Lok Sabha election 2024: ಬಿಸಿಲನಾಡಿನಲ್ಲಿ ಮತ್ತೆ ಕಾವೇರಿದ ಲೋಕಸಭಾ ಚುನಾವಣೆ
Lok Sabha election 2024: ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆ, ಬಿಸಿಲ ನಗರಿ, ಎಡೆದೊರೆ ನಾಡು, ಹತ್ತಿ ಕಣಜ ಅಂತೆಲ್ಲಾ ಕರೆಯುವ ರಾಯಚೂರು ಜಿಲ್ಲೆಯಲ್ಲಿ ಬಹುಭಾಷಿಗರನ್ನು ಒಡಲಲ್ಲಿಟ್ಟುಕೊಂಡು ಪೋಷಿಸುತ್ತಿದೆ. ಬೇಸಿಗೆಕಾಲದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದ್ರೆ 45 ಡಿಗ್ರಿ ಉಷ್ಣತೆಯಲ್ಲಿ ಇಲ್ಲಿ ಜನರು ಬದುಕುತ್ತಾರೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಯು ಆರಂಭವಾಗಿದೆ. ಏಳು ಹಂತಗಳ ಉಮೇದುವಾರಿಕೆಯಲ್ಲಿ ಹಲವು ಏರಿಳಿತ ಕಾಣುತ್ತಿದ್ದು ಮತಬೇಟೆ ಕೂಡ ಬಿರುಸಾಗಿ ಸಾಗಿದೆ. ಈ ಹಂತದಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಮತದಾರರ ಜಾಗೃತಿಯನ್ನ ಜೀ ಕನ್ನಡ ನ್ಯೂಸ್ ನಡೆಸುತ್ತಿದ್ದು ಕ್ಷೇತ್ರದ ವಿಸ್ತಾರ ಪರಿಚಯ ಕೂಡ ಆರಂಭವಾಗಿದೆ. ಸಂಸತ್ ಕ್ಷೇತ್ರದಲ್ಲಿ ಕಾಡುತ್ತಿರುವ ಸಮಸ್ಯೆಗಳು, ಹಿಂದೆ ಗೆದ್ದಿರೋ ಪಕ್ಷ ಮತ್ತು ನಾಯಕರ ಸಾಧನೆ, ಜಾತಿವಾರು ಶಕ್ತಿ ಹೇಗೆ ಪ್ರಭಾವ ಬೀರಲಿದೆ..? ನಿರ್ಣಾಯಕ ಸಾಮಾಜಿಕ ಅಂಶ ಹಾಗೂ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ಏನೇನು..? ಅಭ್ಯರ್ಥಿಗಳ ಗೆಲುವಿಗೆ ಮತದಾರನ ಮೇಲೆ ಪ್ರಭಾವ ಬೀರುವ ಅಂಶ ನಿಮ್ಮ ಮುಂದಿಡುವ ಕಾರ್ಯಕ್ರಮವೇ ಕ್ಷೇತ್ರ ಪರಿಚಯ.
ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆ, ಬಿಸಿಲ ನಗರಿ, ಎಡೆದೊರೆ ನಾಡು, ಹತ್ತಿ ಕಣಜ ಅಂತೆಲ್ಲಾ ಕರೆಯುವ ರಾಯಚೂರು ಜಿಲ್ಲೆಯಲ್ಲಿ ಬಹುಭಾಷಿಗರನ್ನು ಒಡಲಲ್ಲಿಟ್ಟುಕೊಂಡು ಪೋಷಿಸುತ್ತಿದೆ. ಬೇಸಿಗೆಕಾಲದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದ್ರೆ 45 ಡಿಗ್ರಿ ಉಷ್ಣತೆಯಲ್ಲಿ ಇಲ್ಲಿ ಜನರು ಬದುಕುತ್ತಾರೆ. ರಾಜ್ಯಕ್ಕೆ ಸುಮಾ ರು 45% ವಿದ್ಯುತ್ ಕೂಡ ಇದೇ ಜಿಲ್ಲೆಯಿಂದಲೇ ಪೂರೈಕೆ ಆಗ್ತದೆ.ಆ ನಿಟ್ಟಿನಲ್ಲಿ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಸ್ಥಾವರ & ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳು ಇಲ್ಲಿ ತಲೆಎತ್ತಿ ನಿಂತಿವೆ. ದೇಶದಲ್ಲಿಯೇ ಅತಿ ಹೆಚ್ಚು ಗಟ್ಟಿ ಚಿನ್ನದ ಅದಿರು ಉತ್ಪಾದಿಸುವ ಹಟ್ಟಿ ಚಿನ್ನದ ಗಣಿ ಕಂಪನಿ ಈ ಜಿಲ್ಲೆಗೆ ಬಂಗಾರದ ಕಳಸ ಇದ್ದಂತೆ . ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಟ್ರಾಕ್ಟರ್ ಗಳು ಸೇಲ್ ಆಗುವುದು ಕೂಡ ಈ ಜಿಲ್ಲೆಯ ಸಿಂಧನೂರು ತಾಲೂಕುವೊಂದರಲ್ಲೇ. ಇಲ್ಲಿ ಬೆಳೆಯುವ ಭತ್ತ ದೇಶದ ವಿವಿಧೆಡೆ ರಫ್ತಾಗುತ್ತದೆ. ಹೀಗಾಗಿ ರಾಯಚೂರು ಜಿಲ್ಲೆಯಲ್ಲಿ ಅನ್ನವುಯಿದೆ, ಚಿನ್ನವೂಯಿದೆ ಅಂತ ಕವಿಗಳು ಹಾಡಿ ಹೊಗಳುತ್ತಾರೆ.
ಇದನ್ನೂ ಓದಿ: ನಟಿ ಹೇಮಾಮಾಲಿನಿ ಬಗ್ಗೆ ಅಶ್ಲೀಲ ಟೀಕೆ; ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!
ಈ ಜಿಲ್ಲೆಯು ರಾಜಕೀಯ ನಾಯಕರನ್ನ ಹುಟ್ಟು ಹಾಕುವ ಕಾರ್ಖಾನೆ ಇದ್ದಂತೆ. ಬಿಸಿಲಿನ ಕಾವು ಹೆಚ್ಚಾದಂತೆ ಚುನಾವಣೆ ಕಾವು ಕೂಡ ಹೆಚ್ಚಾಗ್ತದೆ. ಈ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ & ಜಾತಿ ರಾಜಕಾರಣ ಈವರೆಗೂ ಚಾಲ್ತಿಯಲ್ಲಿದೆ. ರಾಯಚೂರು ಲೋಕಸಭಾ ಕ್ಷೇತ್ರ 1957 ರಲ್ಲಿ ಅಸ್ತಿತ್ವಕ್ಕೆ ಬಂದಿದೆ.ಈ ಕ್ಷೇತ್ರದ ವ್ಯಾಪ್ತಿಗೆ ರಾಯಚೂರು & ಯಾದಗಿರಿ ಜಿಲ್ಲೆಗಳು ಸಹ ಒಳಪಡುತ್ತವೆ.ರಾಯಚೂರು, ರಾಯಚೂರು ಗ್ರಾಮೀಣ, ಲಿಂಗಸಗೂರು, ದೇವದುರ್ಗ, ಮಾನ್ವಿ ಸೇರಿ 5 ಕ್ಷೇತ್ರಗಳು ಮತ್ತು ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಮತ್ತು ಯಾದಗಿರಿ ಸೇರಿ ಒಟ್ಟು 8 ಅಸೆಂಬ್ಲಿ ಕ್ಷೇತ್ರಗಳನ್ನ ಒಳಗೊಂಡಿದೆ. ಒಟ್ಟು 8 ಕ್ಷೇತ್ರಗಳ ಪೈಕಿ ಐವರು ಕಾಂಗ್ರೆಸ್ ಶಾಸಕರು ಮತ್ತು ಮೂವರು ಬಿಜೆಪಿ ಶಾಸಕರಿದ್ದಾರೆ. ಅದರಲ್ಲೂ ಈ ಕ್ಷೇತ್ರ 2008ರಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ಹೊಂದಿದ ಕ್ಷೇತ್ರವಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು, 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಪಕ್ಷ, ಅಭ್ಯರ್ಥಿಗಳು ಯಾರು ಅಂತ ನೋಡೋದಾದ್ರೆ..
