Darshan Arrest Live Updates: ಪತಿ ನೋಡಲು ಪೊಲೀಸ್ ಠಾಣೆಗೆ ಬಂದ ವಿಜಯಲಕ್ಷ್ಮಿ ದರ್ಶನ್..!
ನಟ ದರ್ಶನ್ ಅವರ ಮ್ಯಾನೇಜರ್ ಶ್ರೀಧರ್ ಅವರು ಕೆಲಸ ಮಾಡುತ್ತಿದ್ದ ಬೆಂಗಳೂರು ಸಮೀಪದ ಬಗ್ಗನದೊಡ್ಡಿಯ ದುರ್ಗಾ ಫಾರ್ಮ್‌ಹೌಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಟ ದರ್ಶನ್ ಅವರ ಮ್ಯಾನೇಜರ್ ಶ್ರೀಧರ್ ಅವರು ಕೆಲಸ ಮಾಡುತ್ತಿದ್ದ ಬೆಂಗಳೂರು ಸಮೀಪದ ಬಗ್ಗನದೊಡ್ಡಿಯ ದುರ್ಗಾ ಫಾರ್ಮ್‌ಹೌಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
Latest Updates
Darshan case : ಪತಿ ನೋಡಲು ಪೊಲೀಸ್ ಠಾಣೆಗೆ ಬಂದ ವಿಜಯಲಕ್ಷ್ಮಿ ದರ್ಶನ್..!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕೊಳ್ಳಗಾಗಿರುವ ನಟ ದರ್ಶನ್ ಅವರನ್ನು ನೋಡಲು ಅವರ ಪತ್ನಿ ವಿಜಯಲಕ್ಷ್ಮಿಯವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಇಷ್ಟು ದಿನ ಘಟನೆ ಕುರಿತು ಮೌನವಾಗಿದ್ದ ವಿಜಯಲಕ್ಷ್ಮಿಯವರು ಇದೀಗ ದರ್ಶನ್ ಅವರನ್ನು ನೋಡಲು ಠಾಣೆಗೆ ಆಗಮಿಸಿದ್ದಾರೆ..
ಪುಡಾರಿ ಅಭಿಮಾನಿಗಳಿಂದ ದರ್ಶನ್ ವಿರುದ್ಧವಾಗಿ ಮಾತಾಡೋರಿಗೆ ಬಹಿರಂಗವಾಗಿ ವಾರ್ನಿಂಗ್
ದರ್ಶನ್ ವಿರುದ್ಧ ಮಾತಾಡೊರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಾರೋಷವಾಗಿ ಪುಂಡ ಅಭಿಮಾನಿಗಳು ವಾರ್ನಿಂಗ್ ನೀಡುತ್ತಿದ್ದಾರೆ ಎನ್ನಲಾಗಿದೆ.ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ಬಿಗ್ ಬಾಸ್ ಪ್ರಥಮ್ ಗೆ ನೀನೇನು ಸುಪ್ರೀಂ ಹೀರೋನಾ ಪ್ರಥಮ್..? ನಿಂಗೆ ಐತೆ ಮಗನೆ ಬೇಲ್ ಆಗ್ತಿದ್ದಂತೆ ಎಲ್ಲಾ ಊರು ಬಿಡಬೇಕು ಅಂತ ಧಮ್ಕಿ ಹಾಕಿದ್ದಾರೆ
ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಈಗ ಬಹುತೇಕ ಕ್ಲೈಮ್ಯಾಕ್ಸ್ ಘಟ್ಟ ತಲುಪಿದ್ದು ರಿಮ್ಯಾಂಡ್ ಅಪ್ಲಿಕೇಷನ್ನಲ್ಲಿ ದರ್ಶನ್ ಪಾತ್ರದ ಬಗ್ಗೆ ಉಲ್ಲೇಖಿಸಲಾಗಿದೆ.ಕಿಡ್ನಾಪ್ನಿಂದ ಕೊಲೆ ಬಳಿಕ ಶವ ವಿಲೇವಾರಿವರೆಗೂ ನಟನ ಕೈವಾಡ ಎಂದು ತಿಳಿದು ಬಂದಿದೆ.ಈ ಕುರಿತಾಗಿ ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಸ್ವ-ಇಚ್ಚಾ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಕೃತ್ಯದಲ್ಲಿ ಎಲ್ಲಿಯೂ ತನ್ನ ಹೆಸರು ಬರದಂತೆ ಮಾಡಲು ದರ್ಶನ್ ಸೂಚಿಸಿದ್ದ ಎನ್ನಲಾಗಿದೆ,
A2 ದರ್ಶನ್ ಪಾತ್ರವೇನು?
