Lokasabha Election 2024: ಗಣಿನಾಡಿನಲ್ಲಿ ಗರಿಗೆದರಿದ ಲೋಕ ಲೆಕ್ಕಾಚಾರ..! ಸಂಸತ್ತಿನ ಗದ್ದುಗೆ ಏರುವವರ್ಯಾರು?
ಭಾರತ ಸಂಸತ್ತು ಎರಡು ಸದನಗಳನ್ನು ಹೊಂದಿದೆ. ಇವುಗಳನ್ನು ರಾಜ್ಯಸಭೆ ಮತ್ತು ಲೋಕಸಭೆ ಎಂದು ಕರೆಯಲಾಗುತ್ತದೆ. ಲೋಕಸಭಾ ಸದನವೂ 545 ಸದಸ್ಯರನ್ನು ಹೊಂದಿದ್ದು, ಭಾರತದ ಸಂವಿಧಾನದ ಪ್ರಕಾರ ಈ ಪೈಕಿ 543 ಸದಸ್ಯರು ಚುನಾವಣಾ ಕ್ಷೇತ್ರಗಳಿಂದ ಐದು ವರ್ಷಗಳಿಗೊಮ್ಮೆ ಒಂದು ಅವಧಿಗಾಗಿ ಚುನಾಯಿಸಲ್ಪಡುತ್ತಾರೆ. ಇವರೆಲ್ಲರೂ ಚುನಾಯಿತ ಜನಪ್ರತಿನಿಧಿಗಳಾಗಿತ್ತಾರೆ, ಅಂದರೆ ಜನರಿಂದ ಆಯ್ಕೆಯಾಗುತ್ತಾರೆ. ಸಂಸದರ ಆಯ್ಕೆ ಮಾಡಲು ಮತದಾರರ ಪ್ರಭುಗಳೇ ಅಂತಿಮ. ಅಭಿವೃದ್ಧಿ ಲೆಕ್ಕಚಾರ ಸೇರಿದಂತೆ ನಾನಾ ವಿಷಯಗಳನ್ನು ಯೋಚಿಸಿ ತಮ್ಮ ಮತವನ್ನು ಮತದಾರರು ಚಲಾಯಿಸುತ್ತಾರೆ. ಈ ಸಲ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾದ್ರೆ ಸೂಕ್ತ ಅನ್ನೋ ಸಮಗ್ರ ಮಾಹಿತಿಯನ್ನು ವೀಕ್ಷಕರ ಮುಂದಿಡುವುದೇ ಲೋಕಾ ಲೆಕ್ಕಚಾರ, ಸಂಸದರ ರಿಪೋರ್ಟ್ ಕಾರ್ಡ್..!
ಗಣಿನಾಡು, ಬಿರುಬಿಸಿಲಿನ ಕ್ಷೇತ್ರ ಅಂತಲೇ ಫೇಮಸ್ ಆಗಿರೋ ಬಳ್ಳಾರಿ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರ. ಈ ಲೋಕಸಭಾ ಕ್ಷೇತ್ರವು 2008ರ ನಂತರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದೆ. ಇದು ಮೀಸಲು ಕ್ಷೇತ್ರವಾಗಿದ್ದು ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಎರಡು ಕ್ಷೇತ್ರಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಕ್ಷೇತ್ರಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಸದ್ಯ ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಗಿದೆ. ಎರಡು ಜಿಲ್ಲೆ ಸೇರಿ ಒಂದೇ ಲೋಕಸಭಾ ಕ್ಷೇತ್ರವಾಗಿದ್ದು ಆಯಾ ಪಕ್ಷದಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಕ್ಯೂ ನಿಂತಿದ್ದಾರೆ.
ಬಳ್ಳಾರಿ ಲೋಕಸಭೆ ಈ ಹಿಂದೆ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ಆದರೆ, ರೆಡ್ಡಿ ಸಹೋದರರು ಅಧಿಪತ್ಯ ಸಾಧಿಸಿದ ಬಳಿಕ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಂಡಿತ್ತು. ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ AICC ಮತ್ತು KPCC ಈ ಸಲ ಕಾಂಗ್ರೆಸ್ ಬಾವುಟ ಹಾರಿಸಲೇಬೇಕೆಂಬ ಟಾಸ್ಕ್ ಅನ್ನು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕಾಂಗ್ರೆಸ್ ಸಮಿತಿಗೆ ನೀಡಿದೆ. ಆದೇ ರೀತಿ ಬಿಜೆಪಿಯಲ್ಲೂ ಕೂಡ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿದೆ. ಆದರೆ ಕೆಆರ್'ಪಿಪಿ ಪಾತ್ರ ಇನ್ನೂ ನಿಗೂಢವಾಗಿದೆ..!
