ಬೆಂಗಳೂರು : ರಾಷ್ಟ್ರ ಪತಿ‌ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಾದೇಶಿಕ ಪಕ್ಷಗಳ ನಾಯಕರ ಸಭೆ ನಡೆಯಲಿದೆ. ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ  ಮಧ್ಯಾಹ್ನ ಮೂರು ಗಂಟೆಗೆ ಸಭೆ ನಡೆಯಲಿದೆ. ದೆಹಲಿಯ ಕಾನ್ಸ್ ಟಿಟ್ಯೂಷನ್ ಕ್ಲಬ್ ನಲ್ಲಿ  ಮಹತ್ವದ ಮೀಟಿಂಗ್  ಜರುಗಲಿದೆ. 
 
ಜುಲೈ 24 ಕ್ಕೆ ರಾಷ್ಟ್ರ ಪತಿ ರಾಮನಾಥ ಕೋವಿಂದ್ ಅಧಿಕಾರಾವಧಿ ಮುಕ್ತಾಯವಾಗಲಿದೆ. ಈ ನಿಟ್ಟಿನಲ್ಲಿ ನೂತನ ರಾಷ್ಟ್ರ ಪತಿ ಆಯ್ಕೆಯಾ ಕಸರತ್ತು ನಡೆಯುತ್ತಿದೆ. ಅದಕ್ಕಾಗಿಯೇ ಇಂದು ಮಧ್ಯಾಹ್ನ ದೆಹಲಿಯಲ್ಲಿ  ಪ್ರಾದೇಶಿಕ ಪಕ್ಷಗಳ ನಾಯಕರ ಸಭೆ ನಡೆಯಲಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಭೆಯ ನೇತೃತ್ವ ವಹಿಸಲಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Lokayukta: ನೂತನ ಲೋಕಾಯುಕ್ತರಾಗಿ ನ್ಯಾ. ಬಿ.ಎಸ್.ಪಾಟೀಲ್ ನೇಮಕ


ರಾಷ್ಟ್ರಪತಿ‌ಚುನಾವಣೆಗೆ ಕ್ಯಾಂಡಿಡೇಟ್ ಇಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಎನ್ ಡಿಎ ಮೈತ್ರಿ ಕೂಟ ಅಭ್ಯರ್ಥಿಗೆ ವಿರುದ್ಧ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆಯಲಿದೆ. ಇದೇ ವೇಳೆ ತೃತೀಯ ರಂಗ ರಚನೆ ಬಗ್ಗೆ ಮಾತುಕತೆನಡೆಯಲಿದೆ ಎನ್ನಲಾಗಿದೆ. ಇನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ದೇವೇಗೌಡರ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.  ದೇವೇಗೌಡರನ್ನು ಆಯ್ಕೆ‌ಮಾಡಿದರೆ ಎಲ್ಲರ ಬೆಂಬಲ ಸಿಗಲಿದೆ ಎಂಬ  ಲೆಕ್ಕಾಚಾರ ನಡೆಯುತ್ತಿದೆ. ಈ ಆಯ್ಕೆಗೆ ಬಿಜೆಪಿ ಕೂಡ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಹೇಳಲಾಗಿದೆ. 


ಸಭೆಯಲ್ಲಿ ಸಿಪಿಐ,ಸಿಪಿಐ( ಎಂ) ಟಿಎಂಸಿ, ಎಎಪಿ, ತೆಲುಗುದೇಶಂ, ಟಿಆರ್ ಎಸ್, ಜೆಡಿಎಸ್,ಅಖಾಲಿದಳ ಸೇರಿ 22 ಪಕ್ಷಗಳ ನಾಯಕರು‌ ಭಾಗಿಯಾಗಲಿದ್ದಾರೆ. ಶರದ್ ಪವಾರ್, ಚಂದ್ರಶೇಖರ್ ರಾವ್, ಕೇಜ್ರಿವಾಲ್ ಕೂಡಾ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.  ಅಲ್ಲದೆ ಸಭೆಯಲ್ಲಿ ಭಾಗಿಯಾಗುವಂತೆ ಜೆಡಿಎಸ್ ನ ಇಬ್ಬರು ವರಿಷ್ಠರಿಗೂ ‌ಆಹ್ವಾನ ನೀಡಲಾಗಿದೆ. ಜೆಡಿಎಸ್ ವರಿಷ್ಠ  ಹೆಚ್ ಡಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿಗೆ ಆಹ್ವಾನ ನೀಡಲಾಗಿದೆ. 


ಇದನ್ನೂ ಓದಿ : ಕತ್ತೆ ಸಾಕುವ ಸಲುವಾಗಿ ಮಲ್ಟಿ ನ್ಯಾಷನಲ್ ಕಂಪನಿ ಬಿಟ್ಟು ಬಂದ ವ್ಯಕ್ತಿಯ ಇಂದಿನ ಸಂಪಾದನೆ ಎಷ್ಟು ಗೊತ್ತಾ ?


ರಾಷ್ಟ್ರಪತಿ‌ ಚುನಾವಣೆ ಜುಲೈ 18  ರಂದು  ನಡೆಯಲಿದೆ. ಜುಲೈ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಅವಿರೋಧ ಆಯ್ಕೆಯಾದರೆ ಚುನಾವಣೆ ನಡೆಯುವುದಿಲ್ಲ.  ಇನ್ನು ಈ ರೇಸ್ ನಲ್ಲಿ ಹಲವರ ಹೆಸರು ಕೇಳಿ ಬರುತ್ತಿದೆ. ಮಾಜಿ‌ಪ್ರಧಾನಿ‌ ಹೆಚ್.ಡಿ.ದೇವೇಗೌಡ, ಮಾಜಿ ಸ್ಪೀಕರ್ ಮೀರಾ ಕುಮಾರಿ, ಎನ್ ಸಿಪಿಯ ಶರದ್ ಪವಾರ್ ಹೆಸರು ಮುಂಚೂಣಿಯಲ್ಲಿದೆ. ಆದರೆ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.  a