ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ 75 ವರ್ಷ ಆಗಿದೆ,ನಿವೃತ್ತಿ ತಗೊಂಡು, ಬೇರೆಯವರಿಗೆ ಅವಕಾಶ ಮಾಡಿಕೊಡೋದು ಬಿಟ್ಟು, ನಾನೇ ಅಂತಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ ಹೇಳಿದರು.


COMMERCIAL BREAK
SCROLL TO CONTINUE READING

ವಿಕಾಸ ಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತಾನಾಡಿ, ಮಾನ ಮರ್ಯಾದೆ, ಭಂಢತನ ಕುರಿತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಅಶ್ವಥ್ ನಾರಾಯಣ್, ಬಂಡತನ, ಜಿಹಾದಿಕರಣ ಮತಬ್ಯಾಂಕ್ ರಾಜಕಾರಣ ಅಂದ್ರೆ ಸಿದ್ದರಾಮಯ್ಯ. ಸಿದ್ದರಾಮಯ್ಯ ನವರಿಗೆ ಮತ ಬ್ಯಾಂಕ್ ರಾಜಕಾರಣ ಮಾಡೋದು ಬಿಟ್ರೆ ಬೇರೆ ಏನು ಗೊತ್ತಿಲ್ಲ ಎಂದು ತೀವ್ರ ವಾಗ್ಧಾಳಿ ನಡೆಸಿದರು.


ಕಾಂಗ್ರೆಸ್ ಗೆ ನಾಯಕತ್ವವೇ ಇಲ್ಲ, ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೂಡ ವಯಸ್ಸಾಗಿದೆ.  75 ವರ್ಷ ಆದವರು ರಾಜಕೀಯದಿಂದ ನಿವೃತ್ತಿ ಆಗಲಿ. ಅವರ ರಾಷ್ಟ್ರೀಯ ಅಧ್ಯಕ್ಷರು ಕೂಡ 75 ವರ್ಷ ಆದವರು ಎಲ್ಲರೂ ರಾಜಕೀಯ ನಿವೃತ್ತಿ ಪಡೆಯಬೇಕು ಎಂದರು.


ಇದನ್ನೂ ಓದಿ- Siddaramiah Biopic: ತೆರೆ ಮೇಲೆ ಸಿದ್ದರಾಮಯ್ಯ ಬಯೋಪಿಕ್: ಸಿದ್ದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ತಮಿಳಿನ ಈ ನಟ!


ಬಿಜೆಪಿ ಗೆ ರೌಡಿಗಳ ಸೇರ್ಪಡೆ :
ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ರೌಡಿಗಳ ಸೇರ್ಪಡೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ ನಾರಾಯಣ, ಸೈಲೆಂಟ್ ಸುನೀಲ್ ಕಾರ್ಯಕ್ರಮಕ್ಕೂ ಪಾರ್ಟಿಗೂ ಸಂಬಂಧ ಇಲ್ಲ .ಸುನೀಲ್ ರಕ್ತದಾನ ಶಿಬಿರ ಮಾಡಿದ್ರು ಇಬ್ಬರು ಪ್ರತಿನಿಧಿಗಳು ಹೋಗಿದ್ರು, ನಾವು ಕಾನೂನಿಗೆ ಬೆಲೆ ಕೊಡ್ತೇವೆ. ಪಕ್ಷದ ಅಧ್ಯಕ್ಷರು ಕೂಡ ಇಂದು  ಹೇಳಿದ್ದಾರೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಪೊಲೀಸರ ಬಳಿ ಕೇಳಿ.‌‌ ಕಾನೂನು ಚೌಕಟ್ಟನ್ನು ನಾವು ಪರಿಪಾಲನೆ ಮಾಡ್ತೇವೆ ಎಂದರು.


ಮಂಡ್ಯದಲ್ಲಿ ರಕ್ತ ಹೀರುವ ನಾಯಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಆ ಬಗ್ಗೆ ಹೇಳಿದ್ದೇನೆ, ಅರ್ಥ ಆಗಿರೋರಿಗೆ ಅರ್ಥ ಆಗಿದೆ ಬಿಡಿ ಎಂದರು.


ಇದನ್ನೂ ಓದಿ- ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ: ಸಿಎಂ ಬೊಮ್ಮಾಯಿ ತಿರುಗೇಟು


ಐಟಿಬಿಟಿ, ಉನ್ನತ ಶಿಕ್ಷಣ, ಕೌಶಾಲ್ಯಾಭಿವೃದ್ದಿ ಇಲಾಖೆಗಳಿಂದ ಸುಶಾಸನ ಮಾಸ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಡಿಸೆಂಬರ್ ತಿಂಗಳನ್ನು ಗುಡ್ ಗವರ್ನರ್ಸ್ ಆಗಿ ಮಾಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ನಾಳೆ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಗಳು ಚಾಲನೆ ಕೊಡ್ತಾರೆ. ಏನೇ ಕುಂದುಕೊರತೆಗಳು ಇದ್ರೂ ನಿರ್ವಹಣೆ ಮಾಡಲು ಬೇಕಾದ ವ್ಯವಸ್ಥೆ ಇದಾಗಿದೆ. ಪಾರದರ್ಶಕವಾಗಿ ಮಾಹಿತಿ ಕೊರತೆ ಸರಿಪಡಿಸಲು ಸೂಚಿಸಲು ಕ್ರಮ ಸೇರಿದಂತೆ ಇಲಾಖೆಗಳ ಎಲ್ಲ ಮಾಹಿತಿ ಗಳನ್ನು ಅಪ್ಡೆಟ್ ಮಾಡುವ ಕೆಲಸ ಆಗುತ್ತದೆ. ಪಿಂಚಣಿ ಅದಾಲತ್ ಮಾಡುವ ವ್ಯವಸ್ಥೆ ಕೂಡ ಆಗುತ್ತದೆ. ಯಾವುದೇ ಕಡತ ಇದ್ರೂ ಅದನ್ನು ವಿಲೇವಾರಿ ಮಾಡುವ ಕೆಲಸ ಆಗುತ್ತದೆ ಎಂದವರು ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.