ಅವರೆಲ್ಲಾ ಊರ್ ಬಿಟ್ಟು ಬದುಕು ಕಟ್ಟಿ ಕೊಳ್ಳೋಕೆ ಬೆಂಗಳೂರಿಗೆ ಬಂದವರು. ಊರ್ ಬಿಟ್ ಬಂದ್ರು ಕೂಡ ಅವರಿಗಿದ್ದ ಊರ ಭಾಷೆ ಮೇಲಿನ ಪ್ರೇಮ ಮಾತ್ರ ಒಂದು ಸ್ವಲ್ಪನೂ ಕಮ್ಮಿ ಆಗಿಲ್ಲ. ಊರಿನ ಭಾಷೆಗೋಸ್ಕರ ಒಂದು ಹಬ್ಬವನ್ನೇ ಮಾಡ್ತಾ ಇದ್ದಾರೆ.  ಯಾವ ಹಬ್ಬ, ಯಾವ್  ಕಾರ್ಯಕ್ರಮ ಅಂತ ಗೊತ್ತಾಗಬೇಕಾ ಹಾಗಾದ್ರೆ ಈ ಸ್ಟೋರಿ ಓದಿ... 
 
ಹೌದು..... ಅವರೆಲ್ಲಾ ಊರು ಬಿಟ್ಟು ಬದುಕು ಕಟ್ಟಿಕೊಳ್ಳಲು ಕುಂದಾಪುರದಿಂದ ಬೆಂಗಳೂರಿಗೆ ಬಂದು ನೆಲೆಸಿರುವವರು. ಊರು ಬಿಟ್ ಬಂದ್ರು ಕೂಡ ಊರಿನ ಭಾಷೆ ಮೇಲಿನ ಪ್ರೀತಿ ಮಾತ್ರ ಒಂದು ಚೂರು ಕಡಿಮೆ ಆಗಿಲ್ಲ. ಭಾಷೆ ಮೇಲಿನ ಪ್ರೀತಿಗೋಸ್ಕರ ಕುಂದಾಪುರದವರೆಲ್ಲಾ ಒಟ್ಟಾಗಿ ಸೇರಿ ಕುಂದಾಪುರ ಹಬ್ಬ ಮಾಡಿ, ಕುಂದಾಪುರ ಪರಂಪರೆ  ಸಂಸ್ಕೃತಿನ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇನ್ನೂ.. ಪ್ರತಿ ಆಷಾಢ ಅಮಾವಾಸ್ಯೆಯ  ದಿನ ವಿಶ್ವ ಕುಂದಾಪುರ ದಿನ ಅಂತ ಆಚರಣೆ ಮಾಡ್ತಾ ಇದ್ರು. ಕಳೆದ 5 ವರ್ಷದಿಂದ ಕುಂದಾಪುರದವರೆಲ್ಲ ಸೇರಿ ಕುಂದಾಪುರ ಕನ್ನಡ ಪ್ರತಿಷ್ಠಾನದಿಂದ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ನಿನ್ನೆ (ಜುಲೈ 23, 2023) ಮೊದಲಿಗೆ ಶಾಸಕರಾದ ಗುರುರಾಜ್ ‌ಗಂಟಿಹೊಳೆ, ಕಿರಣ್ ಕೊಡ್ಗಿ , ಕಂಬಳದ ಧುರೀಣರಾದ ಶಾಂತರಾಮ್ ಶೆಟ್ಟಿ ಬಾರ್ಕೂರ್ ಕುಂದಾಪುರದ ರಥವನ್ನು ಎಳೆದು ಸಂಸ್ಕ್ರತಿಯನ್ನ ಮರೆಸಿದ್ರು.. ಹಾಗೇ ಕಾರ್ಯಕ್ರಮದ ಉದ್ಘಾಟನೆ ಸಾಂಪ್ರದಾಯಿಕವಾಗಿದ್ದು  ಕಂಬಕ್ಕೆ ಕುಂದಾಪುರ ದಿನದ ಲೋಗೋವನ್ನು ಏರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ್ ಶೆಟ್ಟಿ,  ರಾಘವೇಂದ್ರ ಕಾಂಚನ್, ಅಜಿತ್ ಶೆಟ್ಟಿ ಉಳ್ತೂರು ಉಪಸ್ಥಿತಿತರಿದ್ದರು. ಕಾರ್ಯಕ್ರಮದ ಉದ್ಘಾಟನೆ ನಂತರ ತುಳು ನಾಡಿನ ಸಾಂಸ್ಕೃತಿಕ ಕಲೆ ಯಕ್ಷಗಾನ, ಹಾಡು ನಾಟಕಗಳು ಜನರ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡಿತು. 


