“ನಾನು ಇಂಡಿಯಾದ ಮುಸ್ಲಿಂ ಹೊರತು ಚೀನಾದ ಮುಸ್ಲಿಂ ಅಲ್ಲ”

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ದೇಶದಲ್ಲಿ ಮುಸ್ಲಿಮರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Last Updated : Oct 13, 2022, 06:26 PM IST
  • 'ಇದು ಹಿಂದೂಸ್ತಾನ್. ಇದು ಎಲ್ಲರಿಗೂ ಸೇರಿದೆ'
“ನಾನು ಇಂಡಿಯಾದ ಮುಸ್ಲಿಂ ಹೊರತು ಚೀನಾದ ಮುಸ್ಲಿಂ ಅಲ್ಲ” title=

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ದೇಶದಲ್ಲಿ ಮುಸ್ಲಿಮರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

"ನಾವು ನಿಮ್ಮೊಂದಿಗಿದ್ದೇವೆ.ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾವು ದೇಶವನ್ನು ಒಂದಾಗಿ ಇಡಬೇಕು...ನಾನು ಮುಸ್ಲಿಂ, ಆದರೆ ಭಾರತೀಯ ಮುಸ್ಲಿಂ. ನಾನು ಚೀನಾದ ಮುಸ್ಲಿಂ ಅಲ್ಲ" ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಬ್ದುಲ್ಲಾ ಹೇಳಿದರು.

ಕಾಂಗ್ರೆಸ್ ಪಕ್ಷ ಅಥವಾ ಎನ್‌ಸಿಪಿ, ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್ ಅವರ 75 ನೇ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ, ಗೀತರಚನೆಕಾರ ಜಾವೇದ್ ಅಖ್ತರ್ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿಆತ್ಮಹತ್ಯೆ: ತಾಯಿ ಶವದ ಮುಂದೆ ಮಕ್ಕಳ ಕಣ್ಣೀರು

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಬಿಜೆಪಿ ನಾಯಕರು ಒಂದು ಸಮುದಾಯದ ಸಂಪೂರ್ಣ ಬಹಿಷ್ಕಾರಕ್ಕೆ ಕರೆ ನೀಡುವ ದ್ವೇಷದ ಭಾಷಣಗಳನ್ನು ನೀಡಿದ ಕೆಲವೇ ದಿನಗಳಲ್ಲಿ  ಅಬ್ದುಲ್ಲಾ ಅವರ ಈ ಹೇಳಿಕೆ ಬಂದಿದೆ.

"ಎಲ್ಲರೂ ವಿಭಿನ್ನವಾಗಿರಬಹುದು. ಆದರೆ ನಾವು ಒಟ್ಟಾಗಿ ಈ ದೇಶವನ್ನು ಕಟ್ಟಬಹುದು. ಅದನ್ನು ಸ್ನೇಹ ಎಂದು ಕರೆಯಲಾಗುತ್ತದೆ. ಧರ್ಮಗಳು ಒಬ್ಬರನ್ನೊಬ್ಬರು ದ್ವೇಷಿಸಲು ಜನರಿಗೆ ಕಲಿಸುವುದಿಲ್ಲ ... ಇದು ಹಿಂದೂಸ್ತಾನ್. ಇದು ಎಲ್ಲರಿಗೂ ಸೇರಿದೆ" ಎಂದು ಅಬ್ದುಲ್ಲಾ ಹೇಳಿದರು.

ಇದನ್ನೂ ಓದಿ: ಇಟಲಿ, ಚೀನಾ ಮಾತ್ರ ನೋಡಿದ್ದ ರಾಹುಲ್ ಗಾಂಧಿಗೆ ಭಾರತ ಹೇಗಿದೆ ಎಂದು ನೋಡುವ ಅಗತ್ಯವಿದೆ: ಕಟೀಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News