ರಾಯಚೂರು ಸಂಸತ್ ಕ್ಷೇತ್ರ
ರಾಯಚೂರು ನಗರ : ಬಿಜೆಪಿ -ಡಾ.ಶಿವರಾಜ್ ಪಾಟೀಲ್. 3732 ಮತಗಳ ಗೆಲುವು
ರಾಯಚೂರು ಗ್ರಾಮೀಣ :ಕಾಂಗ್ರೆಸ್ -ಬಸನಗೌಡ ದದ್ದಲ್. 13857 ಮತಗಳ ಗೆಲುವು
ದೇವದುರ್ಗ : ಜೆಡಿಎಸ್ -ಕರೆಮ್ಮ ಜಿ ನಾಯಕ್. 34256 ಮಗಳ ಗೆಲುವು
ಲಿಂಗಸಗೂರು : ಬಿಜೆಪಿ -ಮಾನಪ್ಪ ವಜ್ಜಲ್. 2809 ಮತಗಳ ಗೆಲುವು
ಮಾನ್ವಿ : ಕಾಂಗ್ರೆಸ್ -ಹಂಪಯ್ಯ ನಾಯಕ್. 7719 ಮತಗಳ ಗೆಲುವು
ಶಹಾಪುರ : ಕಾಂಗ್ರೆಸ್ -ಶರಣಬಸಪ್ಪಗೌಡ ದರ್ಶನಾಪುರ. 26027 ಮತಗಳ ಗೆಲುವು
ಸುರುಪುರ : ಕಾಂಗ್ರೆಸ್ -ರಾಜಾ ವೆಂಕಟಪ್ಪ ನಾಯಕ್. 25223 ಮತಗಳ ಗೆಲುವು
ಯಾದಗಿರಿ : ಕಾಂಗ್ರೆಸ್ -ಚನ್ನರಡ್ಡಿ ಪಾಟೀಲ್. 3673 ಮತಗಳ ಗೆಲುವು
2023ರಲ್ಲಿ ಪಕ್ಷಗಳ ಶೇಕಡಾವಾರು ಮತ
* ಕಾಂಗ್ರೆಸ್ - 40.71%
* ಬಿಜೆಪಿ -40.31 %
* ಜೆಡಿಎಸ್ -18.97 %
(ಒಟ್ಟು 8 ಕ್ಷೇತ್ರಗಳ ಸರಾಸರಿ ಮತದಾನ)
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ಮತದಾರರೇ ನಿರ್ಣಾಯಕರು. ಅದರಲ್ಲೂ ಪಾರ್ಲಿಮೆಂಟರಿ ಚುನಾವಣೆಗೆ ಅತಿ ಹೆಚ್ಚು ಸ್ಪರ್ಧಿಸಿದವರು ಕೂಡ ಇದೇ ಕಮ್ಯುನಿಟಿ ನಾಯಕರು. 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಸ್ಪರ್ಧಿಸಿದ ಎ ವೆಂಕಟೇಶ ನಾಯಕ್ ಸುಮಾರು 20 ವರ್ಷಗಳ ಕಾಲ ಸಂಸದರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಕ್ಷೇತ್ರಕ್ಕೆ ಈ ತನಕ 17 ಚುನಾವಣೆ ನಡೆದಿದ್ದು ಅದರಲ್ಲಿ ಬಹುಪಾಲು ಅಂದ್ರೆ 14 ಸಲ ಕಾಂಗ್ರೆಸ್ ಗೆದ್ದಿದ್ದು, ಕೇವಲ ಮೂರು ಸಲ ಅನ್ಯ ಪಕ್ಷದವರು ಆಯ್ಕೆಯಾಗಿದ್ದಾರೆ. ಇಲ್ಲಿನ ಮತದಾರರು ಬಹುತೇಕ ಕಾಂಗ್ರೆಸ್ ಪಕ್ಷದವರಿಗೆ ಸಂಸದ ಸ್ಥಾನವನ್ನು ದೊರಕಿಸಿಕೊಟ್ಟಿದ್ದಾರೆ.ಇದರ ಜೊತೆಗೆ ಒಂದು ಬಾರಿ ಜೆಡಿಎಸ್ ಗೂ ಅವಕಾಶ ಕೊಟ್ಟಿದ್ದಾರೆ. ಇಲ್ಲಿ ರಾಜಕೀಯ ತೋಳ್ಬಲದ ಜೊತೆಗೆ ಜಾತಿ ಪ್ರಾಂತೀಯತೆಯ ಅಭಿಮಾನ, ಅಲೆಗಳ ಲೆಕ್ಕಾಚಾರವೂ ಸೋಲು-ಗೆಲುವನ್ನ ನಿರ್ಧರಿಸುತ್ತದೆ.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳ ಮುಂದೆ ಮೋದಿ ಗ್ಯಾರಂಟಿ ಶೂನ್ಯ : ಸಚಿವ ದಿನೇಶ್ ಗುಂಡೂರಾವ್
