ಧಾರವಾಡ: ಭಾರತ ಚುನಾವಣಾ ಆಯೋಗದ ಎಲ್ಲರೂ ಒಳಗೊಳ್ಳುವಿಕೆ ಆಶಯದಂತೆ ಮತ್ತಿ ಮತದಾನ ಹಕ್ಕು ಪಡೆದಿರುವ ಅರ್ಹ ಯಾರು ಮತದಾನದಿಂದ ಹೊರಗುಳಿಯದಂತೆ ಜಾಗೃತಿವಹಿಸಲು ಪ್ರಜಾಪ್ರಭುತ್ವದಲ್ಲಿ ಮತದಾನದ ವಿನೂತನ ಕ್ರಮವಾದ ಮನೆಯಿಂದಲೇ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 7 ಗಂಟೆಯಿಂದ ಜಿಲ್ಲೆಯಲ್ಲಿ ಆರಂಭವಾಗಿದ್ದು, ನೋಂದಾಯಿತ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಖುಷಿಯಿಂದ ತಮ್ಮ ಮನೆಯಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಿ, ಜಿಲ್ಲಾಡಳಿತಕ್ಕೆ, ಚುನಾವಣಾ ಆಯೋಗಕ್ಕೆ ಧನ್ಯತೆ ಅರ್ಪಿಸಿದರು.


COMMERCIAL BREAK
SCROLL TO CONTINUE READING

ಮನೆಯಿಂದಲೇ ಮತದಾನ ಪ್ರಕ್ರಿಯೆ ಅತೀ ಮಹತ್ವದ್ದು ಮತ್ತು ದೈಹಿಕವಾಗಿ ಒಂದಲ್ಲ ಒಂದು ರೀತಿಯಲ್ಲಿ ಅಶಕ್ತರಾಗಿರುವವರಿಗೆ ಇದು ಅತ್ಯಂತ ಉಪಯುಕ್ತವಾಗಿದೆ. ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿರುವ ಧಾರವಾಡ ನಗರದ ಕಮಲಾಪುರ, ಮಾಳಾಪುರ, ಸಾಧನಕೇರಿ, ದೊಡ್ಡನಾಯಕನಕೋಪ್ಪ, ಸಾರಸ್ವತಪುರ ಪ್ರದೇಶಗಳಿಗೆ ಇಂದು ಬೆಳಿಗ್ಗೆಯಿಂದ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತೆರಳಿ, ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಮನೆಗಳಿಗೆ ಖುದ್ದು ಭೇಟಿ ನೀಡಿ, ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಮತ್ತು ಮತ ಚಲಾಯಿಸಿದ ಮತದಾರರನ್ನು ಮಾತನಾಡಿಸಿದರು.


ಇದನ್ನೂ ಓದಿ: ಬರ್ತ್ ಟ್ಯಾಕ್ಸ್ಯೂ ಇಲ್ಲ, ಡೆತ್ ಟ್ಯಾಕ್ಸ್ಯೂ ಇಲ್ಲ, ಪಿತ್ರೊಡಾ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ 


ನಂತರ ಅವರು ಮಧ್ಯಾಹ್ನ ಧಾರವಾಡ ಕಮಲಾಪುರ ಶಾಲೆ ನಂಬರ 4 ರಲ್ಲಿ ಸ್ಥಾಪಿಸಿರುವ ವಿವಿಧ ಮತಗಟ್ಟೆಗಳ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಚುನಾವಣಾ ಆಯೋಗದಿಂದ ಅಧಿಸೂಚಿತಗೊಂಡ ಅಗತ್ಯ ಸೇವೆಯಡಿ ಬರುವ 16 ಇಲಾಖೆಗಳ ನೌಕರರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.


ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಅಂಚೆ ಮತದಾನ ಕೇಂದ್ರ ಸ್ಥಾಪನೆ: ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿನ ಅಂಚೆ ಮತದಾನ ಮಾಡುವ ನೌಕರರಿಗೆ ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಮೇ 1 ರಿಂದ ಮೇ 3 ರವರೆಗೆ ಮತದಾನ ಕೇಂದ್ರ ತೆರೆಯಲಾಗುತ್ತದೆ. ನಮೂನೆ 12ಡಿ ಪಡೆದು, ಅನುಮೋದಿತವಾಗಿರುವ ಅಂಚೆ ಮತದಾರರು ಧಾರವಾಡ ತಹಸಿಲ್ದಾರ ಕಚೇರಿಯಲ್ಲಿ ಸ್ಥಾಪಿತವಾಗುವ ಮತಗಟ್ಟೆಯು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ. ಈ ಸಮಯದಲ್ಲಿ ಬಂದು ತಮ್ಮ ಮತ ಚಲಾಯಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.


