ಸಿದ್ದರಾಮಯ್ಯರ ಸಿದ್ಧಾಂತ ಯಾವುದು, ಮಜಾವಾದವೋ, ಸಮಾಜವಾದವೋ?: ಬಿಜೆಪಿ ಪ್ರಶ್ನೆ

ನಂಜುಂಡಸ್ವಾಮಿಯವರ ಶಿಷ್ಯ ಎಂದು ಬಡಾಯಿ ಕೊಚ್ಚಿಕೊಳ್ಳುವ #ಮಜವಾದಿಸಿದ್ದರಾಮಯ್ಯ ಅವರೇ, ನೀವು ಎಂದಾದರೂ ರೈತರಿಗೆ ನ್ಯಾಯ ಕೊಡಿಸಿದ್ದೀರಾ? ಎಂದು ಬಿಜೆಪಿ ಪ್ರಶ್ನಿಸಿದೆ.

Written by - Zee Kannada News Desk | Last Updated : Jun 2, 2022, 01:03 PM IST
  • ಪಕ್ಷದ ಚೌಕಟ್ಟಿನಲ್ಲಿ ಯಾವ ಹೋರಾಟ ರೂಪಿಸದ ಸಿದ್ದರಾಮಯ್ಯ ಹುತ್ತದಲ್ಲಿ ಸೇರುವ ಹಾವು ಅಷ್ಟೇ
  • ಮಜವಾದಿ ಸಿದ್ದರಾಮಯ್ಯನವರೇ ನೀವು ಎಂದಾದರೂ ರೈತರಿಗೆ ನ್ಯಾಯ ಕೊಡಿಸಿದ್ದೀರಾ?
  • ಸಿದ್ದರಾಮಯ್ಯನವರದ್ದು ಬಂಡವಾಳ ಇಲ್ಲದ ಶೂನ್ಯಬಡ್ಡಿ ಭಾಷಣ!ವೆಂದು ಬಿಜೆಪಿ ಟೀಕಿಸಿದೆ
ಸಿದ್ದರಾಮಯ್ಯರ ಸಿದ್ಧಾಂತ ಯಾವುದು, ಮಜಾವಾದವೋ, ಸಮಾಜವಾದವೋ?: ಬಿಜೆಪಿ ಪ್ರಶ್ನೆ title=
ಸಿದ್ದರಾಮಯ್ಯ ವಿರುದ್ಧ ಗುಡುಗಿದ ಬಿಜೆಪಿ

ಬೆಂಗಳೂರು: ಸಿದ್ದರಾಮಯ್ಯ ಅವರ ಸಿದ್ಧಾಂತ ಯಾವುದು, ಮಜಾವಾದವೋ, ಸಮಾಜವಾದವೋ? ಎಂದು ಬಿಜೆಪಿ ಪ್ರಶ್ನಿಸಿದೆ. #ಮಜವಾದಿಸಿದ್ದರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದೇ ಎಲ್ಲರ ಮೇಲೂ ಎರಗುವ, ಎಲ್ಲರನ್ನೂ ಕಬಳಿಸುವ ಸಿದ್ದರಾಮಯ್ಯರ ರಾಜಕೀಯ ಬೆಳವಣಿಗೆಯನ್ನು ಅನಾವರಣಗೊಳಿಸಲಿದು ಸಕಾಲ’ವೆಂದು ಟೀಕಿಸಿದೆ.

‘ಜನತಾ ಪರಿವಾರದಲ್ಲಿರುವ ಸಿದ್ದರಾಮಯ್ಯರ ಆಪ್ತರನ್ನು ತುಸು ವಿಚಾರಿಸಿದರೆ ಮೈಸೂರು ಜಲದರ್ಶಿನಿಯ ಕಲ್ಯಾಣಲೀಲೆಗಳು ಹೊರಬೀಳುತ್ತವೆ. ಪಕ್ಷದ ಚೌಕಟ್ಟಿನಲ್ಲಿ ಯಾವ ಹೋರಾಟವನ್ನೂ ರೂಪಿಸದ ಸಿದ್ದರಾಮಯ್ಯ ಹುತ್ತದಲ್ಲಿ ಸೇರುವ ಹಾವು, ಅಷ್ಟೇ’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: 'ಸಚಿವ ನಾಗೇಶ್ ಅವರ ಮನೆ ಮೇಲಿನ ದಾಳಿ ಹೇಡಿತನದ ಸಂಕೇತ'

