ಬೆಂಗಳೂರು: 10 ವರ್ಷಗಳ ವೈಫಲ್ಯಗಳನ್ನು ಮರೆಮಾಚಲು ಅನೇಕ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್.ಸುದರ್ಶನ್ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.


ಕಳೆದ 10 ವರ್ಷಗಳಿಂದ ಮೋದಿಯವರ ನೇತೃತ್ವದ ಬಿಜೆಪಿ ಕೇವಲ ಸುಳ್ಳು, ಭ್ರಮೆಗಳಲ್ಲೆ ರಾಜಕೀಯ ಮಾಡುತ್ತಿದೆ. ಬಿಜೆಪಿ ಭ್ರಮೆಗಳನ್ನು ಸೃಷ್ಟಿ ಮಾಡಿ ಜನರ ಗಮನವನನು ಬೇರೆಡೆ ಸೆಳೆದು ದಾರಿತಪ್ಪಸಿಸಲಾಗುತ್ತಿದೆ.ಭ್ರಮೆಗಳು ತುಂಬಾ ಅಪಾಯಕಾರಿ. 10 ವರ್ಷಗಳ ವೈಫಲ್ಯಗಳನ್ನು ಮರೆಮಾಚಲು ಅನೇಕ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.


ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಜನರು ಬೆಂಬಲಿಸುತ್ತಾರೆ. ಇದರ ಜೊತೆಗೆ ಪಕ್ಷದ ಎಲ್ಲಾ ಪ್ರಮುಖ ನಾಯಕರು ಸರ್ಕಾರದ ಅಭಿವೃದ್ಧಿ ಅಂಶಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.


ಇದನ್ನೂ ಓದಿ: ಸ್ಟಾರ್‌ ಹಿರೋಯಿನ್‌ಗಳನ್ನೂ ಮೀರಿಸುವ ಅಂದಗಾರ್ತಿ ನಟ ಅರ್ಜುನ್‌ ಸರ್ಜಾ 2ನೇ ಪುತ್ರಿ..!


ಭಾರತೀಯರ ಬದುಕಿನ ಸುಧಾರಣೆಗೆ ಬಿಜೆಪಿ ಏನಾದರೂ ಕೊಡುಗೆ ಒಟ್ಟಿದೆಯೇ? 2014 ರಲ್ಲಿ 453 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 1300 ಕ್ಕೆ ಏರಿಕೆಯಾಗಿದೆ. ಬಡವರ, ಮಧ್ಯಮ ವರ್ಗದವರ ಸ್ಥಿತಿ ಕೆಳಕ್ಕೆ ಬಿದ್ದಿದೆ. ಇದಕ್ಕೆ ಮೋದಿ ಸರ್ಕಾರ ಒಂದೇ ಒಂದು ಕಾರ್ಯಕ್ರಮವನ್ನು ರೂಪಿಸಿಲ್ಲ.ಮಾಜಿ ಪ್ರಧಾನಿಗಳು ದೇಶದ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡುತ್ತಿದ್ದರು, ಮಾತನಾಡುತ್ತಿದ್ದರು. ಆದರೆ ಮೋದಿಯವರು ಸಾರ್ವಜನಿಕ ಸಭೆಗಳಲ್ಲಿ ಮಾತ್ರ ಮಾತನಾಡುತ್ತಾರೆ. ಪೆಟ್ರೋಲ್ ಬೆಲೆ  102  ಕ್ಕೆ ಏರಿಕೆಯಾದಾಗ ಎಲ್ಲಿ ಹೋಗಿದ್ದರು ಮೋದಿಯವರು ಎಂದು ಪ್ರಶ್ನಿಸಿದರು.


2024 ರಲ್ಲಿ ಬಿಜೆಪಿ ಕೊಟ್ಟಿರುವ ಭರವಸೆಗಳು ಸುಳ್ಳಿನ ಭರವಸೆಗಳು. ಕಳೆದ 10  ವರ್ಷಗಳಲ್ಲಿ ಏನೂ ಮಾಡಲಿಲ್ಲ. ರಾಜ್ಯದಲ್ಲಿ ಕೇವಲ 9 ತಿಂಗಳಲ್ಲಿ ಗ್ಯಾರಂಟಿಗಳನ್ನು ಈಡೇರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಮೋದಿಯವರೇ ನಿಮಗೆ ಜನರ ಕಷ್ಟಗಳನ್ನು ಬಗೆಹರಿಸುವ ಹಂಬಲ ಇದೆಯೇ? ಬಿಜೆಪಿಯ ನಾಯಕರಿಗೆ ದಿನದ 24 ಗಂಟೆಯೂ ಮೋದಿಯವರ ಜಪ ಮಾಡುವುದೇ ಕೆಲಸ.ಬಿಜೆಪಿಯವರೇ ನಿರುದ್ಯೋಗ, ಬೆಲೆಏರಿಕೆ ಈ ದೇಶದ ಸಮಸ್ಯೆಗಳಲ್ಲವೇ? ನಿಮ್ಮ ಆಲೋಚನೆ ಕೇವಲ ಅದಾನಿ, ಅಂಬಾನಿ ಪರವಾಗಿ ಮಾತ್ರ ಇದೆ. 2014 ರಲ್ಲಿ ಮುಖೇಶ್ ಅಂಬಾನಿ ಬಳಿ 2,360 ಕೋಟಿ ಡಾಲರ್ ಆಸ್ತಿ ಇತ್ತು 11,690 ಕೋಟಿಗೆ ಅವರ ಆಸ್ತಿ ತಲುಪಿದೆ ಎಂದು ಟೀಕಾ ಪ್ರಹಾರ ನಡೆಸಿದರು.


