ಬೆಂಗಳೂರು : ತುರ್ತು ಸಂದರ್ಭಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ 'ಆಕ್ಸಿಬಸ್' ಸೇವೆಗೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

'ಆಕ್ಸಿಬಸ್' (OxyBus service)ಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ತಾತ್ಕಾಲಿಕವಾಗಿ ಆಕ್ಸಿಬಸ್ ಗಳು 8 ರೋಗಿಗಳಿಗೆ ನೆರವಾಗಲಿದೆ. ಅಂತಹ 20 ಬಸ್ ಗಳನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳ ಬಳಿ ಇರಿಸಲಾಗುವುದು ಅಲ್ಲದೆ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಬಸ್ ಗಳನ್ನು ಇರಿಸಲಾಗುವುದು ಎಂದು ಹೇಳಿದ್ದಾರೆ. 


ಇದನ್ನೂ ಓದಿ : Indira Canteen : ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಊಟ..! 


ಗಂಭೀರ ರೋಗಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ದಾರಿ ಮಾಡಿಕೊಡಿ ಅನಗತ್ಯವಾಗಿ ಆಸ್ಪತ್ರೆಗಳಲ್ಲಿ ಉಳಿದುಕೊಳ್ಳಬೇಡಿ ಕೋವಿಡ್ ರೋಗಿಗಳು ಮನೆಗೆ ಹೋಗಿ ಎಂದು ಸಿಎಂ(BS Yediyurappa) ಮನವಿ ಮಾಡಿದ್ದಾರೆ.


Oxygen Express Train : ಬೆಂಗಳೂರು ತಲುಪಿದ ಕೇಂದ್ರದ 120 ಟನ್ ಆಕ್ಸಿಜನ್ ಹೊತ್ತ ವಿಶೇಷ ರೈಲು..!


332 ರೋಗಿಗಳು(Covid-19 Patients) 30 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾದ ಅವಶ್ಯಕತೆ ಏನು? ಆಸ್ಪತ್ರೆಯಲ್ಲಿ 503 ರೋಗಿಗಳು 20 ದಿನಗಳಿಂದ ಇದ್ದಾರೆ. ಈ ರೀತಿ ಅನಗತ್ಯವಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡಿರುವ ಜನರು ಮನೆಗೆ ಮರಳಬೇಕು" ಎಂದು ಅವರು ಹೇಳಿದರು.


ಇದನ್ನೂ ಓದಿ : Ravi D Channannavar : SP ರವಿ ಡಿ ಚೆನ್ನಣ್ಣನವರಿಗೆ ಕೊರೋನಾ ಪಾಸಿಟಿವ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.