Karnataka Lok Sabha Election 2024 Phase 3 Live Updates: ರಾಜ್ಯದಲ್ಲಿ ಸಂಜೆ 5 ಗಂಟೆಯವರೆಗೆ ಶೇ 66.05% ರಷ್ಟು ಮತದಾನ

Tue, 07 May 2024-6:35 pm,

Lok Sabha Elections 2024: ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ.

Karnataka Lok Sabha Election 2024: ಲೋಕಸಭೆ ಚುನಾವಣೆ 2024 ರ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.  ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಚಿಕ್ಕೋಡಿ, ಬೆಳಗಾವಿ , ಶಿವಮೊಗ್ಗ, ರಾಯಚೂರು, ಬೀದರ್​, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಕಲಬುರಗಿ, ಉತ್ತರ ಕನ್ನಡ, ದಾವಣಗೆರೆ, ಹಾವೇರಿ, ಧಾರವಾಡ ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Latest Updates

  • ರಾಜ್ಯದಲ್ಲಿ ಸಂಜೆ 5 ಗಂಟೆಯವರೆಗೆ ಶೇ 66.05% ರಷ್ಟು ಮತದಾನ

    COMMERCIAL BREAK
    SCROLL TO CONTINUE READING

    ಕರ್ನಾಟಕ: 66.05%
    ಬಾಗಲಕೋಟೆ: 65.55%
    ಬಳ್ಳಾರಿ: 68.94%
    ಬೆಳಗಾವಿ: 65.67%
    ಬೀದರ್: 60.17%
    ಚಿಕ್ಕೋಡಿ: 72.75%
    ದಾವಣಗೆರೆ: 70.9%
    ಧಾರವಾಡ: 67.15%
    ಹಾವೇರಿ: 71.9%
    ಕಲಬುರಗಿ: 57.2%
    ಕೊಪ್ಪಳ: 66.05%
    ರಾಯಚೂರು: 59.48%
    ಶಿವಮೊಗ್ಗ: 72.07%
    ಉತ್ತರ ಕನ್ನಡ: 69.57%
    ವಿಜಯಪುರ: 60.95%

  • ಧಾರವಾಡದಲ್ಲಿ ಮಾಜಿ ಸಚಿವ ಹಾಗೂ ಶಾಸಕ ವಿನಯ ಕುಲಕರ್ಣಿ ಮತ ಚಲಾಯಿಸಿ ಮಾಧ್ಯಮಗಳ ಜೊತೆ ಮಾತನಾಡಿದರು.

    COMMERCIAL BREAK
    SCROLL TO CONTINUE READING

    ನಾಲ್ಕು ವರ್ಷಗಳ ಬಳಿಕ ಕೋರ್ಟ್ ನನಗೆ ಮತ ಹಾಕಲು ಅನುಮತಿ ಕೊಟ್ಟಿದೆ.ನನಗೆ ಒಂದು ಕಡೆ ಖುಷಿ ಇನ್ನೊಂದು ಕೊಡೆ ದುಖ: ಆಗಿದೆ. ಇದಕ್ಕಾಗಿ ನಾನು ನ್ಯಾಯಾಲಯಕ್ಕೆ ಧನ್ಯವಾದ ತಿಳಿಸುತ್ತೇನೆ.ವಿನೋದ ಅಸೂಟಿಗೆ ಮತ ಹಾಕಲು ನನಗೆ ಅವಕಾಶ ಸಿಕ್ಕಿದೆ ಹಾಗಾಗಿ ನಾನುಕಾರ್ಯಕರ್ತರು ಮಾಧ್ಯಮಗಳಿಗೆ ಧನ್ಯವಾದ ತಿಳಿಸುವೆ. ಇದುವರೆಗೆ ಸಾರ್ವಜನಿಕರಿಗೋಸ್ಕರ ಕೆಲಸ ಮಾಡಿದ್ದೇನೆ.ಕರ್ನಾಟಕದಲ್ಲಿ ನಾನು ಕ್ಷೇತ್ರಕ್ಕೆ‌ಬರದೆ ಇದ್ದರೂ ಜನರು ನನಗೆ ಆಯ್ಕೆ ಮಾಡಿದ್ದಾರೆ. ಈ ಭಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

     

  • ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ತಮ್ಮ 96 ವರ್ಷದ ಇಳಿ ವಯಸ್ಸಿನಲ್ಲಿ ಕೂಡ ಮರಿಮೊಮ್ಮಗಳೊಡನೆ ಮಸಬಿನಾಳ ಗ್ರಾಮದ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿ ಎಲ್ಲರಿಗೂ ಆದರ್ಶರಾದ ಸಿದ್ದವ್ವ ಡೊನೂರ ಎಂಬ ಹಿರಿಯ ಮತದಾರರು.

