Bodybuilding test and background check on 6th March: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 2020ರಲ್ಲಿ ಚಾಲಕ ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಇದೀಗ  ನೇರ ನೇಮಕಾತಿ ಹೊರಡಿಸಲಾಗಿದ್ದ ಹುದ್ದೆ ಸಂಖ್ಯೆಯ ಸರ್ಕಾರದ ಸೂಚನೆಯಂತೆ 2000ಕ್ಕೆ ಸಿಮೀತ ಮಾಡಿ ನೇಮಕಾತಿಗೆ ನಿರ್ಧರಿಸಲಾಗಿದೆ.


COMMERCIAL BREAK
SCROLL TO CONTINUE READING

ಹಾಜರಾಗಲು ಬಯಸುವ ಅರ್ಹ ಅಭ್ಯರ್ಥಿಗಳು ಮಾರ್ಚ್ 3ರಂದು ನಿಗಮದ ಅಧಿಕೃತ ಜಾಲತಾಣದಲ್ಲಿ (https://ksrtcjobs.karnataka.gov.in/) ಕರಪತ್ರ ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬೇಕು. ಸೂಕ್ತ ಮಾಹಿತಿಯನ್ನು ಓದಿಕೊಳ್ಳಬೇಕಿದೆ.ಕರೆಪತ್ರ ಡೌನ್‌ಲೋಡ್ ದಿನಾಂಕದ ವಿವರ ಇದರ ಭಾಗವಾಗಿಯೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮುಂದಿನ ಮಾರ್ಚ್ 6ರಂದು ದೇಹದಾರ್ಢ್ಯ ಪರೀಕ್ಷೆ ಹಾಗೂ ಮೂಲದಾಖಲಾತಿ ಪರಿಶೀಲನೆ ನಡೆಯಲಿದೆ. ಎಂದು KSRTC ತಿಳಿಸಿದೆ. 


ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ಏನಿದೆ? 
ಮಾರ್ಚ್ 6ರಂದು ಮೂಲ ದಾಖಲಾತಿ ಮತ್ತು ದೇಹದಾರ್ಢ್ಯ ಪರೀಕ್ಷೆ ಮಾತ್ರ ನಡೆಸಲಾಗುವುದು. ಇದರ ಹೊರತು ಈ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪ ಇರುವುದಿಲ್ಲ. ಮೇಲಿನ ಎರಡು ಪರೀಕ್ಷೆ ಮಾತ್ರ ನಡೆಯಲಿದ್ದು, ಚಾಲನಾ ವೃತ್ತಿ ಪರೀಕ್ಷೆ ಬಗ್ಗೆ ನಿಗಮವೇ ಅಧಿಕೃವಾಗಿ ತಿಳಿಸಲಿದೆ. ಗಣಕೀಕೃತ ಚಾಲನಾ ಪರೀಕ್ಷೆಯಲ್ಲಿನ ಗಳಿಸಿ ಅಂಕಗಳು (ಮೆರಿಟ್) ಆಧಾರದಲ್ಲಿ ನೇಮಕಾತಿ ನಡೆಯಲಿದೆ ಎಂದು ನಿಗಮವು ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ನೀಡಿದೆ.


 ಇನ್ನೂ ಈ ಹುದ್ದೆಗಳ ಭರ್ತಿಗಾಗಿ ಸಾರಿಗೆ ಇಲಾಖೆಯು 2020ರ ಫೆಬ್ರವರಿ 14ರಂದು ನೇರ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಅನ್ವಯ ಹಾಲಿ ಇದ್ದ ಮೀಸಲಾತಿ ನಿಯಮಗಳ ಅನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ಪರಿಷ್ಕರಿಸಿ ನಿಗಮದ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ಸೂಕ್ತ ದಾಖಲೆಗಳ ಸಮೇತ ಹಾಜರಾಗಿ ನಿಗದಿತ ಮಾರ್ಚ್ 6ರಂದು ದೇಹದಾರ್ಢ್ಯ ಪರೀಕ್ಷೆ ಸೂಕ್ತ ದಾಖಲೆಗಳ ಸಮೇತ ಹಾಜರಾಗಬೇಕು ಎಂದು ನಿಗಮ ತಿಳಿಸಿದೆ.


ಕಳೆದ ಸುಮಾರು ನಾಲ್ಕು ವರ್ಷಗಳ ಹಿಂದೆ ಈ ಹುದ್ದೆಗಳಿಗೆ ರಾಜ್ಯ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಅದರ ನೇರ ನೇಮಕಾತಿಗೆ ಇದೀಗ ಚಾಲನೆ ನೀಡಿರುವ ನಿಗಮವು ಹಂತ ಹಂತ ಪ್ರಕ್ರಿಯೆ ಮೂಲಕ ಅರ್ಹರನ್ನು ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಿಸಿಕೊಳ್ಳಲಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಅರ್ಹರಾಗುವ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆ ನಡೆಸುವ ಕುರಿತು ಶೀಘ್ರವೇ ಪ್ರತ್ಯೇಕ ದಿನಾಂಕ, ಸ್ಥಳದ ಮಾಹಿತಿಯನ್ನು ಪ್ರಕಟಿಸಲಾಗುವುದು ಎಂದು ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.