ಲೋಕಾಯುಕ್ತಕ್ಕೆ ಕೋರ್ಟ್ ತೀರ್ಪಿನಿಂದ ಆನೆ ಬಲ: ಆಪ್ ಸಂಭ್ರಮಾಚರಣೆ
ಆಮ್ ಆದ್ಮಿ ಪಕ್ಷದ ಪೃಥ್ವಿ ರೆಡ್ಡಿ, ಮುಖ್ಯಮಂತ್ರಿ ಚಂದ್ರು, ನಿವೃತ್ತ ಕೆಎಎಸ್ ಅಧಿಕಾರಿ ಮಥಾಯ್ ಸೇರಿ ಐವತ್ತಕ್ಕು ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು.
ಬೆಂಗಳೂರು: ಲೋಕಾಯುಕ್ತ ರಿಫಾರ್ಮ್ ಆಗುತ್ತಿದ್ದಂತೆ ಎಲ್ಲೆಡೆ ಸಂಭ್ರಮ ವ್ಯಕ್ತವಾಗುತ್ತಿದೆ. ಕೋರ್ಟ್ ನಿನ್ನೆ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಇಂದು ಲೋಕಾಯುಕ್ತ ಕಚೇರಿಯ ಆವರಣದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಆಮ್ ಆದ್ಮಿ ಪಕ್ಷದ ಪೃಥ್ವಿ ರೆಡ್ಡಿ, ಮುಖ್ಯಮಂತ್ರಿ ಚಂದ್ರು, ನಿವೃತ್ತ ಕೆಎಎಸ್ ಅಧಿಕಾರಿ ಮಥಾಯ್ ಸೇರಿ ಐವತ್ತಕ್ಕು ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ- "ಮೊದಲು ವಿಧಾನಸೌಧದ 3ನೇ ಮಹಡಿ ಸ್ವಚ್ಚ ಮಾಡಿ ": ಹೆಚ್.ಡಿ.ಕುಮಾರಸ್ವಾಮಿ
ಇದೇ ವೇಳೆ ಮಾತನಾಡಿದ ಆಪ್ ಮುಖಂಡ, ನಟ ಮುಖ್ಯಮಂತ್ರಿ ಚಂದ್ರು, ಈ ಹಿಂದೆ ಲೋಕಾಯುಕ್ತರಾಗಿದ್ದ ವೆಂಕಟಾಚಲಯ್ಯ ಹಾಗೂ ಸಂತೋಷ್ ಹೆಗ್ಡೆಯವರು ಭ್ರಷ್ಟರಿಗೆ ಚಾಟಿ ಏಟು ನೀಡಿದ್ರು.
ಇದನ್ನೂ ಓದಿ- 'ಬಿಜೆಪಿಯವರು ಪ್ರತಿ ಮನೆಯಲ್ಲೂ ಬಾವುಟ ಹಾರಿಸಿ ಎನ್ನುತ್ತಿದ್ದಾರೆ.ಮನೆಗಳೇ ಇಲ್ಲದವರು ಎಲ್ಲಿಂದ ಧ್ವಜ ಹಾರಿಸಬೇಕು?'
ಯಡಿಯೂರಪ್ಪ , ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ಅವರ ಪುತ್ರ , ಸಚಿವ ಆನಂದ್ ಸಿಂಗ್ ಸೇರಿದಂತೆ ಹಲವರು ಜೈಲು ಸೇರಿದ್ದರು. ನಂತರದ ದಿನಗಳಲ್ಲಿ ಅದರ ಪವರ್ ನ್ನು ಕಿತ್ತುಕೊಂಡು ಎಸಿಬಿ ಎಂದು ಮಾಡಲಾಯ್ತು. ಈಗ ಮತ್ತೆ ಭ್ರಷ್ಟರಿಗೆ ನಡುಕ ಶುರುವಾಗಿದೆ ಎಂದರು. ಇದೇ ವೇಳೆ ಲೋಕಾಯುಕ್ತ ಮುಂದೆ ಇದ್ದಂತಹ ಧ್ವಜ ಸ್ಥಂಭವನ್ನ ಸ್ವಚ್ಚಗೊಳಿಸುವ ಕಾರ್ಯವನ್ನ ಆಪ್ ಕಾರ್ಯಕರ್ತರು ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.