  • ರಾಯಚೂರು ಜಿಲ್ಲೆ ಅರಕೇರಾ ತಾಲ್ಲೂಕಿನ ಜಾಗಿರ ಜಾಡಲದಿನ್ನಿ ಗ್ರಾಮದಲ್ಲಿ ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿ ನಿರತನಾಗಿದ್ದ ಸಿಬ್ದಂದಿ ಸಾವನ್ನಪ್ಪಿದ್ದಾರೆ.ಮೃತಪಟ್ಟಿರುವ ವ್ಯಕ್ತಿಯನ್ನು ಬಸವರಾಜ್ ಜಗ್ಲಿ (53) ಎಂದು ತಿಳಿದುಬಂದಿದೆ.ಅವರು ಜಾಡಲದಿನ್ನಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.

  • ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ಮತದಾರರಾದ ಶ್ರೀಮತಿ ಗೂಜಿಬಾಯಿ, ಶ್ರೀಮತಿ ಚಂದುಬಾಯಿ ಅವರು ಸಾಂಪ್ರದಾಯಿಕ ಲಂಬಾಣಿ ಉಡುಪಿನಲ್ಲಿ ಬಂದು ಮತ ಚಲಾಯಿಸಿ ಸಂಭ್ರಮಿಸಿದರು.

  • ಸವದತ್ತಿ ತಾಲೂಕಿನ ಆಲದಕಟ್ಟಿ ಕೆ.ಎಂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಲದಕಟ್ಟಿ ಕೆ.ಎಂ ಗ್ರಾಮದ ನಿವಾಸಿ ಅಂತರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ ಬಾಸ್ಕೆಟ್ ಬಾಲ್ ಕ್ರೀಡಾಪಟು ಕುಮಾರಿ ಲಕ್ಷ್ಮೀ ರಾಯಪ್ಪ ರಾಯಣ್ಣವರ ಅವರು ಇಂದು ಸ್ವಗ್ರಾಮದಲ್ಲಿ ಮತ ಚಲಾಯಿಸಿ ಅನಿಸಿಕೆ ಹಂಚಿಕೊಂಡರು.

  • ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬಾಲಕಿಯರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ 68 ವರ್ಷದ ಸುರೇಶ್ ಹಾಗೂ ಅವರು 54 ವರ್ಷದ ಲಕ್ಷ್ಮೀದೇವಿ ದಂಪತಿ ತಮ್ಮ ಸೈಕಲ್ ರಿಕ್ಷಾದ ಸವಾರಿ ಮೂಲಕ ಮತಗಟ್ಟೆಗೆ ಆಗಮಿಸಿ ವಿಶೇಷ ರೀತಿಯಲ್ಲಿ ಮತದಾನಕ್ಕೆ ಸಾಕ್ಷಿಯಾದರು.

  • ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮತದಾನ ಮಾಡಲು ಧಾರವಾಡ ಪ್ರವೇಶಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.
     

  • ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಮನೆ ಯಜಮಾನನ ಸಾವಿನ ನಡುವೆಯು ಕುಟುಂಬಸ್ಥರು ದುಃಖದಲ್ಲೇ ತಮ್ಮ ಮತದಾನದ ಹಕ್ಕು ಚಲಾಯಿಸಿ ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.
     

  • ಸಚಿವರಾದ ಎಂ.ಬಿ.ಪಾಟೀಲ್ ಅವರು ವಿಜಯಪುರ ನಗರದ ಮದ್ದಿನ ಖಣಿಯ ಸಮನ್ವಯ ಇಂಗ್ಲಿಷ್ ಮೀಡಿಯಮ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

  • ಶಿವಮೊಗ್ಗದಲ್ಲಿ ಮಧ್ಯಾಹ್ನ 3 ಗಂಟೆಗೆ ಶೇ.58ರಷ್ಟು ಮತದಾನ

  • 14 ಲೋಕಸಭಾ ಮತ ಕ್ಷೇತ್ರಗಳಲ್ಲಿ ಮತದಾನ ಚುರುಕುಗೊಂಡಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ 41.59 ರಷ್ಟು ಮತದಾನವಾಗಿದೆ

  • Lok Sabha Election 2024 Live: ಕಾಲಿನಿಂದ ಮತದಾನ ಮಾಡಿ ಗಮನ ಸೆಳೆದ ವಿಶೇಷ ಚೇತನ  

    COMMERCIAL BREAK
    SCROLL TO CONTINUE READING

    ನಾಡಿಯಾಡ್‌ನ ಮತಗಟ್ಟೆಯಲ್ಲಿ ಅಂಕಿತ್ ಸೋನಿ ಎಂಬ ವಿಶೇಷ ಚೇತನ ಮತದಾರರು ತಮ್ಮ ಪಾದಗಳ ಮೂಲಕ ಮತ ಚಲಾಯಿಸಿದರು. 20 ವರ್ಷಗಳ ಹಿಂದೆ ವಿದ್ಯುತ್ ಶಾಕ್‌ನಿಂದ ನನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದೆ, ನನ್ನ ಗುರುಗಳ ಆಶೀರ್ವಾದದಿಂದ ನಾನು ಪದವಿ ಪಡೆದಿದ್ದೇನೆ. ಜನರು ಹೊರಗೆ ಬಂದು ಮತ ಚಲಾಯಿಸುವಂತೆ ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ. 