ನಿರ್ಣಾಯಕ ಸಾಮಾಜಿಕ ಅಂಶಗಳು:
ಮತದಾರನಿಗೆ ಕನೆಕ್ಟಿಂಗ್ ವಿಷಯಗಳು
. ಜಿಲ್ಲೆಗೆ ಏಮ್ಸ್ ಇಲ್ಲಿಯವರೆಗೆ ಕೊಡದೆ ಇರುವುದು
. ಪ್ರತಿ ಬೇಸಿಗೆಯಲ್ಲಿ ಶೇ. 50 ಗ್ರಾಮೀಣದಲ್ಲಿ ಗುಳೆ ಹೋಗುವುದು
. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಕೂಲಿ ಕೆಲಸ ಮಾಡುತ್ತಿರುವುದು
. ಜಿಲ್ಲೆಯ ಕೆಳ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಸದಿರುವುದು
. ಗ್ರಾಮೀಣ ಭಾಗದಲ್ಲಿ ತೀವ್ರತರ ಶುದ್ಧ ಕುಡಿಯುವ ನೀರಿನ ಸಮಸ್ಯೆ
. ಕೃಷ್ಣಾ ಮೇಲ್ದಂಡೆಯ ನಾರಾಯಣಪೂರ ಜಲಾಶಯ ಎತ್ತರ ಹೆಚ್ಚಿಸುವುದು
ಮತದಾರರ ಸಂಖ್ಯೆ:
ಒಟ್ಟು ಮತದಾರರ ಸಂಖ್ಯೆ :19,52,545
ಪುರುಷ ಮತದಾರರು - 9,70,479
ಮಹಿಳಾ ಮತದಾರರು - 9,82,066
ಅತಿ ಹೆಚ್ಚು ಸಲ ಕಾಂಗ್ರೆಸ್ ಗೆಲುವು ಸಾಧಿಸುವುದರ ಮೂಲಕ ಭದ್ರವಾಗಿದ್ದ ಕೋಟೆಗೆ ಬಿ. ಶ್ರೀರಾಮುಲು ಅವರ ಸಹೋದರ ಸಂಬಂಧಿ ಸಣ್ಣ ಫಕೀರಪ್ಪ ಬಿಜೆಪಿಯಿಂದ ಲಗ್ಗೆಯಿಟ್ಟಿದ್ದರು. .2009ರಲ್ಲಿ ಚುನಾವಣೆ ಅಖಾಡಕ್ಕೆ ಧುಮುಕಿದ ಸಣ್ಣ ಪಕೀರಪ್ಪ ಕೈ ಅಭ್ಯರ್ಥಿ ರಾಜ ವೆಂಕಟಪ್ಪ ನಾಯಕ್ ವಿರುದ್ಧ 30,636 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ಬುನಾದಿ ಹಾಕಿದರು. ಆ ಬಳಿಕ ಅಸೆಂಬ್ಲಿ ಎಲೆಕ್ಷನ್ ನಲ್ಲಿ ಎರಡು ಬಾರಿ ಸೋಲು ಕಂಡಿದ್ದ ಬಿ ವಿ ನಾಯ್ಕ್ಕಣಕ್ಕೆ ಇಳಿಸಲು ಕಾಂಗ್ರೆಸ್ ನಾಯಕರು ಗೇಮ್‌ಪ್ಲ್ಯಾನ್ ಮಾಡಿದ್ರು. ಇದೆ ಅನುಕಂಪದ ಅಲೆಯಲ್ಲಿ 2014 ರಲ್ಲಿ ಮೋದಿ ಅಲೆಯ ನಡುವೆಯೂ ಕ್ಷೇತ್ರದ ಮತದಾರರು ಕೇವಲ 1499 ಮತಗಳಿಂದ ಬಿಜೆಪಿ ಅಭ್ಯರ್ಥಿ ಕೆ. ಶಿವನಗೌಡ ನಾಯಕ ಅವರನ್ನು ಸೋಲಿಸಿ ಕಾಂಗ್ರೆಸ್ ನ ಬಿ.ವಿ ನಾಯಕ ಅವರಿಗೆ ಗೆಲುವಿನ ಹಾರ ಹಾಕಿದರು.. 