ಸೇವಾ ನ್ಯೂನ್ಯತೆ ಎಸಗಿದ ಲಕ್ಷ್ಮೀ ಗೋಲ್ಡ್ ಪ್ಯಾಲೇಸಿಗೆ ದಂಡ..!
ಸೇವಾ ನ್ಯೂನ್ಯತೆ ಎಸಗಿದ ಲಕ್ಷ್ಮೀ ಗೋಲ್ಡ್ ಪ್ಯಾಲೇಸಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡವನ್ನು ವಿಧಿಸಿದೆ.
ಧಾರವಾಡ: ಸೇವಾ ನ್ಯೂನ್ಯತೆ ಎಸಗಿದ ಲಕ್ಷ್ಮೀ ಗೋಲ್ಡ್ ಪ್ಯಾಲೇಸಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡವನ್ನು ವಿಧಿಸಿದೆ.
ಹುಬ್ಬಳ್ಳಿ ನಗರದ ನಿವಾಸಿಯಾದ ಬಾಳಕೃಷ್ಣ ಇಜಂತಕರವರು ಹೊಸ ಯೋಜನೆಯಡಿ ಸೆಪ್ಟೆಂಬರ್ 15, 2019 ರಿಂದ ಅಕ್ಟೋಬರ್ 6, 2020 ರವರೆಗೆ ಒಟ್ಟು 19 ಕಂತುಗಳಲ್ಲಿ ರೂ.1,56,000/- ಕಟ್ಟಿದ್ದರೂ ಸದರಿ ಹಣಕ್ಕೆ ಸಮಾನಾಂತರವಾಗಿ ಒಟ್ಟು 45,709 ಗ್ರಾಂ. ಬಂಗಾರವನ್ನು ಯೋಜನಾ ಅವಧಿ ಮುಕ್ತಾಯವಾದರೂ ಯೋಜನೆಯ ನಿಯಮಾನುಸಾರ ತನಗೆ ಹುಬ್ಬಳ್ಳಿಯ ಲಕ್ಷ್ಮೀ ಗೋಲ್ಡ್ ಪ್ಯಾಲೇಸರವರು ಬಂಗಾರ ಹಿಂದಿರುಗಿಸದೇ ಸತಾಯಿಸಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಈ ದೂರನ್ನು ಸಲ್ಲಿಸಿದ್ದರು.ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿಆತ್ಮಹತ್ಯೆ: ತಾಯಿ ಶವದ ಮುಂದೆ ಮಕ್ಕಳ ಕಣ್ಣೀರು
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಸದಸ್ಯರು ಯೋಜನೆಯ ಒಪ್ಪಂದದಂತೆ ದೂರುದಾರರಿಂದ ಹಣ ಪಡೆದು ಅದಕ್ಕೆ ಸಮಾನಾಂತರ ಮೌಲ್ಯದ ಬಂಗಾರ ಕೊಡದೇ ಲಕ್ಷ್ಮೀ ಗೋಲ್ಡ್ ಪ್ಯಾಲೇಸರವರು ದೂರುದಾರನಾದ ತನ್ನ ಗ್ರಾಹಕನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿ ಅಗತ್ಯವಿರುವ ಹೆಚ್ಚಿನ ಹಣ ಪಡೆದು ಫಿರ್ಯಾದಿದಾರರಿಗೆ 45,709 ಗ್ರಾಂ. ತೂಕದ 24 ಕ್ಯಾರೇಟನ ಚಿನ್ನ ನೀಡುವಂತೆ ಹಾಗೂ ಸೇವಾ ನ್ಯೂನ್ಯತೆ ಎಸಗಿದ್ದಕ್ಕಾಗಿ ಫಿರ್ಯಾದಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ 25 ಸಾವಿರ ಪರಿಹಾರ ಹಾಗೂ 10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡಬೇಕು ಎಂದು ತೀರ್ಪು ನೀಡಿ ಆದೇಶಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.