     

    ;

     

     

  • Davanagere Lok Sabha Election 2024 Live: ಶಾಮನೂರು ಶಿವಶಂಕರಪ್ಪ ಮನತದಾನ

    COMMERCIAL BREAK
    SCROLL TO CONTINUE READING

    ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ‌ ಮತದಾನ ಮಾಡಿದರು. ಪುತ್ರ ಉದ್ಯಮಿ‌ ಎಸ್ ಎಸ್ ಗಣೇಶ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿಮತ ಚಲಾಯಿಸಿದರು.

  • Lok Sabha Election 2024 Live: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮತಗಟ್ಟೆ ಸಂಖ್ಯೆ 127ರಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತದಾನ ಮಾಡಿದರು.

  • Dharwad Lok Sabha Election 2024 Live: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

    COMMERCIAL BREAK
    SCROLL TO CONTINUE READING

    ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದ 96 ಸದಸ್ಯರು ಜೊತೆಯಾಗಿ ಬಂದು ಮತದಾಣ ಮಾಡಿದ್ದಾರೆ. ಗ್ರಾಮದ ಕೊಪ್ಪದ ಕುಟುಂಬದ 96 ಮಂದಿ ಜೊತೆಯಾಗಿ ಬಂದು ಮತದಾನ ಮಾಡಿ ಗಮನಸೆಳೆದರು. ಇದೇ ರೀತಿ 3 ವಿಧಾನಸಭೆ, 2 ಲೋಕಸಭಾ ಚುನಾವಣೆಗೆ ಬರುತ್ತಿದ್ದೇವೆ. ಕುಟುಂಬದಲ್ಲಿ ಮೂರು ಜನ ಯುವ ಮತದಾರರು ಇದ್ದಾರೆ ಎಂದು ಕುಟುಂಬಸ್ಥರು ಹೇಳಿದರು.
     

  • Lok Sabha Election 2024 Live: ದೇಶಾದ್ಯಂತ ಮಧ್ಯಾಹ್ನ 1 ಗಂಟೆಯವರೆಗೆ 39.92% ಮತದಾನ

    COMMERCIAL BREAK
    SCROLL TO CONTINUE READING

    ಅಸ್ಸಾಂ 45.88%
    ಬಿಹಾರ 36.69%
    ಛತ್ತೀಸ್‌ಗಢ 46.14%
    ಗೋವಾ 49.04%
    ಗುಜರಾತ್ 37.83%
    ಕರ್ನಾಟಕ 41.59%
    ಮಧ್ಯ ಪ್ರದೇಶ 44.67%
    ಮಹಾರಾಷ್ಟ್ರ 31.55%
    ಉತ್ತರ ಪ್ರದೇಶ 38.12%
    ಪಶ್ಚಿಮ ಬಂಗಾಳ 49.27%
    ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು 39.94%
     

  • Lok Sabha Election 2024 Live: ಪತಿಯ ಸಾವಿನ ನಡುವೆಯೂ ಮತದಾನ ಮಾಡಿದ ಮಹಿಳೆ 

    COMMERCIAL BREAK
    SCROLL TO CONTINUE READING

    ಕಲಾವತಿ ಅವರ ಪತಿ ವೆಂಕಟೇಶ್ ಇಂದು ಬೆಳಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ತೀರಿಕೊಂಡಿದ್ದರು. ವೋಟ್ ಹಾಕಲು ಹೊರಡುವುದಕ್ಕಿಂತ ಮುಂಚೆ ವಿಷಯ ತಿಳಿದಿತ್ತು. ಗಂಡ ತೀರಿಕೊಂಡ ಸುದ್ದಿ ತಿಳಿದ ಮೇಲೂ ಪತ್ನಿ ಕಲಾವತಿಯವರು ಮತದಾನ ಮಾಡಿದ್ದಾರೆ. ತನ್ನ ಗಂಡನ ತೃಪ್ತಿಗಾಗಿ ವೋಟ್ ಹಾಕಲೇಬೇಕು ಎಂದು ಮತ ಚಲಾಯಿಸಿದೆ ಎಂದಿದ್ದಾರೆ ಕಲಾವತಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗೋಡಿನಲ್ಲಿ ಘಟನೆ ನಡೆದಿದೆ.
     

  • Bagalakote Lok Sabha Election 2024 Live:ಶತಾಯುಷಿ ಅಜ್ಜಿ ಮತದಾನ

    COMMERCIAL BREAK
    SCROLL TO CONTINUE READING

    ಬಾಗಲಕೋಟೆಯಲ್ಲಿ ಶತಾಯುಷಿ ಅಜ್ಜಿ ಮತದಾನ ಮಾಡಿದ್ದಾರೆ. ಬೀಳಗಿ ಪಟ್ಟಣದ ಸಿದ್ದವ್ವ (104) ಸಖಿ ಪಿಂಕ್ ಬೂತ್‌ನಲ್ಲಿ ಮತದಾನ ಮಾಡಿದರು.