ಪಾತ್ರ1
ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿ ಕಿಡ್ನಾಪ್ಪಾತ್ರ2
ಆರೋಪಿಗಳೆಲ್ಲರೂ ಸೇರಿ ರೇಣುಕಾಸ್ವಾಮಿ ಹತ್ಯೆಪಾತ್ರ3
ಶವ ವಿಲೇವಾರಿ ಮಾಡಲು ಸೂಚಿಸಿದ್ದ ನಟ ದರ್ಶನ್ಪಾತ್ರ4
ಆರೋಪಿ ಪ್ರದೋಶ್ಗೆ ₹30 ಲಕ್ಷ ಹಣ ನೀಡಿದ್ದ ದರ್ಶನ್ಪಾತ್ರ5
ಮೂವರು ಆರೋಪಿಗಳಿಗೆ ಸರೆಂಡರ್ ಆಗಲು ಸೂಚನೆಪಾತ್ರ6
ನನ್ನ ಹೆಸರು ಎಲ್ಲೂ ಬರಬಾರದು ಎಂದು ಸರೆಂಡರ್ ಆಗಲು ಸೂಚನೆ
[ರೇಣುಕಾಸ್ವಾಮಿ ಹತ್ಯೆ ನಂತರ ಒಂದೇ ಬಟ್ಟೆಯಲ್ಲಿ ಮೂರು ದಿನ ಆರೋಪಿ ನಿಖಿಲ್ ನಾಯಕ್ ಕಳೆದಿದ್ದರು ಎನ್ನಲಾಗಿದೆ.ಶವ ಬೀಸಾಕಿದ್ದಗಿನಿಂದ ಒಂದೇ ಬಟ್ಟೆ ಧರಿಸಿದ್ದ ಆರೋಪಿ ನಿಖಿಲ್ ನಾಯಕ್.
ಜೂನ್ ೮ ರಂದ ಆರ್ ಆರ್ ನಗರದ ಪಟ್ಟಣಗೆರೆಯಲ್ಲಿ ಹತ್ಯೆಯಾಗಿದ್ದ ರೇಣುಕಾಸ್ವಾಮಿ ಮೃತದೇಹವನ್ನ ಅದೇ ದಿನ ರಾತ್ರಿ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್ ಶವವನ್ನು ಸುಮ್ಮನಹಳ್ಳಿಯ ಮೋರಿ ಬಳಿ ಶವ ಎಸೆದಿದ್ರು..
ಮೃತ ರೇಣುಕಾಸ್ವಾಮಿಗೆ ಕಾಲಿನಿಂದ ಒದ್ದಿದ್ದ ನಟ ದರ್ಶನ್ ಅವರ ಶೂಗಳನ್ನು ವಶಕ್ಕೆ ಪಡೆದಿದ್ದಾರೆ.ಅಷ್ಟೇ ಎಫ್ ಎಸ್ ಎಲ್ ವರದಿಗೆ ಶೂ ಹಾಗೂ ಬಟ್ಟೆ ಕಳಿಸಿದ್ದರು.
ಕೊಲೆಯ ನಂತರ ಮೈಸೂರಿಗೆ ತೆರಳಿದ್ದ ನಟ ದರ್ಶನ್ ಅಲ್ಲಿ ಡಿಸನ್ ಬ್ಲೂ ಹೊಟೇಲ್ ನಲ್ಲಿ ತಂಗಿದ್ದರು ಎನ್ನಲಾಗಿದೆ. ಇದೆ ವೇಳೆ ಅವರು ಜಿಮ್ ನಲ್ಲಿ ಕಸರತ್ತು ಕೂಡ ಮಾಡಿದ್ದರು ಎಂದು ತಿಳಿದುಬಂದಿದೆ.ಕೊಲೆಯ ನಂತರ ಆರೋಪಿಗಳು ಸಾಕಷ್ಟು ಬಾರಿ ಕಾಲ್ ಮಾಡಿದ್ರು ಹಾಗಾಗಿ ಇಂದು ಮೈಸೂರಿಗೆ ಕರೆದೊಯ್ದು ಪೊಲೀಸರು ಸ್ಪಾಟ್ ಮಹಜರು ಮಾಡಲಿದ್ದಾರೆ.
Darshan Arrest Live Updates: ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣ : ಶವಪರೀಕ್ಷೆ ವರದಿಯಲ್ಲಿ ಕರೆಂಟ್ ಶಾಕ್ ಹಾಗೂ ಪ್ರಬಲ ಹೊಡೆತದಿಂದ ಮೂಳೆಗಳು ಮುರಿದು ಸಾವು ಎಂದು ತಿಳಿದುಬಂದಿದೆ