್ತವೂ ಸೇರಿದೆ.
ಬೆಂಗಳೂರು: ಕೊಡಗು, ಕರಾವಳಿ ಜಿಲ್ಲೆಗಳು ಮತ್ತು ಕೇರಳದಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಆದಾಯದಲ್ಲಿ ನಷ್ಟ ಉಂಟಾಗಿದೆ. ಆಗಸ್ಟ್ 9 ಮತ್ತು ಆಗಸ್ಟ್ 21 ರ ನಡುವೆ 1,822 ಪ್ರಯಾಣಗಳನ್ನು ರದ್ದುಗೊಳಿಸಿದ ಕಾರಣ 3.42 ಕೋಟಿ ರೂ. ನಷ್ಟ ಉಂಟಾಗಿದೆ.
17,175 ಮುಂಗಡ ಟಿಕೇಟುಗಳ ರದ್ಧತಿಯಿಂದಾಗಿ ಪ್ರಯಾಣಿಕರಿಗೆ 1.18 ಕೋಟಿ ರೂ. ಹಣವನ್ನು ಮರುಪಾವತಿಸಲಾಗಿದೆ. ಒಟ್ಟು ನಷ್ಟದಲ್ಲಿ ಈ ಮೊತ್ತವೂ ಸೇರಿದೆ.