     

  • Chikkodi Lok Sabha Election 2024 Live: ಕುಡಿದು ಬಂದ ಮತದಾರನ ಆವಾಂತರ

    COMMERCIAL BREAK
    SCROLL TO CONTINUE READING

    ಮತಗಟ್ಟೆಯಲ್ಲಿ ಮತಚಲಾಯಿಸಲು ಕುಡಿದು ಬಂದ ಮತದಾರನ ಆವಾಂತರ.154 ನಂಬರಿನ ಮತಗಟ್ಟೆಯಲ್ಲಿ ತಕರಾರು ಮಾಡಿದ ಮದ್ಯ ಪ್ರಿಯ. ಇವಿಎಮ್ ಯಂತ್ರ ಸದ್ದು ಮಾಡಿಲ್ಲ ಎಂದು ತಕರಾರು. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಲ್ಲಿ ಘಟನೆ. 

  • Karnataka Lok Sabha Election 2024 Live: ಕರ್ನಾಟಕದಲ್ಲಿ 1 ಗಂಟೆ ವರೆಗೆ ರಾಜ್ಯದಲ್ಲಿ 41.59% ರಷ್ಟು ಮತದಾನ ಮಾಡಿದ್ದಾರೆ. 

    COMMERCIAL BREAK
    SCROLL TO CONTINUE READING

    ಚಿಕ್ಕೋಡಿ – 45.69%
    ಬೆಳಗಾವಿ – 40.57%
    ಶಿವಮೊಗ್ಗ – 44.98%
    ರಾಯಚೂರು – 38.06%
    ಬೀದರ್‌ – 37.97%
    ಬಾಗಲಕೋಟೆ – 41.91%
    ವಿಜಯಪುರ – 39.87%
    ಕೊಪ್ಪಳ – 42.74%
    ಬಳ್ಳಾರಿ- 44.36%
    ಕಲಬುರಗಿ – 37.48%
    ಉತ್ತರ ಕನ್ನಡ – 44.22%
    ದಾವಣಗೆರೆ – 42.32%
    ಹಾವೇರಿ – 432.26%
    ಧಾರವಾಡ – 40.61%

  • Shivamogga Lok Sabha Election 2024 Live: ಶಿವಮೊಗ್ಗದಲ್ಲೊಂದು ವಿಶೇಷ ಮತಗಟ್ಟೆ

    COMMERCIAL BREAK
    SCROLL TO CONTINUE READING

    ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸಲು ವಿನೂತನ ಪ್ರಯತ್ನ ಮಾಡಲಾಗಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮತದಾರರಿಗೆ ಭವ್ಯವಾದ ಸಿಂಹಾಸನಗಳನ್ನು ಹೊಂದಿರುವ ಮತಗಟ್ಟೆಯನ್ನು ನಿರ್ಮಿಸಿ ಗಮನಸೆಳೆದಿದೆ. 

    ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಕಲ್ಪನೆಯನ್ನು ಹುಟ್ಟುಹಾಕುವ ವಿಶಿಷ್ಟವಾದ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಮತದಾರರನ್ನು ರಾಜ-ರಾಣಿಯರೆಂದು ಬಿಂಬಿಸುವ ಸಿಂಹಾಸನ ಕೂಡ ಇಲ್ಲಿದೆ. ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ತಲೆಯ ಮೇಲೆ ಕಿರೀಟ ಧರಿಸಿ ‘ಸಿಂಹಾಸನ’ಗಳ ಮೇಲೆ ಫೋಟೋಗೆ ಮತದಾರರು ಪೋಸ್ ನೀಡುತ್ತಿದ್ದಾರೆ. 

  • Gadag Lok Sabha Election 2024 Live : ಮತಗಟ್ಟೆಗೆ ಬಂದೇ ಹಕ್ಕು ಚಲಾಯಿಸಿದ ಶತಾಯುಷಿ

    COMMERCIAL BREAK
    SCROLL TO CONTINUE READING

    ಗದಗ ತಾಲೂಕಿನ ಶಿರುಂಜ ಗ್ರಾಮದಲ್ಲಿ 103 ವರ್ಷದ ಶತಾಯುಷಿ ಈರಮ್ಮ ಗುಡ್ಡದ ಮತಗಟ್ಟೆಗೆ ಮೊಮ್ಮಕ್ಕಳ ಸಹಾಯದಿಂದ ನಡೆದುಕೊಂಡು ಬಂದು ಮತದಾನ ಮಾಡಿದರು. 

  • Shivamogga Lok Sabha Election 2024 Live :ಬಿ ವೈ ವಿಜಯೇಂದ್ರ ಮತದಾನ 

    COMMERCIAL BREAK
    SCROLL TO CONTINUE READING

    ಮತದಾನ ಮಾಡಿ ಮಾತನಾಡಿದ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, "ಕಾಂಗ್ರೆಸ್ ರಾಜಕೀಯ ಮಾಡಲು ಬಯಸಿದೆ..." ಎಂದು ಹೇಳಿದ್ದಾರೆ.