ಬಳ್ಳಾರಿ ರಣಕಣ
ಕ್ಷೇತ್ರ : ಬಳ್ಳಾರಿ
ಸಂಸದರು : ವೈ.ದೇವೇಂದ್ರಪ್ಪ, ಬಿಜೆಪಿ
ಪಡೆದ ಮತಗಳು : 6,16,338 (54.44%)
ಪ್ರತಿಸ್ಪರ್ಧಿ : ವಿ.ಎಸ್ ಉಗ್ರಪ್ಪ, ಕಾಂಗ್ರೆಸ್
ಪಡೆದ ಮತಗಳು : 5,60,681 (45.89)
ವಿಧಾನಸಭಾ ಕ್ಷೇತ್ರಗಳ ಸಂಖ್ಯೆ : 8
ಒಟ್ಟು ಮತದಾರರು : 18,52,133
ಗೋಕಾಕ್ ಸಾಹುಕಾರ್ ಜಾರಕಿಹೊಳಿ ಕುಟುಂಬದ ಸಂಬಂಧಿಯಾಗಿರುವ ಬಳ್ಳಾರಿಯ ಹಾಲಿ ಸಂಸದ ವೈ.ದೇವೇಂದ್ರಪ್ಪ ಅವರಿಗೆ ಈ ಸಲ ಟಿಕೆಟ್ ಸಿಗುವುದು ಬಹುತೇಕ ಡೌಟ್, ಕಳೆದ ಸಂಸತ್ ಚುನಾವಣೆಯಲ್ಲಿ ಅನಿರೀಕ್ಷಿತ ಬೆಳೆವಣೆಯಿಂದ ಬಿಜೆಪಿಯ ಟಿಕೆಟ್ ಸಿಕ್ಕಿತ್ತು. ಆದರೆ ಈ ಬಾರಿ ಮಾಜಿ ಸಚಿವ ಶ್ರೀರಾಮುಲು ಅಖಾಡಕ್ಕೆ ಇಳಿಯೋದು ನಿಕ್ಕಿಯಾದ ಕಾರಣ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.
ಸಂಸದರ ಸಾಧನೆಗಳು:
• ಈವರೆಗೆ 779.91 ಲಕ್ಷ ರೂ. ಅನುದಾನ ಮಂಜೂರು
• ಇಲ್ಲಿಯವರಿಗೆ 689.40 ಲಕ್ಷ ರೂ. ಅನುದಾನ ಖರ್ಚು
• ಲೋಕಸಭೆ ಕಲಾಪದಲ್ಲಿ ಶೇ.81ರಷ್ಟು ಹಾಜರಾತಿ
• ಕಲಾಪದಲ್ಲಿ ಒಟ್ಟು 125 ಪ್ರಶ್ನೆ ಕೇಳಿರುವ ಸಂಸದರು
• ಕುಡುತಿನಿ ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೆ 25 ಕೋಟಿ ರೂ.
• ಬಳ್ಳಾರಿ-ವಿಜಯನಗರ ಹೆದ್ದಾರಿ ನಿರ್ಮಾಣಕ್ಕೆ 830 ಕೋಟಿ ರೂ
• ಹೊಸಪೇಟೆಯಲ್ಲಿ ರೈಲ್ವೆ ಮೇಲ್ಸೇತುವೆಗೆ 26 ಕೋಟಿ ರೂ.
• ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ನಿರ್ಮಾಣಕ್ಕೆ 2.5ಕೋಟಿ ರೂ
ಲೋಕಸಭಾ ಕ್ಷೇತ್ರವಾಗಿ ರೂಪಗೊಂಡ ಕಾಲದಿಂದಲೂ ಕಾಂಗ್ರೆಸ್ ಭದ್ರಕೋಟೆ. ಸೋನಿಯಾಗಾಂಧಿ ಅವರನ್ನು ಗೆಲ್ಲಿಸಿ ಡೆಲ್ಲಿಗೆ ಕಳಿಸಿಕೊಟ್ಟಿದ್ದ ಕ್ಷೇತ್ರವಿದು. 19 ಬಾರಿ ಎಲೆಕ್ಷನ್ ನಡೆದಿದ್ದು ಕಾಂಗ್ರೆಸ್ ಪಕ್ಷವು 15 ಬಾರಿ ಗೆದ್ದಿದ್ದರೆ ಭಾರತೀಯ ಜನತಾ ಪಾರ್ಟಿಯು ನಾಲ್ಕು ಬಾರಿ ಗೆಲುವನ್ನ ಕಂಡಿದೆ. ಅಲ್ದೆ 8 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಆರು ಕಾಂಗ್ರೆಸ್ ಜೇಬಿನಲ್ಲಿದ್ದರೆ ಬಿಜೆಪಿ ಮತ್ತು ಜೆಡಿಎಸ್ ಒಂದೊಂದು ಕ್ಷೇತ್ರದಲ್ಲಿ ಗೆಲುವನ್ನ ಕಂಡಿದೆ. ಈ ಸಲ ಪುರುಷ ಮತದಾರರ ಸಂಖ್ಯೆ 9 ಲಕ್ಷದ 14 ಸಾವಿರದ 652 ಆದ್ರೆ ಮಹಿಳಾ ಮತದಾರರ ಸಂಖ್ಯೆ 9 ಲಕ್ಷದ 37 ಸಾವಿರದ 215.. ಇದೆಲ್ಲವನ್ನ ಬಿಟ್ಟು ಹಾಲಿ ಸಂಸದ ದೇವೇಂದ್ರರ ಪಾಸಿಟಿವ್ ಮತ್ತು ನೆಗೆಟಿವ್ ಏನಂತ ನೋಡೋಣ ಬನ್ನಿ..
ವೈ.ದೇವೇಂದ್ರ ಪಾಸಿಟಿವ್
• ಅವಳಿ ಜಿಲ್ಲೆಗೆ ಕೇಂದ್ರದ ಯೋಜನೆಗಳು ಜಾರಿ
• ಕಾಂಗ್ರೆಸ್ ಶಾಸಕರ ಗುಂಪುಗಾರಿಕೆಯ ಲಾಭ
• ಸ್ಥಳೀಯ ನಾಯಕರ ಜತೆ ಉತ್ತಮ ಒಡಾನಾಟ
• ವಿವಾದ ರಹಿತ ವ್ಯಕ್ತಿ, ಸರಳತೆ
• ಜನರ ಜೊತೆಗೆ ನಿರಂತರ ಸಂಪರ್ಕ
• ಬಿಜೆಪಿ-RSS ಶಿಸ್ತಿನ ಸಿಪಾಯಿ
ವೈ.ದೇವೇಂದ್ರ ನೆಗೆಟಿವ್
• ಬಸವಣ್ಣನವರ ವಚನಗಳ ಮೂಲಕ ವಿಪರೀತ ಮಾತು
• ರಾಷ್ಟ್ರ ನಾಯಕರ ಮೇಲೆ ಅತಿಯಾದ ಅವಲಂಬನೆ
• ಕೇವಲ ಸಭೆಗಳಿಗೆ ಮಾತ್ರ ಹಾಜರಾಗುವ ಮನೋಭಾವನೆ
• ಸಂಸದರ ಕಚೇರಿಗೆ ಬೀಗ, ಜನರಿಗೆ ಕಷ್ಟಕ್ಕೆ ಸಿಗಲ್ಲ
• ವಿಜಯನಗರ ಜಿಲ್ಲೆಗೆ ಸೀಮಿತ, ಹುಟ್ಟೂರಲ್ಲಿ ವಾಸ್ತವ್ಯ
• ಲೋಕಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳ ಧ್ವನಿ ಎತ್ತಿಲ್ಲ
• ಕಳಪೆ ಸಾಧನೆ, ವೈಯುಕ್ತಿಕ ವರ್ಚಿಸ್ಸಿನ ಕೊರತೆ
ಅಂದ್ ಹಾಗೆ.. ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳು ಕೈ ವಶದಲ್ಲಿವೆ. ಇದರ ನಡುವೆ ಮಾಜಿ ಸಚಿವ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸೋದು ಬಹುತೇಕ ಖಚಿತ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮುಲು ಸೋತ ಪರಿಣಾಮ ಈಗ ಅನುಕಂಪ ವ್ಯಕ್ತವಾಗಿದೆ. ವಾಲ್ಮೀಕಿ ಜನಾಂಗ, ಲಿಂಗಾಯತ ಮತಗಳು ಶ್ರೀರಾಮುಲು ಪರ ಒಲವು ಹೊಂದಿದೆ. ಆದರೆ ಶ್ರೀರಾಮುಲು ಅವರಿಗೆ ಸಿಎಂ ಸಿದ್ದರಾಮಯ್ಯ ವಿರೋಧಿ ಹಣೆಪಟ್ಟಿಯಿದ್ದು, ಕುರುಬ ಸಮುದಾಯದ ಮತುಗಳು ಪರಿಣಾಮ ಬೀರಬಹುದು ಎಂಬ ಲೆಕ್ಕಚಾರವಿದೆ. ಕಳೆದ ವಿಧಾನಸಭೆ ಚುನಾವವಣೆಯಲ್ಲೂ ಕುರುಬರು ಸಿಟ್ಟಾಗಿದ್ದು ಸಾಬೀತಾಗಿದೆ. ನರೇಂದ್ರ ಮೋದಿ ಅಲೆ, ಸೋತ ಅನುಕಂಪ, ಶ್ರೀರಾಮನ ಬಲದಿಂದ ಲೆಕ್ಕಚಾರಗಳು ಬುಡಮೇಲಾಗಬಹುದು
ಶ್ರೀರಾಮುಲು ಪಾಸಿಟಿವ್
• ಕಳೆದ ಸಲದ ಸೋಲಿಗೆ ಜನರ ಅನುಕಂಪ
• ವಾಲ್ಮೀಕಿ ಹಾಗೂ ಲಿಂಗಾಯತ ಮತ ನಿಕ್ಕಿ
• ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ
• ವಿವಾದ ಹೇಳಿಕೆಗಳನ್ನು ಕೊಡದೆ ಎಚ್ಚರಿಕೆ
• ಬಿಟ್ಟು ಹೋದ ಮತಗಳ ಸೆಳೆಯಲು ಪ್ರಯತ್ನ
• ರಾಮಮಂದಿರ ನಿರ್ಮಾಣ ಅನುಕೂಲ
• ಸಚಿವ ನಾಗೇಂದ್ರರ ಆಡಳಿತ ವಿರೋಧಿ ಅಲೆಯ ಲಾಭ
ಶ್ರೀರಾಮುಲು ನೆಗೆಟಿವ್
• ಅಭ್ಯರ್ಥಿ ಎಂದು ಸ್ಪಷ್ಟ ಸಂದೇಶ ಸಿಕ್ಕಿಲ್ಲ
• ಅಲ್ಪಸಂಖ್ಯಾತ ಮತ ಸೆಳೆಯಲು ಹಿಂದೇಟು
• ನಿರೀಕ್ಷಿತ ಪ್ರಮಾಣದಲ್ಲಿ ಕ್ಷೇತ್ರ ಸಂಚಾರ ಮಾಡಿಲ್ಲ
• ಪಕ್ಷ ಸಂಘಟನೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಲ್ಲ
• ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಎಫೆಕ್ಟ್
• ಕುರುಬ ಮತಗಳು ಮತ್ತೆ ಪೆಟ್ಟು ನೀಡುವ ಸಂಭವ
ಹಾಗ್ ನೋಡಿದ್ರೆ ಇಲ್ಲಿ ಲಿಂಗಾಯತ ಮತದಾರ ಸಂಖ್ಯೆ ಹೆಚ್ಚಿದೆ. ಅಂದ್ರೆ ಬರೋಬ್ಬರಿ ಮೂರೂವರೆ ಲಕ್ಷ ಮತದಾರರಿದ್ದಾರೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತದಾರರು ಆರೂವರೆ ಲಕ್ಷವಿದ್ರೆ ಕುರುಬ ಮತದಾರ ಪ್ರಭುಗಳ ಸಂಖ್ಯೆ 2 ಲಕ್ಷದ 20 ಸಾವಿರ.. ಜೊತೆಗೆ ಮುಸಲ್ಮಾನರ ಸಂಖ್ಯೆ 2 ಲಕ್ಷವಿದ್ರೆ 40 ಸಾವಿರ ಮತದಾರರ ಬಲಿಜ ಸಮುದಾಯ ಹೊಂದಿದೆ. ನೇಕಾರ 28 ಸಾವಿರವಿದ್ದರೆ ಯಾದವರ ಮತಗಳು 39 ಸಾವಿರವಿದೆ. ಇದ್ರ ಮಧ್ಯೆ.. ಕಾಂಗ್ರೆಸ್ ಪಕ್ಷಕ್ಕೆ SC-ST ಮತ್ತು ಕುರುಬ ಮತಗಳು ನಿಕ್ಕಿ ಅಂತ ಹೇಳಲಾಗ್ತಿದೆ. ಹಾಗಿದ್ರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ಲಸ್ ಮತ್ತು ಮೈನಸ್ ಏನೇನು ಅಂತ ಗ್ರಾಫಿಕ್ಸ್ ಇಲ್ಲಿದೆ..