2014ರಲ್ಲಿ ಅತ್ಯ ಅಲ್ಪ ಮತಗಳಿಂದ ಗೆಲುವು ಸಾಧಿಸಿದ ಬಿ ವಿ ನಾಯಕ್ ವಿರುದ್ಧ ಗುಂತಗೋಳ ಸಂಸ್ಥಾನದ ರಾಜ ವಂಶಸ್ಥ ರಾಜಾ ಅಮರೇಶ್ವರ ನಾಯಕ್ ತೊಡೆ ತಟ್ಟಿದ್ದರು. ಎರಡನೇ ಸಲ ಸಂಸದರಾಗಲು ಕಣಕ್ಕೆ ಧುಮುಕಿದ್ದ ಬಿ ವಿ ನಾಯಕ್ ಮತ್ತು ರಾಜಾ ಅಮರೇಶ್ವರ ನಾಯಕ್ ನಡುವೆ ನೇರ ಹಣಾಹಣೆ ಏರ್ಪಟ್ಟಿತ್ತು. ಆದರೆ ಕಾಂಗ್ರೆಸ್ ಕೋಟೆ ಭೇದಿಸಲು ಸರ್ವ ಸನ್ನದ್ಧವಾಗಿದ್ದ ರಾಜಾ ಅಮರೇಶ್ವರ ನಾಯಕ್ 1 ಲಕ್ಷದ 17 ಸಾವಿರದ 716 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಬಿ ವಿ ನಾಯಕ್ ಗೆ ಸೋಲಿನ ರುಚಿ ತೋರಿಸಿದರು..
2024ರ ರಣಕಣ
* ಬಿಜೆಪಿಯಿಂದ ಹಾಲಿ ಸಂಸದರಿಗೆ ಟಿಕೆಟ್. ಕಾರ್ಯಕರ್ತರ ಬೇಸರ
* ಮಾಜಿ ಸಂಸದ ಬಿವಿ ನಾಯಕ್‌ಗೆ ಟಿಕೆಟ್ ನೀಡಿ ಎಂಬ ಒತ್ತಾಯ
* ಬಂಡಾಯ ಶಮನ ಮಾಡುವಲ್ಲಿ BJP ನಾಯಕರು ಬಹುತೇಕ ಸಫಲ
* ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೃತ್ತ IAS ಜಿ ಕುಮಾರ್ ನಾಯಕ್
* 1990ನೇ ಬ್ಯಾಚ್‌ನ ಮಾಜಿ IAS ಅಧಿಕಾರಿ ಕುಮಾರ್ ನಾಯಕ್‌ಗೆ ಟಿಕೆಟ್
* 2023ರ ಸೆಪ್ಟೆಂಬರ್‌ನಲ್ಲಿ BDA ಕಮಿಷನರ್ ಹುದ್ದೆಯಿಂದ ನಿವೃತ್ತರಾಗಿದ್ದರು
* ರಾಯಚೂರು ಜಿಲ್ಲೆಯಲ್ಲೇ ಸುಮಾರು 20 ವರ್ಷಗಳ ಸಾರ್ವಜನಿಕ ಸೇವೆ
* KPCL ವ್ಯವಸ್ಥಾಪಕರಾಗಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದರು
* ಮೂಲತಃ ತಮಿಳುನಾಡು, ರಾಯಚೂರು ನಾಯಕರೊಂದಿಗೆ ಉತ್ತಮ ಒಡನಾಟ
* ಮಲ್ಲಿಕಾರ್ಜುನ ಖರ್ಗೆಗೆ ಆಪ್ತ ಹಾಗೂ, ಸಿದ್ದರಾಮಯ್ಯ ಜೊತೆಗೆ ಉತ್ತಮ ಒಡನಾಟ
ಜಾತಿವಾರು ಲೆಕ್ಕಾಚಾರ
ಲಿಂಗಾಯತ : 3.80 ಲಕ್ಷ
SC & ST : 6.13 ಲಕ್ಷ
ಕುರುಬರು : 3.15 ಲಕ್ಷ
ಮುಸ್ಲಿಂ - 3.13 ಲಕ್ಷ
ಇತರೆ - 3.29 ಲಕ್ಷ
ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯಥಿಯಾಗುವ ಮೂಲಕ ಜಿ.ಕುಮಾರ ನಾಯಕ್ ಅವರು ಇದೀಗ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿ ಸರ್ಕಾರದ ವಿವಿಧ ಉನ್ನತ ಹುದ್ದೆಗಳಿಗೆ ಏರಿದ್ದವರು. ಇದೀಗ ರಾಜಕಾರಣದಲ್ಲಿ ಧುಮುಕಿದ್ದಾರೆ. ಆದರೆ ಜನರು ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಐಎಎಸ್ ನಿವೃತ್ತ ಅಧಿಕಾರಿಯೊಬ್ಬರು ಸ್ಪರ್ಧೆ ಮಾಡುತ್ತಿದ್ದು, ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿರುದ್ಧ ಸೆಣಸಲಿದ್ದಾರೆ.
ಚುನಾವಣಾ ಹಿನ್ನೋಟ
2014ರ ಸೆಣಸಾಟ
* ವೆಂಕಟೇಶ ನಾಯಕ್ - ಗೆಲುವು : ಕಾಂಗ್ರೆಸ್
* ಗೆಲುವಿನ ಅಂತರ ಕೇವಲ 508 ಮತಗಳು
* ಸೋಲು - ರಾಜಾ ಮದನಗೋಪಲ್ ನಾಯಕ್ :ಜೆಡಿಎಸ್
ಚುನಾವಣಾ ಹಿನ್ನೋಟ
2009 ರ ಸೆಣಸಾಟ
* ಗೆದ್ದ ಅಭ್ಯರ್ಥಿ - ಫಕೀರಪ್ಪ : ಬಿಜೆಪಿ
* ಗೆಲುವಿನ ಅಂತರ ಕೇವಲ 30,636 ಮತಗಳು
* ಸೋಲು - ರಾಜಾ ವೆಂಕಟಪ್ಪ ನಾಯಕ್ :ಕಾಂಗ್ರೆಸ್
ಚುನಾವಣಾ ಹಿನ್ನೋಟ
2014ರ ಸೆಣಸಾಟ
* ಗೆದ್ದ ಅಭ್ಯರ್ಥಿ - ಬಿ ವಿ ನಾಯಕ್ : ಕಾಂಗ್ರೆಸ್
* ಗೆಲುವಿನ ಅಂತರ ಕೇವಲ 1,499 ಮತಗಳು
* ಸೋಲು - ಕೆ. ಶಿವನಗೌಡ ನಾಯಕ್ :ಬಿಜೆಪಿ
ಚುನಾವಣಾ ಹಿನ್ನೋಟ
2019ರ ಸೆಣಸಾಟ
* ಗೆದ್ದ ಅಭ್ಯರ್ಥಿ - ರಾಜಾ ಅಮರೇಶ್ವರ ನಾಯಕ್ :ಬಿಜೆಪಿ
* ಗೆಲುವಿನ ಅಂತರ- 1,17,716 ಮತಗಳು
* ಸೋಲು - ಬಿ ವಿ ನಾಯಕ್ : ಕಾಂಗ್ರೆಸ್
ಇದೀಗ ಅಂದ್ರೆ 2024ರಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಾಂಗ್ರೆಸ್ ಮಾಜಿ IAS ಅಧಿಕಾರಿಯಾಗಿ ಜಿ ಕುಮಾರ್ ನಾಯಕ್ ಕಣಕ್ಕೆ ಇಳಿದಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಹೊಸ
ಮುಖಕ್ಕೆ ಟಿಕೆಟ್ ನೀಡಬೇಕಿತ್ತು ಎಂದು ಸಾಕಷ್ಟು ಕಾರ್ಯಕರ್ತರ ಒತ್ತಾಯವಾಗಿದೆ. ಆದರೆ ಹಾಲಿ ಸಂಸದ ರಿತಿಗೆ ಟಿಕೆಟ್ ನೀಡದ ಹಿನ್ನೆಲೆ ಹಿನ್ನಡೆ ಹಾಗುವ ಸಾಧ್ಯತೆ ಇದೆ. ಇನ್ನೂ ಒಳ್ಳೆಯ ಮಾಜಿ ಐ ಎ ಎಸ್ ಅಧಿಕಾರಿಯಾಗಿ ರಾಯಚೂರು ಜಿಲ್ಲೆಯ ಒಡನಾಟ ಹೊಂದಿರುವ ಜಿ ಕುಮಾರ್ ಅವರ ಒಲವು ಸಾಕಷ್ಟು ಇರುವಂತದು ಮತದಾರರು ಯಾರ ಕೈ ಹಿಡುತಾರೆ ಕಾದು ನೊಡಬೇಕಾಗಿದೆ .
