ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ ಬೇಬಿ ಬೆಟ್ಟದಲ್ಲಿರುವ ಶ್ರೀ ರಾಮಯೋಗೀಶ್ವರ ಮಠದ ಮುಂಭಾಗ ಕಳೆದ ರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 23-06-2022 Today Vegetable Price: ಇಂದಿನ ತರಕಾರಿ-ಹಣ್ಣುಗಳ ದರ ಹೀಗಿದೆ


ಮಠಕ್ಕೆ ನುಗ್ಗಿದ ಚಿರತೆ ನಾಯಿಮರಿಯನ್ನ ಕಚ್ಚಿಕೊಂಡ ಹೋಗಿದೆ. ಈ ದೃಶ್ಯಾವಳಿಗಳು ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಮಠದ ಆವರಣದಲ್ಲಿದ್ದ ನಾಯಿ ಸತ್ತಿರುವುದನ್ನು ನೋಡಿ, ಚಿರತೆ ಬಂದಿರಬಹುದು ಎಂಬ ಅನುಮಾನದಿಂದ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಕಳೆದ ಮಧ್ಯರಾತ್ರಿ ಮಠದ ಆವರಣದಲ್ಲಿ ಚಿರತೆ ಬಂದು ಹೋಗಿರುವ ದೃಶ್ಯ ಸೆರೆಯಾಗಿದೆ. 


ಈಗಾಗಲೇ ಚಿರತೆ ಆರೇಳು ಬಾರಿ ದಾಳಿ ನಡೆಸಿದ್ದು, ಈ ಬಗ್ಗೆ ಅರಣ್ಯ ಇಲಾಖೆ ತಲೆ ಕೆಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಚಿರತೆ ಪ್ರತ್ಯಕ್ಷಗೊಂಡಿರುವ ಗ್ರಾಮಸ್ಥರಲ್ಲಿ ಭೀತಿ ಹುಟ್ಟುಹಾಕಿದೆ. 


ಇದನ್ನೂ ಓದಿ: Weather Update: ಮುಂದಿನ 3 ದಿನ ಈ ಭಾಗಗಳಲ್ಲಿ ಭಾರೀ ಮಳೆ ಎಚ್ಚರಿಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.