ಕಾಂಗ್ರೆಸ್ ಪ್ಲಸ್
• 8 ಕ್ಷೇತ್ರಗಳ ಪೈಕಿ 6 ರಲ್ಲಿ ಶಾಸಕರು
• MLA ಚುನಾವಣೆಯಲ್ಲಿ ಗೆದ್ದ ಹುರುಪು
• SC-ST, ಮುಸ್ಲಿಂ, ಕುರುಬ ಮತಗಳ ಬಲ
• ಸಚಿವ ನಾಗೇಂದ್ರರ ಬಲ, ಕೈ ಸಂಘಟನೆ
ಕಾಂಗ್ರೆಸ್ ಮೈನಸ್
• ಮೋದಿ ರೀತಿಯ ನಾಯಕರ ಕೊರತೆ
• ಬಳ್ಳಾರಿಯಲ್ಲಿ ಕಾಂಗ್ರೆಸ್ ಗುಂಪುಗಾರಿಕೆ
• ಕಾರ್ಯಕರ್ತರಿಗೆ ಸರಿಯಾದ ಸ್ಪಂದನೆ ಸಿಗ್ತಿಲ್ಲ
• ಎಂಪಿ ಚುನಾವಣೆ ಪ್ರಬಲ ಅಭ್ಯರ್ಥಿ ಕೊರತೆ
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಪಂಚ ಗ್ಯಾರಂಟಿಗಳು ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಕಂಡು ಬರುತ್ತಿದೆ. ಆದರೆ ಬಳ್ಳಾರಿ ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಈ ನಡುವೆ ಕೈ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗ ತೊಡಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿ ಹೇಗಿದೆ ನೋಡೋಣ ಬನ್ನಿ...!
ಯಾರು ರಣಕಲಿಗಳು..?
ಸಂಭಾವ್ಯ ಅಭ್ಯರ್ಥಿ
• ವಿ.ಎಸ್ ಉಗ್ರಪ್ಪ - ಕಾಂಗ್ರೆಸ್
• ಬಿ.ನಾಗೇಂದ್ರ - ಕಾಂಗ್ರೆಸ್
• ಶ್ರೀರಾಮುಲು - ಬಿಜೆಪಿ /ಜೆಡಿಎಸ್
• ವೆಂಕಟೇಶ್ ಪ್ರಸಾದ್ - ಕಾಂಗ್ರೆಸ್
• ಮುರಳಿಕೃಷ್ಣ - ಕಾಂಗ್ರೆಸ್
• ಚೈತನ್ಯ ತುಕಾರಾಂ - ಕಾಂಗ್ರೆಸ್
• ಗುಜ್ಜಲ ನಾಗರಾಜ್ - ಕಾಂಗ್ರೆಸ್
• ಕೆ.ಎಸ್ ದಿವಾಕರ್ - ಕೆಆರ್'ಪಿಪಿ
ಏನೇ ಆಗ್ಲಿ ಹೈವೋಲ್ಟೆಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದರಲ್ಲಿ ಅನುಮಾನವಿಲ್ಲ. ಆದ್ರೆ ಬಹಿರಂಗವಾಗಿ ಏನೇನೂ ನಡೀತಿಲ್ಲ. ಎಲ್ಲವೂ ನಾಲ್ಕು ಗೋಡೆಯ ಮಧ್ಯೆ ನಡೆಯುತ್ತಿದೆ. ಮಾಜಿ ಸಚಿವ ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧೆ ನಿಕ್ಕಿಯಾಗಿದ್ದು ಎದುರಾಳಿಯಾಗಿ ಅಂದಿನ ಶಿಷ್ಯ ಹಾಲಿ ಸಚಿವ ಬಿ.ನಾಗೇಂದ್ರ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಕೆಲವೇ ದಿನಗಳಲ್ಲಿ ಇದಕ್ಕೆಲ್ಲಾ ಸ್ಪಷ್ಟ ಉತ್ತರ ಸಿಗಲಿದೆ.
