ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ರವಿ ಡಿ ಚೆನ್ನಣ್ಣನವರ್(Ravi D Channannavar), ನನಗೂ ಕೊರೋನಾ ಪಾಸಿಟಿವ್ ಆಗಿದೆ. ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸ್ಟೇ ಹೋಂ, ಸ್ಟೇ ಸೇಫ್ ಎಂದು ಬರೆದುಕೊಂಡಿದ್ದಾರೆ.
Tested positive,we take risk to safeguard you all. 🙏#StayHomeStaySafe
— Ravi D Channannavar (@DCPraviIPS) May 10, 2021
ಇದನ್ನೂ ಓದಿ : First Oxygen Express Train : ರಾಜ್ಯಕ್ಕೆ ಬಂದ 6 ಕಂಟೇನರ್ ಆಕ್ಸಿಜನ್!
ಹೀಗೆ ಟ್ವಿಟ್ ನಲ್ಲಿ ಕೊರೋನಾ ಪಾಸಿಟಿವ್(Covid19 Positive) ಎಂಬುದಾಗಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಡಿ ಚೆನ್ನಣ್ಣನವರ್ ಗೆ ಮಾಜಿ ಸಚಿವ ಎಂ ಬಿ ಪಾಟೀಲ್ ಸೇರಿದಂತೆ ಅನೇಕರು ಬೇಗ ಗುಣಮುಖರಾಗಿ ಕೊರೋನಾ ಗೆದ್ದು ಬನ್ನಿ ಎಂಬುದಾಗಿ ಹಾರೈಸಿದ್ದಾರೆ.
ಇದನ್ನೂ ಓದಿ : Heavy Rain : ರಾಜ್ಯದ ಹಲವೆಡೆ ಇಂದಿನಿಂದ 3 ದಿನ ಭಾರೀ ಮಳೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.