     

    ;

     

  • Lok Sabha Election 2024 Live : ಗೌತಮ್ ಅದಾನಿ ಮತದಾನ 

    COMMERCIAL BREAK
    SCROLL TO CONTINUE READING

    ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ ಚಲಾಯಿಸಿದರು.

     

     

     

     

  • Karnataka Lok Sabha Election 2024 Live : ರಾಜ್ಯದಲ್ಲಿ 11 ಗಂಟೆಯವರೆಗೆ 24.48% ರಷ್ಟು ಮತದಾನ ನಡೆದಿದೆ. 

    1. COMMERCIAL BREAK
      SCROLL TO CONTINUE READING

      ಚಿಕ್ಕೋಡಿ - 27.23%

    2. ಬೆಳಗಾವಿ - 23.91 %

    3. ಶಿವಮೊಗ್ಗ - 27.22%

    4. ರಾಯಚೂರು - 22.05%

    5. ಬೀದರ್ - 22.33%

    6. ಬಾಗಲಕೋಟೆ - 23.80%

    7. ವಿಜಯಪುರ - 23.91%

    8. ಕೊಪ್ಪಳ - 24.64%

    9. ಬಳ್ಳಾರಿ - 26.45%

    10. ಕಲಬುರಗಿ - 22.64%

    11. ಉತ್ತರ ಕನ್ನಡ - 27.65%

    12. ದಾವಣಗೆರೆ - 23.73

    13. ಹಾವೇರಿ - 24.24%

    14. ಧಾರವಾಡ - 24.00%
       

  • LokSabha Elections 2024 Live : ಭಾರತದಾದ್ಯಂತ ಬೆಳಿಗ್ಗೆ 11 ಗಂಟೆಯವರೆಗೆ 25.41% ಮತದಾನ ಮಾಡಿದರು. 

    COMMERCIAL BREAK
    SCROLL TO CONTINUE READING

    ಅಸ್ಸೋಂ - 27.34%
    ಬಿಹಾರ - 24.41%
    ಛತ್ತೀಸ್‌ಗಢ - 29.90%
    ಗೋವಾ - 30.94%
    ಗುಜರಾತ್ - 24.35%
    ಕರ್ನಾಟಕ - 24.48%
    ಮಧ್ಯ ಪ್ರದೇಶ - 30.21%
    ಮಹಾರಾಷ್ಟ್ರ - 18.18%
    ಉತ್ತರ ಪ್ರದೇಶ - 26.12%
    ಪಶ್ಚಿಮ ಬಂಗಾಳ - 32.82%
    ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು - 24.69%
     

  • Karnataka LokSabha Elections 2024 Live: ಮೂರು ತಲೆಮಾರಿನ ಮಹಿಳೆಯರಿಂದ ಮತದಾನ 

    COMMERCIAL BREAK
    SCROLL TO CONTINUE READING

    ಮೂರು ತಲೆಮಾರಿನ ಮಹಿಳೆ ಒಟ್ಟಿಗೆ ಮತ ಚಲಾಯಿಸಿ ಗಮನಸೆಳೆದಿದ್ದಾರೆ. ತಾಯಿ, ಮಗಳು, ಅಜ್ಜಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಒಂದೇ ಸಮಯದಲ್ಲಿ ಮತದಾನ ಮಾಡಿದರು.

  • LokSabha Elections 2024 Live Updates :ಪ್ರಿಯಾಂಕಾ ಜಾರಕಿಹೊಳಿ ಮತದಾನ 

    COMMERCIAL BREAK
    SCROLL TO CONTINUE READING

    ಚಿಕ್ಕೋಡಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮತದಾನ ಮಾಡಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದಲ್ಲಿ ವೋಟಿಂಗ್‌ ಮಾಡಿದರು. 

  • Kalaburagi LokSabha Elections 2024 : "ಕರ್ನಾಟಕದಲ್ಲಿ ನಾವು ಬಹುಮತ ಪಡೆಯಲಿದ್ದೇವೆ"

    COMMERCIAL BREAK
    SCROLL TO CONTINUE READING

    ಮತ ಚಲಾಯಿಸಿದ ನಂತರ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಳೆದ 50 ವರ್ಷಗಳಿಂದ ನಾನು ಮತ ಚಲಾಯಿಸುತ್ತಿದ್ದೇನೆ. ಕರ್ನಾಟಕದಲ್ಲಿ ನಾವು ಬಹುಮತ ಪಡೆಯಲಿದ್ದೇವೆ ಎಂದರು.

     

     

  • Chikkodi Lok Sabha Election 2024 Live: ಶಾಸಕ ಲಕ್ಷ್ಮಣ ಸವದಿ ಮತದಾನ 

    COMMERCIAL BREAK
    SCROLL TO CONTINUE READING

    ಅಥಣಿ ಶಾಸಕ‌ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪಿ.ಕೆ ನಾಗನೂರ ಗ್ರಾಮದಲ್ಲಿ‌ ಮತದಾನ ಮಾಡಿದರು. ಪಿಕೆ ನಾಗನೂರ ಮತಗಟ್ಟೆ 204 ರಲ್ಲಿ‌  ಹಕ್ಕು ಚಲಾಯಿಸಿದರು.