(2014)
• ಬಿಜೆಪಿ - ಬಿ. ಶ್ರೀರಾಮುಲು 5,34,406, ಶೇ.51.09
• ಕಾಂಗ್ರೆಸ್ - ಎನ್.ವೈ.ಹನುಮಂತಪ್ಪ, 4,49,262, ಶೇ.42.95
• ಜನತಾದಳ - ಆರ್. ರವಿನಾಯಕ, 12,613, ಶೇ. 1.21
• ಗೆಲುವಿನ ಅಂತರ : 85,144
• ಗೆಲುವು - ಶ್ರೀರಾಮುಲು, ಬಿಜೆಪಿ
**
(2018 ಉಪ ಚುನಾವಣೆ)
• ಕಾಂಗ್ರೆಸ್- ವಿ. ಎಸ್. ಉಗ್ರಪ್ಪ, 6,28,365, ಶೇ.59.99
• ಬಿಜೆಪಿ- ಜೆ. ಶಾಂತ, 3,85,204, ಶೇ.36.78
• ಸ್ವತಂತ್ರ- ಡಾ. ಟಿ. ಆರ್. ಶ್ರೀನಿವಾಸ್, 13,714, ಶೇ.1.31
• ಅಂತರ : 2,43,161, ಶೇ.23.21
• ಗೆಲುವು : ವಿ.ಎಸ್ ಉಗ್ರಪ್ಪ, ಕಾಂಗ್ರೆಸ್
***
(2019)
• ಬಿಜೆಪಿ- ವೈ. ದೇವೇಂದ್ರಪ್ಪ, 6,16,388, ಶೇ.50.44
• ಕಾಂಗ್ರೆಸ್- ವಿ. ಎಸ್. ಉಗ್ರಪ್ಪ, 56,0681, ಶೇ.45.89
• NOTA-None of the Above, 9024, ಶೇ.0.74
• ಅಂತರ : 55,707
• ಗೆಲುವು : ವೈ.ದೇವೇಂದ್ರಪ್ಪ, ಬಿಜೆಪಿ
ಜಾತಿವಾರು ಮತದಾರರು
• ಲಿಂಗಾಯತರು-350000
• ಪರಿಶಿಷ್ಟ ಜಾತಿ- 315000
• ಪರಿಶಿಷ್ಟ ಪಂಗಡ - 325000
• ಕುರುಬ-220000
• ಮುಸ್ಲಿಂ-200000
• ಬಲಿಜ-40000
• ನೇಕಾರ-28,000
• ಯಾದವ-39000
• ಗಂಗಾಮತಸ್ಥ- 40000
• ಉಪ್ಪಾರ-28000
• ಮಡಿವಾಳ-25000
• ಬ್ರಾಹ್ಮಣ-28000
• ರೆಡ್ಡಿ-20000
• ಕಮ್ಮಾ-25000
• ವೈಶ್ಯರ ಸಂಖ್ಯೆ 20,000
• ಇತರೆ- 30000
**
1951 - ಟಿ. ಸುಬ್ರಮಣ್ಯಂ (ಕಾಂಗ್ರೆಸ್)
1957 - ಟಿ. ಸುಬ್ರಮಣ್ಯಂ (ಕಾಂಗ್ರೆಸ್)
1962 - ಟಿ. ಸುಬ್ರಮಣ್ಯಂ (ಕಾಂಗ್ರೆಸ್)
1967 - ವಿ.ಕೆ.ಆರ್.ವಿ. ರಾವ್ (ಕಾಂಗ್ರೆಸ್)
1971 - ವಿ.ಕೆ.ಆರ್.ವಿ. ರಾವ್ (ಕಾಂಗ್ರೆಸ್)
1977 - ಕೆ.ಎಸ್. ವೀರಭದ್ರಪ್ಪ (ಕಾಂಗ್ರೆಸ್)
1980 - ಆರ್.ವೈ. ಘೋರ್ಪಡೆ (ಕಾಂಗ್ರೆಸ್)
1984 - ಬಸವರಾಜೇಶ್ವರಿ (ಕಾಂಗ್ರೆಸ್)
1989 - ಬಸವರಾಜೇಶ್ವರಿ (ಕಾಂಗ್ರೆಸ್)
