ಬಿಜೆಪಿಯಲ್ಲಿ `ಹೊಸ ಬಾಂಬ್` ಸಿಡಿಸಿದ ರೇಣುಕಾಚಾರ್ಯ..!
ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ
ಬೆಂಗಳೂರು: ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಂಪುಟ ಪುನರ್ ರಚನೆಯೋ, ಸಂಪುಟ ವಿಸ್ತರಣೆಯೋ ಎಂಬ ವಿದ್ಯಾಮಾನಗಳು ಗರಿಗೆದರಿವೆ. ಇದರ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ನನ್ನ ಸಂಪರ್ಕದಲ್ಲಿ 40 ಶಾಸಕರಿದ್ದಾರೆ. ಅವರೊಂದಿಗೆ ಸಭೆ ನಡೆಸುವುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
40 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಸದ್ಯದಲ್ಲೇ ನಾವು ಕೂಡ ಸಭೆ ಸೇರುತ್ತೇವೆ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎದುರು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ(M.P. Renukacharya) ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಬೆಂಗಳೂರು ಟೆಕ್ ಶೃಂಗಸಭೆ ಉದ್ಘಾಟಿಸಲಿರುವ ಮೋದಿ
ಸಚಿವ ಸ್ಥಾನ ಬಿಡಲು ಕೆಲ ಸಚಿವರು ರೆಡಿ ಇಲ್ಲ ಎಂಬುದಾಗಿ ಕಟೀಲ್ ಎದುರು ಅಸಮಾಧಾನ ತೋಡಿಕೊಂಡಿದ್ದಾರೆ. ಸಿಎಂ ಮೇಲೆ ಒತ್ತಡ ಹೇರಲು ಕೆಲವರಿಂದ ಸಭೆ ನಡೆಸಲಾಗುತ್ತದೆ ಎಂದ ರೇಣುಕಾಚಾರ್ಯಗೆ ನಳೀನ್ ಕುಮಾರ್ ಕಟೀಲ್ ಅವರು, ಸಭೆ ನಡೆಸುವುದು ಬೇಡ. ನೀವು ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವಂತೆ, ನಾನು ಕೂಡ ಸಿಎಂ ಜೊತೆ ಚರ್ಚಿಸುವೆ ಎಂಬುದಾಗಿ ರೇಣುಕಾಚಾರ್ಯ ಅವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಮುನ್ನವೇ ಅಸಮಾಧಾನ ಸ್ಪೋಟಗೊಂಡಿದೆ.
ತಾಕತ್ತಿದ್ರೆ ಬೈ ಎಲೆಕ್ಷನ್ ನಲ್ಲಿ EVM ಇಲ್ದೆ ಗೆದ್ದು ತೋರಿಸಲಿ: ಬಿಜೆಪಿಗೆ ಸವಾಲು ಹಾಕಿದ ಮಾಜಿ ಸಚಿವ