ಬೇರೆ ಜಿಲ್ಲೆಯ ಮತದಾರ ಅನುಕೂಲಕ್ಕಾಗಿ ಹೊಸದಾಗಿ ಅಂಚೆ ಮತಪತ್ರ ವಿನಿಮಯ (ಎಕ್ಸಚೈಂಜ್) ಕೇಂದ್ರ ಸ್ಥಾಪನೆ: ನೌಕರ ಕರ್ತವ್ಯ ಸಲ್ಲಿಸುವ ಜಿಲ್ಲೆ ಮತ್ತು ಮತದಾರನಾಗಿರುವ ಜಿಲ್ಲೆ ಬೇರೆ ಬೇರೆ ಆಗಿದ್ದಲ್ಲಿ ಅವರು ಮತದಾಮ ಮಾಡಲು ಅನುಕೂಲವಾಗುವಂತೆ ಅಂಚೆ ಮತಪತ್ರಗಳನ್ನು ವಿತರಿಸಿ, ಸಂಗ್ರಹಿಸಿ, ಅವರು ಮತದಾರರಾಗಿರುವ ಜಿಲ್ಲೆಗಳಿಗೆ ಕಳುಹಿಸಲು ಮತ್ತು ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧಾರವಾಡ ಜಿಲ್ಲೆಯ ನೌಕರರ ಅಂಚೆ ಮತಪತ್ರ ಪಡೆಯಲು ಅನುಕೂಲವಾಗುವಂತೆ ಭಾರತ ಚುನಾವಣಾ ಆಯೋಗವು ಪ್ರಥಮ ಬಾರಿಗೆ ಎಕ್ಸಚೈಂಜ್ ಸೆಂಟರ್ ತೆರೆದಿದ್ದು, ಅದು ಧಾರವಾಡ ನಗರದ ಆರ್.ಎಲ್.ಎಸ್. ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಲಿದೆ.


ಇಡೀ ರಾಜ್ಯದಲ್ಲಿ ಇಂತ ಎರಡು ಎಕ್ಸಚೈಂಜ್ ಕೇಂದ್ರಗಳು ಮಾತ್ರ ಇದ್ದು, ರಾಜ್ಯ ಜಿಲ್ಲೆಗಳಲ್ಲಿ ಏ.26 ರಂದು ಜರುಗುವ ಎರಡನೇ ಹಂತದ ಚುನಾವಣೆಯ ಕರ್ತವ್ಯನಿರತ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಮತ್ತು ಮೇ 7 ರಂದು ಮತದಾನ ಜರುಗುವ ಜಿಲ್ಲೆಗಳಲ್ಲಿ ಕರ್ತವ್ಯನಿರತ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಚುನಾವಣಾ ಆಯೋಗ ಧಾರವಾಡ ಜಿಲ್ಲೆಯಲ್ಲಿ ಏಕ್ಸಚೈಂಜ್ ಸೆಂಟರ್ ಸ್ಥಾಪಿಸಿದೆ. ಧಾರವಾಡ ಜಿಲ್ಲಾಡಳಿತದಿಂದ ಸಿಬ್ಬಂದಿ ನೇಮಿಸಿ, ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.


ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ರೂ.21,47,59,890 ಮಾಲ್ಯದ ವಸ್ತು, ನಗದು ಜಪ್ತಿ: 916 ಪ್ರಕರಣ ದಾಖಲು:* ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಧಾರವಾಡ ಜಿಲ್ಲೆಯಲ್ಲಿ ಮಾರ್ಚ 16 ರಿಂದ ಇವತ್ತಿನವರೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಡಿ ನಗದು ರೂ. 20,35,52,970 ಮತ್ತು ಚಿನ್ನ, ನಗದು, ಡ್ರಗ್ಸ್, ಮದ್ಯ, ಉಚಿತ ಕೊಡುಗೆಗಳು ಸೇರಿದಂತೆ ರೂ.1,12,06,920 ಗಳ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ ನಗದು ಸೇರಿ ರೂ. 21,47,59,890 ಗಳ ಮಾಲ್ಯದ ವಸ್ತುಗಳು ಜಪ್ತಿಯಾಗಿವೆ ಮತ್ತು ಕ್ಯಾಶ್ ರೀ ಅಡ್ರಸಲ್ ಕಮೀಟಿಯಿಂದ ಜಪ್ತಿಗೆ ಸರಿಯಾದ ದಾಖಲೆ ಸಲ್ಲಿಸಿದ ಪ್ರಕರಣಗಳಲ್ಲಿ ಅವುಗಳ ಮಾಲೀಕರಿಗೆ ಇವತ್ತಿನವರೆಗೆ ರೂ.19,16,500 ಗಳ ನಗದು ಮರಳಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ: ಮುಸ್ಲಿಮರಿಗೆ ಒಬಿಸಿ, ದಲಿತರಿಗೆ ಅನ್ಯಾಯ: ಕಾಂಗ್ರೆಸ್ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ಆರೋಪ


ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ಎಫ್.ಎಸ್.ಟಿ ಮತ್ತು ಎಸ್.ಎಸ್.ಟಿ ತಂಡಗಳಿಂದ 12 ಪ್ರಕರಣಗಳಲ್ಲಿ, 76 ಪ್ರಕರಣಗಳಲ್ಲಿ ಪೆÇಲೀಸ್, 826 ಪ್ರಕರಣಗಳಲ್ಲಿ ಅಬಕಾರಿ ಇಲಾಖೆ ಎಫ್.ಐ.ಆರ್ ದಾಖಲಿಸಿದೆ. ಒಟ್ಟಾರೆ 916 ಪ್ರಕರಣಗಳು ಇವತ್ತಿನವರೆಗೆ ದಾಖಲಾಗಿವೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.


ಮತದಾರರ ಅಭಿಪ್ರಾಯ:


ಶಂಕ್ರವ್ವ ಕಲಘಟಗಿ; ಧಾರವಾಡ ಕಮಲಾಪುರ ಕೋಟಿ ಓಣಿ ನಿವಾಸಿಯಾಗಿರುವ 101 ವರ್ಷದ ಶತಾಯುಷಿ ಶಂಕ್ರವ್ವ ಕಲಘಟಗಿ ಅವರಿಗೆ ಕಣ್ಣು ಕಾಣಿಸುವದಿಲ್ಲ. ಅವರ ಹಿರಿಯ ಮಗ ಪರಪ್ಪ ಕಲಘಟಗಿ ಸಹಾಯದಿಂದ ಮತ ಚಲಾಯಿಸಿದರು. ಹಾಸಿಗೆ ಹಿಡಿದಿರುವ ನಮ್ಮಂತ ಮುದುಕರಿಗೆ ಮತ ಹಾಕಲು ಅವಕಾಶ ಕೊಟ್ಟ ನಿಮಗೆ ಪುಣ್ಯ ಹತ್ತಲಿ ಎಂದರು. ಅವರ ಮಗ ಪರಪ್ಪ ಮಾತನಾಡಿ, ಇದು ಬಾಳ ಚಲೋ ಕೆಲಸ. ಮನೆಯಿಂದಲೇ ಮತದಾನದ ಅವಕಾಶ ಇಲ್ಲದಿದ್ರ, ನಮ್ಮವ್ವ ಮತ ಹಾಕ ಆಕ್ಕಿರಲಿಲ್ಲ. ಇಂತ ವಯಸ್ಸಿನಾಗ ಅವರನ್ನ ಮತಗಟ್ಟೆಗೆ ಕರೆದುಕೊಂಡೊಗೊದು ಕಷ್ಟ. ಈ ಸೌಲಭ್ಯ ಇಲ್ಲದಿದ್ರ ನಮ್ಮಂವನ ವೋಟ್ ವೆಸ್ಟ್ ಆಗತಿತ್ತು. ಜಿಲ್ಲಾಧಿಕಾರಿಗಳಿಗೆ ನನ್ನ ಧನ್ಯವಾದ ಅಂದ್ರು.


ಉಳವಪ್ಪ ಸತ್ಯನ್ನನವರ: ಧಾರವಾಡ ಮಾಳಾಪುರ ರಸ್ತೆ, ಹಾಳಭಾವಿ ಸರ್ಕಲ್ ಓಣಿ ನಿವಾಸಿ 85 ವರ್ಷದ ಹಿರಿಯ ನಾಗರಿಕ ಉಳವಪ್ಪ ಯಲ್ಲಪ್ಪ ಸತ್ಯನ್ನವರ ಮಾತನಾಡಿ, ಸ್ವಂತ ಜಿಲ್ಲಾಧಿಕಾರಿ ನಮ್ಮ ಮನಿಗೆ ಬಂದಿದ್ದು, ನಾನು ಮತ ಹಾಕಿದ್ದಕ್ಕೂ ಸಾರ್ಥಕವಾಯಿತು. ನನ್ನ ಒಬ್ಬನ ಸಲುವಾಗಿ ನಮ್ಮ ಮನೀನ ಮತಗಟ್ಟೆ ತರಾ ಮಾಡಿ, ಯಾರಿಗೂ ಕಾಣದಂಗ ನನ್ನ ವೊಟ್ ಪಡದ್ರು. ಆ ಟೈಮದಾಗ, ನಮ್ಮ ಮನಿ ಮತಗಟ್ಟೆ ತರಾ ಅನಸತಿತ್ತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.