  • Lok Sabha Election 2024 Live: ಈಶ್ವರಪ್ಪ ಮತದಾನ 

    COMMERCIAL BREAK
    SCROLL TO CONTINUE READING

    ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್​.ಈಶ್ವರಪ್ಪ ಹಾಗೂ ಕುಟುಂಬಸ್ಥರು ಮತ ಚಲಾಯಿಸಿದರು. 

  • Haveri Lok Sabha Election 2024 Live : "ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ"

    COMMERCIAL BREAK
    SCROLL TO CONTINUE READING

    ಮತದಾನ ಮಾಡಿ ಬಳಿಕ ಮಾತನಾಡಿದ ಕರ್ನಾಟಕದ ಮಾಜಿ ಸಿಎಂ ಮತ್ತು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, "ಜನರು ಹೊರಗೆ ಬಂದು ಮತ ಚಲಾಯಿಸಿ ಮತ್ತು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸುವಂತೆ ನಾನು ಮನವಿ ಮಾಡುತ್ತೇನೆ" ಎಂದಿದ್ದಾರೆ. 

     

     

  • Kalaburagi Lok Sabha Election 2024 Live : ಮಲ್ಲಿಕಾರ್ಜುನ ಖರ್ಗೆ ಮತದಾನ

    COMMERCIAL BREAK
    SCROLL TO CONTINUE READING

    ಕಲಬುರಗಿಯ ಗುಂಡುಗುರ್ತಿ ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತದಾನ ಮಾಡಿದರು. ಕಲಬುರಗಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಧಾಕೃಷ್ಣ ಕಣಕ್ಕಿಳಿದಿದ್ದು, ಬಿಜೆಪಿಯಿಂದ ಉಮೇಶ್‌ ಜಿ ಜಾಧವ್‌ ಸ್ಪರ್ಧಿಸಿದ್ದಾರೆ. 

     

     

  • Karnataka Lok Sabha Election 2024 Phase 3 Live Updates: ಉಜ್ಜಯಿನಿ ಶ್ರೀಗಳಿಂದ  ಮತದಾನ 

    COMMERCIAL BREAK
    SCROLL TO CONTINUE READING

    ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿ ಮತದಾತ ಮಾಡಿದರು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಶ್ರೀಗಳು ಹೇಳಿದರು. 

  • Karnataka Lok Sabha Election 2024 Live : ಕರ್ನಾಟಕ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ.  9 ಗಂಟೆಯ ವರೆಗೆ ಶೇ.9.45 ರಷ್ಟು ಮತದಾನ ನಡೆದಿದೆ. 

    1. COMMERCIAL BREAK
      SCROLL TO CONTINUE READING

      ಚಿಕ್ಕೋಡಿ - ಶೇ.10.81 

    2. ಬೆಳಗಾವಿ - ಶೇ.9.48 

    3. ಶಿವಮೊಗ್ಗ - ಶೇ.11.39 

    4. ರಾಯಚೂರು - ಶೇ.8.27 

    5. ಬೀದರ್ - ಶೇ.8.90 

    6. ಬಾಗಲಕೋಟೆ - ಶೇ.8.59 

    7. ವಿಜಯಪುರ - ಶೇ.9.26 

    8. ಕೊಪ್ಪಳ - ಶೇ.8.79 

    9. ಬಳ್ಳಾರಿ - ಶೇ.10.37 

    10. ಕಲಬುರಗಿ - ಶೇ.8.71 

    11. ಉತ್ತರ ಕನ್ನಡ - ಶೇ.11.07 

    12. ದಾವಣಗೆರೆ -ಶೇ.9.11 

    13. ಹಾವೇರಿ - ಶೇ.8.62 

    14. ಧಾರವಾಡ - ಶೇ.9.38 

  • Haveri Lok Sabha Election Phase 2 Live: ಬಸವರಾಜ ಬೊಮ್ಮಾಯಿ ವೋಟಿಂಗ್‌ 

    COMMERCIAL BREAK
    SCROLL TO CONTINUE READING

    ಕರ್ನಾಟಕದ ಮಾಜಿ ಸಿಎಂ ಹಾಗೂ ಹಾವೇರಿಯ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದಸ್ವಾಮಿ ಗಡ್ಡದೇವರಮಠ ಕಣದಲ್ಲಿದ್ದಾರೆ. ಬಿಜೆಪಿಯ ಶಿವಕುಮಾರ್ ಉದಾಸಿ ಕ್ಷೇತ್ರದ ಹಾಲಿ ಸಂಸದರು.

