Voter ID ಕಳೆದುಹೋಗಿದೆಯೇ? ಈ ದಾಖಲೆಗಳನ್ನು ನೀಡಿ ಮತ ಚಲಾಯಿಸಬಹುದು!

Voter ID: ಮತದಾನ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ಹೊಂದಿರುವುದು ಬಹಳ ಮುಖ್ಯ. ಆದರೆ, ನೀವು ವೋಟರ್ ಐಡಿ ಮಾಡಿಸಿದ್ದು ನಿಮ್ಮ ವೋಟರ್ ಐಡಿ ಏನಾದರೂ ಕಳೆದು ಹೋಗಿದ್ದರೆ ಅಂತಹ ಸಂದರ್ಭದಲ್ಲಿ ಚಿಂತಿಸಬೇಕಿಲ್ಲ. ನೀವು ಕೆಲವು ದಾಖಲೆಗಳನ್ನು ತೋರಿಸುವ ಮೂಲಕ ಮತ ಚಲಾಯಿಸಬಹುದು. 

Written by - Yashaswini V | Last Updated : Apr 19, 2024, 11:16 AM IST
  • ದೇಶದ ಸಂವಿಧಾನವು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬ ನಾಗರಿಕರಿಗೂ ಮತದಾನದ ಹಕ್ಕನ್ನು ನೀಡುತ್ತದೆ.
  • 18ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಪ್ರತಿ ಭಾರತೀಯ ನಾಗರೀಕರೂ ಕೂಡ ಚುನಾವಣೆಯಲ್ಲಿ ಮತ ಚಲಾಯಿಸಬಹುದು.
  • ಆದರೆ, ನೀವು ವೋಟ್ ಮಾಡಲು ಹೊರಡುವಾಗ ನಿಮ್ಮ ವೋಟರ್ ಐಡಿ ಕಾಣದಿದ್ದರೆ ಇದರಿಂದ ಆತಂಕಗೊಳ್ಳುವ ಅಗತ್ಯವಿಲ್ಲ.
Voter ID ಕಳೆದುಹೋಗಿದೆಯೇ? ಈ ದಾಖಲೆಗಳನ್ನು ನೀಡಿ ಮತ ಚಲಾಯಿಸಬಹುದು! title=

Voter ID Card: ಪ್ರಸ್ತುತ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಏಪ್ರಿಲ್ 26, ಮೇ 07ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬ ನಾಗರೀಕನ ಹಕ್ಕು ಮಾತ್ರವಲ್ಲ ಕರ್ತವ್ಯವೂ ಹೌದು. ಮತದಾನದ ದಿನ ಒಂದೊಮ್ಮೆ ನಿಮ್ಮ ವೋಟರ್ ಐಡಿ ಕಾಣಿಸದಿದ್ದರೆ ಅಥವಾ ನೀವು ನಿಮ್ಮ ವೋಟರ್ ಐಡಿ ಅನ್ನು ಕಳೆದುಕೊಂಡಿದ್ದರೆ ಇಂತಹ ಸಂದರ್ಭದಲ್ಲಿ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಬೇರೆ ಕೆಲವು ದಾಖಲೆಗಳನ್ನು ತೋರಿಸಿ ನೀವು ಮತ ಚಲಾಯಿಸಬಹುದು. 

ಚುನಾವಣಾ ಆಯೋಗದ  (Election Commission) ಪ್ರಕಾರ, ಮತದಾರರ ಗುರುತಿನ ಚೀಟಿ (Voter ID Card) ಇಲ್ಲದಿದ್ದರೂ ಮತದಾನ ಮಾಡಲು ಅವಕಾಶ ನೀಡಲಾಗುವುದು. ನೀವು ನೋಂದಾಯಿತ ಮತದಾರರಾಗಿದ್ದರೆ, ಮತದಾರರ ಗುರುತಿನ ಚೀಟಿಯನ್ನು ತೋರಿಸದೆಯೂ ನೀವು ಮತದಾನದ ಹಕ್ಕನ್ನು ಪಡೆಯುತ್ತೀರಿ. ವೋಟರ್ ಐಡಿ ಹೊರತುಪಡಿಸಿ, ಇನ್ನಿತರ 12 ಪ್ರಮುಖ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ತೋರಿಸಿ  ಭಾರತೀಯ ನಾಗರೀಕರು ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದು. 

ಇದನ್ನೂ ಓದಿ- Lok Sabha Election 2024: ಮೊದಲ ಹಂತದಲ್ಲಿ ಕಣದಲ್ಲಿರುವ ಅತಿ ಶ್ರೀಮಂತ ಹಾಗೂ ಬಡ ಅಭ್ಯರ್ಥಿಯ ಆಸ್ತಿ ಪ್ರಮಾಣ ಎಷ್ಟು ಗೊತ್ತೇ?

ವೋಟರ್ ಐಡಿ ಇಲ್ಲದೆ ಮತದಾನ (Voting without Voter ID) ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಆದರೆ, ಇದಕ್ಕಾಗಿ ನೀವು ವೋಟರ್ ಐಡಿ ಹೊರತುಪಡಿಸಿ ಕೆಲವು ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಆ 12 ದಾಖಲೆಗಳು ಯಾವುವು ಎಂದು ನೋಡುವುದಾದರೆ... 
>> ಆಧಾರ್ ಕಾರ್ಡ್
>> ಪ್ಯಾನ್ ಕಾರ್ಡ್
>> ವಿಶಿಷ್ಟ ಅಂಗವೈಕಲ್ಯ ಐಡಿ ಅಂದರೆ ಯುಡಿಐಡಿ ಐಡಿ 
>> ಸೇವಾ ಐಡಿ ಕಾರ್ಡ್
>> ಅಂಚೆ ಕಛೇರಿ ಮತ್ತು ಬ್ಯಾಂಕ್ ನೀಡಿದ ಪಾಸ್‌ಬುಕ್
>> ಕಾರ್ಮಿಕ ಸಚಿವಾಲಯ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
>> ಚಾಲನಾ ಪರವಾನಿಗೆ
>> ಪಾಸ್ಪೋರ್ಟ್
>> ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್
ಪಿಂಚಣಿ ಕಾರ್ಡ್
>> MP-MLA ಮತ್ತು MLC ಗಾಗಿ ಅಧಿಕೃತ ಗುರುತಿನ ಚೀಟಿ ನೀಡಲಾಗಿದೆ
>> MNREGA ಜಾಬ್ ಕಾರ್ಡ್

ಇದನ್ನೂ ಓದಿ- Lok Sabha Election 2024: "ದೇಶದ ಆರ್ಥಿಕತೆ ಕುಸಿತ ಮೋದಿಯವರ ಸಾಧನೆ. ಈ ಚಂದಕ್ಕೆ ಇವರು ಪ್ರಧಾನಿ ಆಗ್ಬೇಕಾ?"

ಆದರೆ, ನೀವು ಈ ದಾಖಲೆಗಳನ್ನು ತೋರಿಸಿ ಮತ ಚಲಾಯಿಸಲು ಬಯಸಿದರೆ ಇದಕ್ಕಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದು ಅಗತ್ಯವಾಗಿದೆ. ಹಾಗಾಗಿ, ನೀವು ಮತ ಚಲಾಯಿಸಲು ಹೋಗುವ ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News