ಜಾತಿವಾರು ಲೆಕ್ಕಾಚಾರ:
ರಾಯಚೂರು ನಗರ
ಒಟ್ಟು ಮತದಾರರು- 1,89,148
ಮುಸ್ಲಿಂ :38,386
ಮಾದಿಗ, ಛಲವಾದಿ- 18,114
ಲಿಂಗಾಯತ- 14,705
ಬಲಿಜ (ಮುನ್ನೂರುಕಾಪು)- 12,889
ಬ್ರಾಹ್ಮಣರು- 9,590
ಆರ್ಯವೈಶ್ಯ- 8,893
----------------------
2) ರಾಯಚೂರು ಗ್ರಾಮೀಣ
ಒಟ್ಟು ಮತದಾರರು- 1,84,460
ಪರಿಶಿಷ್ಟ ಜಾತಿ- 33,800
ಕುರುಬರು- 31,600
ಗಂಗಾಮತಸ್ಥರು- 22,000
ಪರಿಶಿಷ್ಟ ಪಂಗಡ- 19,500
ಲಿಂಗಾಯತ- 18,000
ಮುಸ್ಲಿಂ- 12,950
----------------------------
3) ಮಾನ್ವಿ
ಒಟ್ಟು ಮತದಾರರು- 1,95,614
ಪರಿಶಿಷ್ಟ ಪಂಗಡ- 36,000
ಪರಿಶಿಷ್ಟ ಜಾತಿ- 29,831
ಲಿಂಗಾಯತ- 29,531
ಮುಸ್ಲಿಂರು- 25,962
ಕುರುಬರು- 22,776
ಬ್ರಾಹ್ಮಣ- 8,906
ಆಂಧ್ರರೆಡ್ಡಿ- 8,057
-------------------------------
4) ಲಿಂಗಸೂರು
ಒಟ್ಟು ಮತದಾರರು- 2,25,212
ಪರಿಶಿಷ್ಟ ಪಂಗಡ- 42,000
ಮಾದಿಗ- 40,000
ಲಿಂಗಾಯತ- 20,000
ಛಲವಾದಿ, ವಡ್ಡರು, ಲಂಬಾಣಿ-16,838
ಕುರುಬರು- 15,000
ಮುಸ್ಲಿಂ- 13,000
---------------------
5) ದೇವದುರ್ಗ
ಜಾ?ವಾರು ಲೆಕ್ಕಾಚಾರ:
ಪರಿಶಿಷ್ಟ ಪಂಗಡ- 55,000
ಪರಿಶಿಷ್ಟ ಜಾ?- 40,000
ಲಿಂಗಾಯತರು- 33,000
ಮುಸ್ಲಿಂ- 28,000
ಕುರುಬರು- 30,000
ಲಂಬಾಣಿ- 22,000
6) ಸುರಪುರ :ಪುರಷರು
141618
ಮಹಿಳೆಯರು : 139729
7) ಶಹಾಪೂರ : ಪುರಷ : 122523
ಮಹಿಳೆಯರು : 122939
8) ಯಾದಗಿರಿ : ಪುರಷ : 122369
ಮಹಿಳೆಯರು : 123864
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.