     

     

  • Dharwad Lok Sabha Election Phase 2 Live: ಪ್ರಹ್ಲಾದ್ ಜೋಶಿ ಮತದಾನ 

    COMMERCIAL BREAK
    SCROLL TO CONTINUE READING

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದು ತಮ್‌ ಕುಟುಂಬದವರೊಂದಿಗೆ ಬಂದು ಮತದಾನ ಮಾಡಿದರು.  

     

     

  • Lok Sabha Election Phase 2 Live: ಮತ ಚಲಾಯಿಸಿದ ವಿಶೇಷ ಚೇತನ ಯುವಕ 

    COMMERCIAL BREAK
    SCROLL TO CONTINUE READING

    ಉತ್ತರ ಪ್ರದೇಶದಲ್ಲಿ ವಿಶೇಷ ಚೇತನ ಯುವಕ ಮತದಾನ ಮಾಡಿದ್ದಾರೆ. ರಾಹುಲ್ ಅವರು ಮೂರನೇ ಹಂತದಲ್ಲಿ ಮತ ಚಲಾಯಿಸಲು ತಮ್ಮ ತಂದೆ ಜೊತೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ.

     

     

  • Bidar Lok Sabha Election Phase 2 Live: ಈಶ್ವರ್‌ ಖಂಡ್ರೆ ಮತದಾನ 

    COMMERCIAL BREAK
    SCROLL TO CONTINUE READING

    ಬೀದರ್‌ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಸಚಿವ ಈಶ್ವರ್ ಖಂಡ್ರೆ ಮತದಾನ ಮಾಡಿದರು. ತಂದೆ, ಮಾಜಿ ಸಚಿವ ಭೀಮಣ್ಣ ಖಂಡ್ರೆ, ಪುತ್ರ ಸಾಗರ್ ಖಂಡ್ರೆ, ಪತ್ನಿ ಗೀತಾ ಜೊತೆಗೆ ಆಗಮಿಸಿ ಹಕ್ಕು ಚಲಾಯಿಸಿದರು.  

  • Kalaburagi Lok Sabha Election 2024 Live : ಮತ ಚಲಾಯಿಸಿದ ಉಮೇಶ್ ಜಾಧವ್ 

    COMMERCIAL BREAK
    SCROLL TO CONTINUE READING

    ಕಲಬುರಗಿಯ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಮತ ಚಲಾಯಿಸಿದರು. ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

     

     

  • Karnataka Lok Sabha Election Phase 2 Live: ಮತ ಚಲಾಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  

    COMMERCIAL BREAK
    SCROLL TO CONTINUE READING

    ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ ಮಾಡಿದರು. ಬೆಳಗಾವಿ ದಕ್ಷಿಣ, ಅರಬಾವಿ ಹಾಗೂ ಗೋಕಾಕ್ ನಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ಸಚಿವೆ ಹೆಬ್ಬಾಳ್ಕರ್‌ ಹೇಳಿದರು. 

  • Hubballi Lok Sabha Election 2024 Live : ಬಸವರಾಜ ಹೊರಟ್ಟಿ ಮತದಾನ 

    COMMERCIAL BREAK
    SCROLL TO CONTINUE READING

    ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತದಾನ ಮಾಡಿದರು. ಪುತ್ರ, ಸೊಸೆ, ‌ಮೊಮ್ಮಗಳೊಂದಿಗೆ ಆಗಮಿಸಿ ಮತಚಲಾಯಿಸಿದರು. ಎಲ್ಲರೂ ಕಡ್ಡಾಯ ಮತದಾನ ಮಾಡುವಂತೆ ಕರೆ ನೀಡಿದರು. 

  • Vijaypura Lok Sabha Election 2024 Live : ಇವಿಎಂ ನಲ್ಲಿ ತಾಂತ್ರಿಕ ದೋಷ

    COMMERCIAL BREAK
    SCROLL TO CONTINUE READING

    ವಿಜಯಪುರದ ನಗರದ ಮತಗಟ್ಟೆ ನಂ 4 ರಲ್ಲಿ ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಮತದಾನಕ್ಕೆ ಅಡ್ಡಿಯಾಗಿದೆ. 

  • Maharashtra Lok Sabha Election 2024 Live : ಜೆನಿಲಿಯಾ, ರಿತೇಶ್ ದೇಶಮುಖ್ ಮತದಾನ 

    COMMERCIAL BREAK
    SCROLL TO CONTINUE READING

    ಲಾತೂರ್‌ನ ಮತಗಟ್ಟೆಯಲ್ಲಿ ನಟ ರಿತೇಶ್ ದೇಶಮುಖ್ ಮತ್ತು ಅವರ ಪತ್ನಿ, ನಟಿ ಜೆನಿಲಿಯಾ ದೇಶಮುಖ್ ಮತದಾನ ಮಾಡಿದರು.  