1991 - ಬಸವರಾಜೇಶ್ವರಿ (ಕಾಂಗ್ರೆಸ್)
1996 - ಕೆ.ಸಿ. ಕೊಂಡಯ್ಯ (ಕಾಂಗ್ರೆಸ್)
1998 - ಕೆ.ಸಿ. ಕೊಂಡಯ್ಯ (ಕಾಂಗ್ರೆಸ್)
1999 - ಸೋನಿಯ ಗಾಂಧಿ (ಕಾಂಗ್ರೆಸ್)
1999 - ಕೆ.ಸಿ ಕೊಂಡಯ್ಯ
2004 - ಜಿ.ಕರುಣಾಕರ ರೆಡ್ಡಿ (ಬಿಜೆಪಿ)
2009 - ಜೆ. ಶಾಂತ (ಬಿಜೆಪಿ)
2014 - ಬಿ. ಶ್ರೀರಾಮುಲು (ಬಿಜೆಪಿ)
2018 - ವಿ.ಎಸ್.ಉಗ್ರಪ್ಪ (ಕಾಂಗ್ರೆಸ್)
2019 - ವೈ.ದೇವೆಂದ್ರಪ್ಪ (ಬಿಜೆಪಿ)
*****
ಬಳ್ಳಾರಿ ಎಂಪಿ ಗೆಲ್ಲುವ ಸರಾಸರಿ
ಬಿಜೆಪಿ - ಶೇ.49
ಕಾಂಗ್ರೆಸ್ -ಶೇ.53
ಐತಿಹಾಸಿಕವಾಗಿ ಬಳ್ಳಾರಿಯು ಶಾತವಾಹನ, ಕಲ್ಯಾಣ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಅಖಂಡ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ 1953 ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ಸ್ವಾತಂತ್ರ್ಯ ಬಂದ ಬಳಿಕ ಮದ್ರಾಸ್, ಮೈಸೂರು ಆನಂತರ ಕರ್ನಾಟಕ ರಾಜ್ಯಗಳಲ್ಲಿ ಈ ಕ್ಷೇತ್ರ ಸೇರಿಕೊಂಡಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಸೇರಿದ್ದಾಗಿದೆ. ಹಡಗಲಿ(ಎಸ್ ಸಿ), ಹಗರಿ ಬೊಮ್ಮನಹಳ್ಳಿ (ಎಸ್ ಸಿ), ವಿಜಯನಗರ (ಸಾಮಾನ್ಯ), ಕಂಪ್ಲಿ(ಎಸ್ ಟಿ), ಬಳ್ಳಾರಿ ಗ್ರಾಮೀಣ (ಎಸ್ ಟಿ), ಬಳ್ಳಾರಿ ನಗರ (ಸಾಮಾನ್ಯ), ಸಂಡೂರು (ಎಸ್ ಟಿ), ಕೂಡ್ಲಿಗಿ (ಎಸ್ ಟಿ) ಇದೆ. ಎಂಟು ಕ್ಷೇತ್ರಗಳ ಪೈಕಿ ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಕಂಪ್ಲಿ, ಸಂಡೂರು, ವಿಜಯನಗರ, ಕೂಡ್ಲಿಗಿ ಕಾಂಗ್ರೆಸ್ ವಶದಲ್ಲಿದ್ದರೆ, ಹಗರಿಬೊಮ್ಮನಹಳ್ಳಿಯಲ್ಲಿ ಜೆಡಿಎಸ್, ಹಡಗಲಿ ಕ್ಷೇತ್ರವು ಬಿಜೆಪಿ ವಶದಲ್ಲಿವೆ. ಎಸ್ಟಿ ಮೀಸಲು ಕ್ಷೇತ್ರವಾಗಿರುವ ಗಣಿನಾಡು ಬಳ್ಳಾರಿ ಲೋಕಸಭಾ ಕ್ಣೇತ್ರಕ್ಕೆ ಕೂಡ ಟಿಕೆಟ್‌ಗಾಗಿ ಎರಡೂ ಪಕ್ಷಗಳಲ್ಲೂ ಲಾಬಿ ಶುರುವಾಗಿದೆ.
