Lok Sabha Election 2024: ಲೋಕಸಭಾ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈಗಾಗಲೇ ಅಬ್ಬರ ಪ್ರಚಾರದ ಮೂಲಕ ಮತಬೇಟೆ ನಡೆಸುತ್ತಿದ್ದಾರೆ. ಈ ನಡುವೆ ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ತಮ್ಮ ಕೆಲವು ಬೇಡಿಕೆಗಳನ್ನು ಪೂರೈಸಬೇಕು ಎಂದು ಆಶಾ ಕಾರ್ಯಕರ್ತೆರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Daily GK Quiz: ಸೌರವ್ಯೂಹದ ಯಾವ ಗ್ರಹವನ್ನು "ಬ್ಲೂ ಪ್ಲಾನೆಟ್" ಎಂದು ಕರೆಯಲಾಗುತ್ತದೆ?


ಚುನಾವಣೆ ದಿನ ಚುನಾವಣಾ ಕೇಂದ್ರದ ಬಳಿ ಕಾರ್ಯನಿರ್ವಹಿಸಲು ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದಿಷ್ಟು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಶಾ ಕಾರ್ಯಕರ್ತೆಯರು ಬೇಡಿಕೆ ಇಟ್ಟಿದ್ದಾರೆ. ಹಾಗಾದ್ರೆ ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಆಶಾ ಕಾರ್ಯಕರ್ತೆಯರು ಸರ್ಕಾರ ಮುಂದೆ ಇಟ್ಟಿರುವ ಬೇಡಿಕೆಗಳೇನು...!?


  • ಸರಿಯಾದ ಸಮಯದಲ್ಲಿ ನಿಗದಿತ ವೇತನ ನೀಡಬೇಕು

  • ಕಳೆದ ಬಾರಿಯ ಗೌರವಧನವನ್ನು ಆದಷ್ಟು ಬೇಗ ಆಶಾಗಳಿಗೆ ತಲುಪಿಸಬೇಕು

  • 700 ರೂ. ಇರುವ ಗೌರವಧನವನ್ನ 1,000 ರೂ.ಗೆ ಹೆಚ್ಚಿಸಬೇಕು

  • ಆಶಾ ಕಾರ್ಯಕರ್ತೆಯರಿಗೆ ಸ್ಥಳಿಯ ಎಲೆಕ್ಷನ್ ಬೂತ್‌ಗಳಲ್ಲಿ ಕೆಲಸ ನಿಯೋಜನೆ ಮಾಡಬೇಕು

  • ಬೇರೆ ಊರೂ ಅಥವಾ ಜಿಲ್ಲೆಗಳಲ್ಲಿ ನಿಯೋಜನೆ ಮಾಡಬಾರದು

  • ಆಶಾ ಕಾರ್ಯಕರ್ತೆಯರ ಓಡಾಟಕ್ಕೆ ಬಸ್ ಅಥವಾ ಇತರೆ ವಾಹನಗಳ ಸೌಲಭ್ಯ ಒದಗಿಸಬೇಕು

  • ಉಚಿತ ಆಹಾರ ಮತ್ತು ನೀರು ಪೂರೈಕೆ ಮಾಡಬೇಕು


ಇದನ್ನೂ ಓದಿ:  H5N1 Bird Flu: ಮತ್ತೆ ಕೋವಿಡ್ ತರಹದ ವಿನಾಶ? ಹಕ್ಕಿ ಜ್ವರ 100 ಪಟ್ಟು ಹೆಚ್ಚು ಅಪಾಯಕಾರಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