     

     

  • Raichuru Lok Sabha Election 2024 Live :ಮತಯಂತ್ರದಲ್ಲಿ ದೋಷ, ಮನೆಗೆ ತೆರಳುತ್ತಿರುವ ಮತದಾರರು

    COMMERCIAL BREAK
    SCROLL TO CONTINUE READING

    ಸಿಂಧನೂರು ತಾಲೂಕಿನ ಕಲ್ಮಂಗಿ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಂಡುಬಂದಿದೆ. ಬೆಳಿಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ, 8 ಗಂಟೆಯಾದರೂ ಶುರುವಾಗಿಲ್ಲ. ಚುನಾವಣಾ ಸಿಬ್ಬಂದಿ ಇವಿಎಂ ಸರಿಪಡಿಸುತ್ತಿದ್ದಾರೆ. ಮತಗಟ್ಟೆಗೆ ತೆರಳಿದ್ದ ಅಧಿಕಾರಿಗಳು ಮನೆಗೆ ವಾಪಸ್ ಹೋಗುತ್ತಿದ್ದಾರೆ. 

  • Lok Sabha Election 2024 Live : ಮೋದಿಗೆ ರಾಖಿ ಕಟ್ಟಿದ ವೃದ್ಧ ಮಹಿಳೆ 

    COMMERCIAL BREAK
    SCROLL TO CONTINUE READING

    ಗುಜರಾತ್‌ನ ಅಹಮದಾಬಾದ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಪ್ರಧಾನಿ ಮೋದಿ ಅವರಿಗೆ ವೃದ್ಧ ಮಹಿಳೆ ರಾಖಿ ಕಟ್ಟಿದರು.

     

     

  • Shivamogga Lok Sabha Election 2024 Live : ಮತದಾನ ಮಾಡಿದ ಬಿ.ವೈ. ರಾಘವೇಂದ್ರ 

    COMMERCIAL BREAK
    SCROLL TO CONTINUE READING

    ಬಿಜೆಪಿ ಸಂಸದ ಹಾಗೂ ಶಿವಮೊಗ್ಗದ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ ಚಲಾಯಿಸಿದರು. "ನನಗೆ ತುಂಬಾ ಸಂತೋಷವಾಗಿದೆ. ರಾಷ್ಟ್ರದ ಹಿತದೃಷ್ಟಿಯಿಂದ ನಿಮ್ಮ ಮತವನ್ನು ಚಲಾಯಿಸುವಂತೆ ನಮ್ಮ ಕ್ಷೇತ್ರದ ಮತ್ತು ನಮ್ಮ ರಾಜ್ಯದ ಮತದಾರರಲ್ಲಿ ವಿನಂತಿಸುತ್ತೇನೆ" ಎಂದು ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಕಾಂಗ್ರೆಸ್ ನಿಂದ ಗೀತಾ ಶಿವರಾಜಕುಮಾರ್ ಹಾಗೂ ಕೆ.ಎಸ್. ಈಶ್ವರಪ್ಪ ಇಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

     

     

  • Shivamogga Lok Sabha Election 2024 Live : ಬಿಎಸ್ ಯಡಿಯೂರಪ್ಪ ಮತದಾನ

    COMMERCIAL BREAK
    SCROLL TO CONTINUE READING

    ಶಿವಮೊಗ್ಗದಲ್ಲಿ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ನಾವು ಕನಿಷ್ಠ 25 ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದ್ದೇವೆ. ರಾಘವೇಂದ್ರ ಅವರು 2.5 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕರ್ನಾಟಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

     

     

  • Lok Sabha Elections 2024 Live: ಗೃಹ ಸಚಿವ ಅಮಿತ್ ಶಾ ಮತದಾನ

    COMMERCIAL BREAK
    SCROLL TO CONTINUE READING

    ಗುಜರಾತ್‌ನ ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ ಚಲಾಯಿಸಿದರು. 

     

     

  • Lok Sabha Election 2024 Live: ಅಹಮದಾಬಾದ್‌ನಲ್ಲಿ ಪಿಎಂ ಮತಚಲಾಯಿಸಿದ ಪಿಎಂ ಮೋದಿ 

    COMMERCIAL BREAK
    SCROLL TO CONTINUE READING

    ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದರು. "ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. ನಮ್ಮ ದೇಶದಲ್ಲಿ 'ದಾನ'ಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದೇ ಉತ್ಸಾಹದಲ್ಲಿ ದೇಶವಾಸಿಗಳು ಸಾಧ್ಯವಾದಷ್ಟು ಮತದಾನ ಮಾಡಬೇಕು." ಎಂದು ಮೋದಿ ಹೇಳಿದರು. 

     

     

  • Lok Sabha Election 2024 Live: ಕನ್ನಡದಲ್ಲಿ ಪಿಎಂ ಮೋದಿ ಟ್ವೀಟ್‌ 

    COMMERCIAL BREAK
    SCROLL TO CONTINUE READING

    ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. ಕರ್ನಾಟಕದ ಜನತೆಗೆ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ವಿನಂತಿಸಿದ್ದಾರೆ. "ಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ" ಎಂದು ಪಿಎಂ ಮೋದಿ ಟ್ವೀಟ್‌ ಮಾಡಿದ್ದಾರೆ. 

     

     

     

ZEENEWS TRENDING STORIES

By continuing to use the site, you agree to the use of cookies. You can find out more by Tapping this link