ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಮನೆ, ಕಚೇರಿಗಳ ಮೇಲೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಐಟಿ ದಾಳಿ ಅಂತ್ಯಗೊಂಡಿದೆ. ಐಟಿ ದಾಳಿ ವೇಳೆ ಅಕ್ರಮ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತಿಯಾಗಿದ್ದು, ಆದಾಯಕ್ಕಿಂತ ಅಧಿಕ ಆಸ್ತಿಗಳಿಸಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. 


COMMERCIAL BREAK
SCROLL TO CONTINUE READING

ಸೆ. 21 ರಂದು ಪ್ರಾರಂಭವಾದ ಐಟಿ ರೇಡ್ ನಲ್ಲಿ ಆದಾಯ ಮೀರಿದ ಆಸ್ತಿಗಳಿಸಿರುವುದು ಪತ್ತೆಯಾಗಿದೆ. ಸಿದ್ಧಾರ್ಥ್ 650 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಆದರೆ ನಿಯಮ ಉಲ್ಲಂಘಿಸಿ ಆದಾಯ ಗಳಿಸಿರುವ ಸಿದ್ಧಾರ್ಥ ಕೆಫೆ ಕಾಫಿ ಡೇ, ಟೂರಿಸಂಗಳಲ್ಲಿ ತೆರಿಗೆ ಕಟ್ಟದೆ ಕೋಟ್ಯಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. 


ಕಳೆದ ನಾಲ್ಕು ದಿನಗಳಿಂದ ಸಿದ್ದಾರ್ಥ ಒಡೆತನದ ಕೆಫೆ ಕಾಫಿ ಡೇ, ಸೆರಾಯ್ ಹೋಟೆಲ್, ಎಬಿಸಿ ಕಚೇರಿ, ಬೆಂಗಳೂರಿನ ಯುಬಿ ಸಿಟಿ ಕಚೇರಿ, ಸದಾಶಿವನಗರದ ಮನೆ, ಚಿಕ್ಕಮಗಳೂರಿನ ಕಾಫಿ ಎಸ್ಟೇಟ್, ಹಾಸನ, ಬಾಂಬೆ, ಚೆನ್ನೈ ಸೇರಿದಂತೆ ಒಟ್ಟು 25 ಕಡೆಗಳಲ್ಲಿ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಅಕ್ರಮ ಹಣಗಳಿಕೆ ಬಗ್ಗೆ ಮಾಹಿತಿ ಕಲೆ ಹಾಕಿರುವುದಾಗಿ ತಿಳಿಸಿದ್ದಾರೆ.