ಉಗ್ರಪ್ಪ ಪಾಸಿಟಿವ್
• ವಿದ್ಯಾವಂತರು, ವೃತ್ತಿಯಲ್ಲಿ ಹಿರಿಯ ವಕೀಲರು
• ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರು
• ಸಂಸತ್'ನಲ್ಲಿ ಬಳ್ಳಾರಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದು
• ಸಂಸತ್'ನಲ್ಲಿ ನಡೆದ ಗಂಭೀರ ಚರ್ಚೆಗಳಲ್ಲಿ ಭಾಗಿ
• ಜಿಲ್ಲೆ ಸಮಸ್ಯೆಗಳ ಬಗ್ಗೆ ಸರ್ಕಾರದಲ್ಲಿ ಗಮನ ಸೆಳೆದಿರುವುದು
• ಗ್ಯಾರಂಟಿ ಯೋಜನೆಗಳ ಬಲ
ವಿ.ಎಸ್ ಉಗ್ರಪ್ಪ ನೆಗೆಟಿವ್
• ಸ್ಥಳೀಯ ನಾಯಕರಲ್ಲ ಎಂಬ ಹಣೆಪಟ್ಟಿ
• ಜಿಲ್ಲೆಯ ಶಾಸಕರೊಂದಿಗೆ ಸಮನ್ವಯ ಕೊರತೆ
• ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲ
• ಬಳ್ಳಾರಿ ಜಿಲ್ಲೆ ವಿಭಜನೆ ವೇಳೆ ಚಕಾರವೆತ್ತಿಲ್ಲ
• ಜಿಲ್ಲೆಯ ಶಾಸಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ
ಬಳ್ಳಾರಿ ಬಿಜೆಪಿಗೆ ಪ್ಲಸ್
• ಪ್ರಧಾನಿ ನರೇಂದ್ರ ಮೋದಿ ಅಲೆ
• ಜೆಡಿಎಸ್ ಜೊತೆಗೆ ಮೈತ್ರಿ ಲಾಭ
• ಬಿಜೆಪಿಗೆ ಕಳೆದ ಬಾರಿ ಗೆಲುವಿನ ಹುಮ್ಮಸ್ಸು
• ಸ್ಥಳೀಯ ಕಾಂಗ್ರೆಸ್'ನಲ್ಲಿ ಗುಂಪುಗಾರಿಕೆ ಲಾಭ
• ಶ್ರೀರಾಮುಲು ವೈಯುಕ್ತಿಕ ವರ್ಚಸ್ಸಿನ ನಾಯಕ
ಬಳ್ಳಾರಿ ಬಿಜೆಪಿಗೆ ಮೈನಸ್
• ಅಖಂಡ ಜಿಲ್ಲೆಯಲ್ಲಿ ಒಂದೇ ಸ್ಥಾನ ಗೆದ್ದಿರೋ ಬಿಜೆಪಿ
• ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಹೊಡೆತ ಸಾಧ್ಯತೆ
• ಸಂಸದ ದೇವೇಂದ್ರಪ್ಪ ನಿರೀಕ್ಷಿತ ಅಭಿವೃದ್ಧಿ ಮಾಡಿಲ್ಲ
• ಬಿಜೆಪಿ ಕಚೇರಿಯಿಂದ ಪದಾಧಿಕಾರಿಗಳು ಹೊರ ಬಂದಿಲ್ಲ
• ಎಂಪಿ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವಲ್ಲಿ ವಿಫಲ
• ಪಕ್ಷದಿಂದ ಜರ್ನಾರ್ಧನ ರೆಡ್ಡಿ ದೂರ ಉಳಿದಿರುವುದು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