ಇದನ್ನೂ ಓದಿ- Voter ID ಕಳೆದುಹೋಗಿದೆಯೇ? ಈ ದಾಖಲೆಗಳನ್ನು ನೀಡಿ ಮತ ಚಲಾಯಿಸಬಹುದು!


ಬಿಜೆಪಿಯವರು ಜನರನ್ನು ಶ್ರೀಮಂತರನ್ನಾಗಿ ಮಾಡುವುದರ ಬದಲು ಕೇವಲ ಉದ್ದಿಮೆದಾರರ ಸಾಲಮನ್ನಾ ಮಾಡುತ್ತಿದೆ. 2014 ರಲ್ಲಿ 800 ಕೋಟಿ ಡಾಲರ್ ಇತ್ತು, 2024 ರಲ್ಲಿ 8 ಸಾವಿರದ 64 ಕೋಟಿ ಡಾಲರ್ ಆಗಿದೆ. ಅಂದರೆ ಕೇವಲ  ಶ್ರೀಮಂತರು ಮಾತ್ರ ಉದ್ದಾರ ಆಗಿದ್ದಾರೆಯೇ? ಸಂಸದೀಯ ವ್ಯವಸ್ಥೆಗಳನ್ನು ದುರ್ಬಲಗೊಳಿಸಲಾಗಿದೆ.ಆಪರೇಷನ್ ಕಮಲದ ಮೂಲಕ, ರೆಸಾರ್ಟ್ ರಾಜಕೀಯದ ಮೂಲಕ ಸಂಸದೀಯ ವ್ಯವಸ್ಥೆಯನ್ನು ಸಡಿಲ ಮಾಡುತ್ತಿದೆ ಬಿಜೆಪಿ.  ಬಹುತ್ವದ ಮೇಲೆ ನಂಬಿಕೆ ಇಲ್ಲ. ಮಾನವೀಯ ಸಂಬಂಧಗಳಿಗೆ ಬಿಜೆಪಿ ಧಕ್ಕೆ ತರುತ್ತಿದೆ. 5 ವರ್ಷ ಅಧಿಕಾರ ಸಿಕ್ಕರೆ ಸಾಕು ದೇಶವನ್ನು ಅಪಾಯದ ಸ್ಥಿತಿಗೆ ಬಿಜೆಪಿ ದೂಡಲಿದೆ ಎಂದು ಅವರು ಕಿಡಿಕಾರಿದರು.


ರೈತರನ್ನು ಬೀದಿಯಲ್ಲಿ ನಿಲ್ಲಿಸಿದ ಕೀರ್ತಿ ಮೋದಿ ಸರ್ಕಾರದ್ದು. ಕಾರ್ಮಿಕರು ಮುಷ್ಕರ ಮಾಡುವ ಹಕ್ಕನ್ನೇ ಕಸಿಯಲಾಗಿದೆ. ಕಾರ್ಮಿಕರು ಇಲ್ಲದೇ ಪ್ರಗತಿ ಇಲ್ಲ. ಆದರೆ ಅವರನ್ನೇ ಕಟ್ಟಿ ಹಾಕಲಾಗಿದೆ. ವೈಯಕ್ತಿಕ ತೇಜೋವಧೆಗೆ ಬಿಜೆಪಿ ಇಳಿದಿದೆ. ತಮ್ಮ ರಾಜಕೀಯ ಎದುರಾಳಿಗಳನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು


ದೇವರಾಜ ಅರಸು ಅವರು ಇಂದಿರಾಗಾಂಧಿ ಅವರ ನೇತೃತ್ವದಲ್ಲಿ 20 ಅಂಶಗಳ ಕಾರ್ಯಕ್ರಮಗಳ ಮೂಲಕ ಬಡತನ ನಿರ್ಮೂಲನೆಗೆ ಅಡಿಪಾಯ ಹಾಕಿದರು. ಈ ಕಾರಣದಿಂದ ನಮ್ಮ ರಾಜ್ಯವೂ ಪ್ರಗತಿ ಹೊಂದಿದ ರಾಜ್ಯವಾಗುತ್ತಿದೆ. ಈ ಸಾಧನೆಗಳು ಬಿಜೆಪಿ ಕಾಲದಲ್ಲಿ ಆಗಿಲ್ಲ. ಕಾಂಗ್ರೆಸ್ ಕಾಲದಲ್ಲಿ ಈ ದೇಶವನ್ನು ಕಟ್ಟುವ ಕೆಲಸ ಆಗಿದೆ. ಈಗಲೂ ಆಗುತ್ತಿದೆ ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಮತ್ತು ಮಾಧ್ಯಮ ಕಾರ್ಯದರ್ಶಿ ಶ್ರೀ ದೀಪಕ್ ತಿಮ್ಮಯ ಅವರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.