ಇದನ್ನೂ ಓದಿ- ಖಾಸಗಿ ಸಾರಿಗೆ ಸಂಘಟನೆಗಳಿಂದ ರಾಜ್ಯಾದ್ಯಂತ ಬಂದ್ ಕರೆ
 
ನೃತ್ಯ, ಮಾತಿನ ಚಾವಡಿ, ಖಾದ್ಯ ವೈವಿದ್ಯ, ಟೀಮ್ ಕುಂದಾಪುರಿಯನ್ಸ್ ತಂಡದಿಂದ "ಮಿಂಚುಳ- ಇದ್ ಕತ್ಲಿ-ಬೆಳಗಿನ ಕಥಿ" ಎಂಬ ವಿಶೇಷ ನಾಟಕ‌ಗಳು ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನುಉಣ ಬಡಿಸಿದ್ರು. 


ಕುಂದಾಪ್ರ ಕನ್ನಡ ಹಬ್ಬದಲ್ಲಿ ಗ್ರಾಮೀಣ ಕ್ರೀಡೆ: 
ಹಾಗೇ ಕರಾವಳಿಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಕ್ರೀಡಾಕೂಟವನ್ನು ಶಾಸಕರಾದ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ ಅವರು ತಾವೇ ಸ್ವತಃ ಹಣೆ ಬೊಂಡ ಓಟದಲ್ಲಿ ಭಾಗಿಯಾಗುವ ಮೂಲಕ ತಮ್ಮ ಬಾಲ್ಯವನ್ನು ಮೆಲುಕುಹಾಕಿದರು. ವಯಸ್ಕರರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು, ಮಕ್ಕಳಿಗೆ ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹಣೆಬೊಂಡ ಓಟ, ಗಿರ್ಗಿಟ್ಲೆ ಓಟ, ಚಿತ್ರಕಲೆ, ಮಹಿಳೆಯರಿಗೆ ಹಲಸಿನ ಕೊಟ್ಟೆ ಕಟ್ಟುವುದು ಇನ್ನಿತರ ಸ್ಪರ್ಧೆಗಳು ಹಬ್ಬದ ಬಯಲಿನ ಕಲರವವನ್ನು ಇಮ್ಮಡಿಗೊಳಿಸಿದೆ.


ಇದನ್ನೂ ಓದಿ- ಕೆಐಎಡಿಬಿ ಕಚೇರಿಗಳಲ್ಲಿ ದಲ್ಲಾಳಿಗಳಿಗೆ ಲಗಾಮು : ಸುತ್ತೋಲೆ ಪ್ರಕಟ
 
ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ  ಹಾಲುಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್,  ಸುಕ್ಕಿನ್ ಉಂಡೆ, ಎಳ್ ಬಾಯ್ರ್ (ಪಾಯಸ/ಜ್ಯೂಸ್) , ಹೆಸ್ರು ಬಾಯ್ರ್ (ಪಾನಕ/ಜ್ಯೂಸ್) ನಂತಹ ವಿವಿಧ ಪಾನಕಗಳು ವಿಶೇಷವಾಗಿತ್ತು. ಹಾಗೇ ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ನಿ ಸಾರು ಇನ್ನಿತರ  ಅಪರೂಪದ ಖಾದ್ಯಗಳು ಕುಂದಾಪ್ರ ಕನ್ನಡ ಹಬ್ಬವನ್ನು ಮತ್ತಷ್ಟು ರಂಗು ಮಾಡಿತು.


ಒಟ್ನಲ್ಲಿ ಕುಂದಾಪುರ ಪ್ರತಿಷ್ಟಾನ ಬೆಂಗಳೂರು ಪ್ರತಿ ವರ್ಷದಂತೆ ಈ ಬಾರಿಯು  ವಿಶ್ವ ಕುಂದಾಪುರ ಕನ್ನಡ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರ ಕನ್ನಡಿಗರಿಗೆ ಊರಿನ ಅನುಭವದಲ್ಲಿ ಮಿಂದು ಖುಷಿ ಪಟ್ಟರು. ಒಟ್ಟಿನಲ್ಲಿ  ಕುಂದಾಪುರ ಭಾಷೆ, ಸಂಸ್ಕ್ರತಿ ವೈಭವ ನೆರೆದವರನ್ನ ಸಂಸ್ಕ್ರತಿಯ ಕಡಲಲ್ಲಿ ಮಿಂದೇಳಿಸಿದಂತು ಸುಳ್ಳಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.