ಮದ್ಯ ಪ್ರಿಯರಿಗೆ ಶಾಕ್: ಇಂದಿನಿಂದ ಮೇ 19ರವರೆಗೆ ಸಿಗಲ್ಲ ಆಲ್ಕೋಹಾಲ್! ಕಾರಣ ಏನು ಗೊತ್ತಾ?
ಇಲ್ಲಿಯವರೆಗೆ ಕೆಎಸ್‌ಬಿಸಿಎಲ್‍ನಿಂದ ಮ್ಯಾನುವಲ್ ವ್ಯವಸ್ಥೆ ಮೂಲಕ ವೈನ್ ಮರ್ಚೆಂಟ್ಸ್ ಮತ್ತು ಬಾರ್ ಮಾಲೀಕರು ಮದ್ಯ ಖರೀದಿ ಮಾಡುತ್ತಿದ್ದರು. ಈಗ ಹೊಸದಾಗಿ ರೂಪಿಸಿರುವ ವೆಬ್‍ಸೈಟ್ ಓಪನ್ ಮಾಡಿ, ಅದರಲ್ಲಿ ಮಾಲೀಕರು ಲಾಗಿನ್ ಆಗಿ ತಮಗೆ ಬೇಕಾದ ಮದ್ಯಗಳನ್ನು ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ರವಾನೆ ಮಾಡಬೇಕು.
ಕೆಎಸ್‍ಬಿಸಿಎಲ್ ಹೊಸ ನೀತಿಯಿಂದ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ ಮದ್ಯ ವರ್ತಕರು ಇಂದಿನಿಂದ ಮೇ 19ರ ವರೆಗೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ವೀಕೆಂಡ್‌ನಲ್ಲಿ ಮದ್ಯ ಪ್ರಿಯರಿಗೆ ಎಣ್ಣೆ ಸಿಗಲ್ಲ. ಮದ್ಯ ಖರೀದಿ ಮಾಡುವ ವ್ಯವಸ್ಥೆ ಬದಲಾಗಿರುವುದರಿಂದ ನಮಗೆ ಬಹಳ ತೊಂದರೆಯಾಗಿದೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿದೆ.
ಇದನ್ನು ಓದಿ: ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ: ದೇಶದಲ್ಲಿ 3,545 ಹೊಸ ಕೊರೊನಾ ಪ್ರಕರಣ ದಾಖಲು
ಇಲ್ಲಿಯವರೆಗೆ ಕೆಎಸ್‌ಬಿಸಿಎಲ್‍ನಿಂದ ಮ್ಯಾನುವಲ್ ವ್ಯವಸ್ಥೆ ಮೂಲಕ ವೈನ್ ಮರ್ಚೆಂಟ್ಸ್ ಮತ್ತು ಬಾರ್ ಮಾಲೀಕರು ಮದ್ಯ ಖರೀದಿ ಮಾಡುತ್ತಿದ್ದರು. ಈಗ ಹೊಸದಾಗಿ ರೂಪಿಸಿರುವ ವೆಬ್‍ಸೈಟ್ ಓಪನ್ ಮಾಡಿ, ಅದರಲ್ಲಿ ಮಾಲೀಕರು ಲಾಗಿನ್ ಆಗಿ ತಮಗೆ ಬೇಕಾದ ಮದ್ಯಗಳನ್ನು ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ಹಣ ರವಾನೆ ಮಾಡಬೇಕು. ರಾತ್ರಿ 9 ರಿಂದ ಬೆಳಗ್ಗೆ 9ರವರೆಗೆ ಲಿಸ್ಟ್ ಫಿಲ್ ಮಾಡಿ, ಗೋದಾಮಿನಲ್ಲಿ ದಾಸ್ತಾನಿರುವ ಮದ್ಯಗಳನ್ನು ಮಾತ್ರ ಪಡೆದುಕೊಳ್ಳಬೇಕು. ಈ ನೂತನ ಪದ್ಧತಿ ಬಾರ್ ಮತ್ತು ವೈನ್ ವ್ಯಾಪಾರಿಗಳಿಗೆ ಸಮಸ್ಯೆ ನೀಡುತ್ತಿದೆ. ಹೀಗಾಗಿ ಈ ಪದ್ಧತಿಯನ್ನು ವಿರೋಧಿಸಿ ಮದ್ಯ ವರ್ತಕರು ಮುಷ್ಕರ ಮಾಡುತ್ತಿದ್ದಾರೆ.
ಶ್ರೀಮಂತ ಬಾರ್ ಮಾಲೀಕರು ಅಥವಾ ವೈನ್ ಶಾಪ್ ಮಾಲೀಕರು ತಮಗೆ ಬೇಕಾಗಿರುವಷ್ಟು ಮದ್ಯ ಖರೀದಿ ಮಾಡುತ್ತಾರೆ. ಆದರೆ ಸಣ್ಣ ಮದ್ಯ ಮಾರಾಟಗಾರರಿಗೆ ಈ ವ್ಯವಸ್ಥೆಸಮಸ್ಯೆ ನೀಡುತ್ತಿದೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಶೇ.80 ಜನರಿಗೆ ಕಳೆದ ಒಂದು ತಿಂಗಳಿನಿಂದ ಈ ಪದ್ಧತಿ ಸಮಸ್ಯೆ ನೀಡಿದೆ. ಈ ಸಮಸ್ಯೆ ಬಗೆಹರಿಸುವುದಾಗಿ ಆಯುಕ್ತರು ಹೇಳಿದ್ದಾರೆ. ಆದರೆ ಇನ್ನೂ ಪರಿಹಾರ ಲಭಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿ: GT vs MI: ಇಂದು ʼಅಗ್ರʼ ಗುಜರಾತ್ ಟೈಟಾನ್ಸ್‌ಗೆ ಮುಂಬೈ ಮುಖಾಮುಖಿ
ಮುಷ್ಕರ ನಡೆಯುವ ಜಿಲ್ಲೆ ಮತ್ತು ದಿನಾಂಕ:
ಮೇ 6 : ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್
ಮೇ 10 : ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಬೆಳಗಾವಿ, ವಿಜಯಪುರ
ಮೇ 12 : ಮೈಸೂರು, ಹಾಸನ, ಚಿಕ್ಕಮಗಳೂರು, ಉತ್ತರಕನ್ನಡ, ಉಡುಪಿ, ಹಾಸನ, ಮಂಡ್ಯ, ಕೊಡಗು, ಮಂಗಳೂರು, ಶಿವಮೊಗ್ಗ
ಮೇ 17 : ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ
ಮೇ 19 : ಬೆಂಗಳೂರು ನಗರ ವಿಭಾಗದ ಕೆಎಸ್‍ಬಿಸಿಎಲ್ ಡಿಪೋಗಳಲ್ಲಿ ಮದ್ಯ ಖರೀದಿ ಮಾಡದಿರಲು ನಿರ್ಧಾರ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.