ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಹಾವಳಿ:  ಕೆಆರ್‌ಎಸ್ ನ ಬೃಂದಾವನ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಪದೇ ಪದೇ ಪ್ರತ್ಯಕ್ಷವಾಗುತ್ತಿರುವ ಚಿರತೆಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಬೃಂದಾವನದಲ್ಲಿ ಚಿರತೆ ಕಾಣಿಸಿ ಕೊಂಡಿದ್ದರಿಂದ ವಿಶ್ವ ಪ್ರಸಿದ್ದ ಬೃಂದಾವನಕ್ಕೆ ಪ್ರವೇಶ ನಿರ್ಬಂಧಿಸಲಾಗಿದ್ದು  ಕೆಆರ್‌ಎಸ್ ಪ್ರವಾಸಿಗರಿಲ್ಲದೆ ಭಣಗುಡುತ್ತಿದೆ. ಇದಲ್ಲದೆ, ಕೆಆರ್‌ಎಸ್ ಸೇರಿದಂತೆ ಸುತ್ತಮುತ್ತಲ ನಿವಾಸಿಗಳಿಗೆ ಬೆಳಿಗ್ಗೆ, ಸಂಜೆ ವೇಳೆಯಲ್ಲಿ ವಾಕಿಂಗ್ ಗೆ ತೆರಳದಂತೆ   ಗ್ರಾಮ ಪಂಚಾಯ್ತಿ ಧ್ವನಿ ವರ್ಧಕದ ಮೂಲಕ ಸೂಚನೆ ನೀಡಿ ಜನರಲ್ಲಿ ಎಚ್ಚರಿಕೆ ನೀಡುತ್ತಿದೆ. 


COMMERCIAL BREAK
SCROLL TO CONTINUE READING

ಚಿರತೆ ಸೆರೆ ಕಾರ್ಯಾಚರಣೆ ಮತ್ತಷ್ಟು ಚುರುಕು:
ಇನ್ನು ಚಿರತೆ ಕಾಣಿಸಿಕೊಂಡು  15-20 ದಿನಗಳಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಚಿರತೆ ಸೆರೆ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಲಾಗಿದೆ. ಬೃಂದಾವನ ಸೇರಿದಂತೆ ಸುಮಾರು 4 ಕಡೆ ಬೋನ್ ಇಟ್ಟಿದ್ದಿರು ಚಾಲಾಕಿ ಚಿರತೆ ಮಾತ್ರ ಸೇರೆಯಾಗಿಲ್ಲ. ಇದರಿಂದಾಗಿ ಅರಣ್ಯ ಇಲಾಖೆಯವರು  ಬೃಂದಾನದಲ್ಲಿನ ಮರಗಳಿಗೆ ಟ್ರ್ಯಾಪ್ ಕ್ಯಾಮರ ಅಳವಡಿಕೆಗೆ ಮುಂದಾಗಿದ್ದಾಗಿದ್ದು ಬಹುತೇಕ ಮರಗಳಿಗೆ ಟ್ರ್ಯಾಪ್ ಕ್ಯಾಮರ ಅಳವಡಿಸಿ ಚಿರತೆಯ ಚಲನವಲನದ ಮೇಲೆ ಕಣ್ಣಿಟ್ಟು ಆ ಸ್ಥಳಗಳಲ್ಲಿ‌ ಬೋನು ಇರಿಸಲು ಮುಂದಾಗಿದೆ.


ಇದನ್ನೂ ಓದಿ- ಹುಬ್ಬಳ್ಳಿ ಈದ್ಗಾ ಮೈದಾನ ಇನ್ನು ರಾಣಿ ಚೆನ್ನಮ್ಮ ಮೈದಾನ


ಇದಲ್ಲದೆ ಕಾವೇರಿ ನೀರಾವರಿ ನಿಗಮ ಕೂಡ ಬೃಂದಾವನ ಸೇರಿದಂತೆ ಕೆಆರ್‌ಎಸ್ ಡ್ಯಾಂ ಬಳಿಯಲ್ಲಿ ಇದ್ದ ಕುರುಚಲು ಗಿಡದ ಪೊದೆಗಳನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಜೆಸಿಬಿ ಯಂತ್ರದ ಮೂಲಕ ಪೊದೆ ಹಾಗೂ ಕುರುಚಲು ಹುಲ್ಲುಗಾವಲಿನ ಪ್ರದೇಶಗಳ ಸ್ವಚ್ಚತೆ ಕಾರ್ಯ ನಡೆಸುತ್ತಿದೆ. ಈ ಕುರಿತಾಗಿ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡ ಬೇಗನೆ ಚಿರತೆ ಸೆರೆ ಹಿಡಿದು ಪ್ರವಾಸಿಗರ ಆತಂಕ ನಿವಾರಿಸುವಂತೆ ಕಾ.ನೀ.ನಿಗಮಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಡ್ಯಾಂ ಬಳಿ ಚಿರತೆ ಕುಟುಂಬವೇ ವಾಸವಾಗಿರುವ ಆತಂಕ ವ್ಯಕ್ತಪಡಿಸಿದ್ದು, ಈ ಚಿರತೆ ಹಾವಳಿಯ ಕುರಿತಾಗಿ ಸದನದಲ್ಲಿ ಮಾತನಾಡುವುದಾಗಿ ತಿಳಿಸಿದ್ದಾರೆ. 


ಇದನ್ನೂ ಓದಿ- ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯ ಅಡ್ಮಿಟ್ ಕಾರ್ಡ್‌ನಲ್ಲಿ ಸನ್ನಿ ಲಿಯೋನ್ ಫೋಟೋ


ಒಟ್ಟಾರೆ ವಿಶ್ವ ಪ್ರಸಿದ್ದ ಬೃಂದಾವನದಲ್ಲಿ ಚಿರತೆ ಹಾವಳಿಯಿಂದ ಇಲ್ಲಿನ ಸ್ಥಳೀಯರು ನಿತ್ಯ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇದಲ್ಲದೆ, ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರಿರುವುದರಿಂದ ಬೃಂದಾವನ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದೆ‌. ಅರಣ್ಯ ಇಲಾಖೆಯವರು ಕ್ಯೂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರೂ ಆ ಚಾಲಾಕಿ ಚಿರತೆ ಸಿಗದೆ ಇರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.