‘ನಂಜುಂಡಸ್ವಾಮಿಯವರ ಶಿಷ್ಯ ಎಂದು ಬಡಾಯಿ ಕೊಚ್ಚಿಕೊಳ್ಳುವ #ಮಜವಾದಿಸಿದ್ದರಾಮಯ್ಯ ಅವರೇ, ನೀವು ಎಂದಾದರೂ ರೈತರಿಗೆ ನ್ಯಾಯ ಕೊಡಿಸಿದ್ದೀರಾ? ಸಿಎಂ ಆಗಿದ್ದಾಗ, ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಕುಡಿದು ಸತ್ತ ಎಂದು ನಿಂದಿಸಿರಲಿಲ್ಲವೇ? ನಂಜುಂಡಸ್ವಾಮಿ ಆ ಕ್ಷಣದಲ್ಲಿ ಬದುಕಿರುತ್ತಿದ್ದರೆ ಹಸಿರುಶಾಲಿನಲ್ಲೇ ನಿಮಗೆ ಕಪಾಳಮೋಕ್ಷ ಮಾಡಿರುತ್ತಿದ್ದರು’ ಎಂದು ಟ್ವೀಟ್ ಮಾಡಿದೆ.

‘ನಾನು ಕಾರ್ಮಿಕ ನಾಯಕ ಜಾರ್ಜ್ ಫರ್ನಾಂಡೀಸ್ ಶಿಷ್ಯ ಎಂದೂ #ಮಜವಾದಿಸಿದ್ದರಾಮಯ್ಯ ಹೇಳುತ್ತಿರುತ್ತಾರೆ. ಕಾರ್ಮಿಕರ ಕಲ್ಯಾಣಕ್ಕೆ ಹೋರಾಟ ಮಾಡಿದ ಒಂದಾದರೂ ಉದಾಹರಣೆ ಇದೆಯೇ? ಮಹಿಷಿ ವರದಿಯನ್ವಯ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಸಿದ್ದರಾಮಯ್ಯನವರದ್ದು ಬಂಡವಾಳ ಇಲ್ಲದ ಶೂನ್ಯಬಡ್ಡಿ ಭಾಷಣ!’ವೆಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಗಣಿಗಾರಿಕೆ ಆರೋಪ: ಪತಿ ಮಾಡಿದ ತಪ್ಪಿಗೆ ಪತ್ನಿ ವಿರುದ್ಧ ಪ್ರಕರಣ ದಾಖಲು!

‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಿದ್ದರಾಮಯ್ಯರ ರಾಜಕೀಯ ಏಳಿಗೆಯ ನಿಜವಾದ ಗುರು. ಆದರೆ, ಸಿದ್ದರಾಮಯ್ಯನವರು ದೇವೇಗೌಡರಿಗೆ ಮಾಡಿದ್ದೇನು? ಒಂದಿಷ್ಟು ಜನ "ರಾತ್ರಿ ಗೆಳೆಯರ" ಜೊತೆ ಗುಂಪುಕಟ್ಟಿಕೊಂಡು ಉಂಡ ಮನೆಗೆ ಬೆಂಕಿ ಹಚ್ಚುವ ಯೋಜನೆ ರೂಪಿಸಿದ್ದು ನಿಜವಲ್ವೇ? ಈಗ ಕಾಂಗ್ರೆಸ್ ಪಕ್ಷದಲ್ಲೂ ನಡೆಸುತ್ತಿರುವುದು ಅದನ್ನೇ ಅಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಅಧಿಕಾರಕ್ಕಾಗಿ ನಡೆಸಿದ ಬಳ್ಳಾರಿ ಪಾದಯಾತ್ರೆ ಹೊರತುಪಡಿಸಿ, ಸಿದ್ದರಾಮಯ್ಯ ರಾಜಕೀಯ ಬದುಕಿನ ಮೈಲಿಗಲ್ಲುಗಳೇನು? ನಾಡು, ನುಡಿ, ಸಂಸ್ಕೃತಿ, ಜಲ, ಪರಿಸರಕ್ಕಾಗಿ ಸಿದ್ದರಾಮಯ್ಯ ಕೊಡುಗೆ ಏನು? ಜನತಾ ಪರಿವಾರದಲ್ಲಿದ್ದಾಗ ದೇವೇಗೌಡರು ಉಪವಾಸ ಸತ್ಯಾಗ್ರಹ ನಡೆಸುವಾಗ,  #ಮಜವಾದಿಸಿದ್ದರಾಮಯ್ಯ ಮಾತ್ರ ಭಾಷಣದಲ್ಲಿ ಹೊಟ್ಟೆತುಂಬಿಸಿಕೊಳ್ಳುತ್ತಿದ್ದರು’ ಎಂದು ಬಿಜೆಪಿ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News