ಇಂದು ಬೆಂಗಳೂರು ಟೆಕ್ ಶೃಂಗಸಭೆ ಉದ್ಘಾಟಿಸಲಿರುವ ಮೋದಿ

ಇಂದಿನಿಂದ ನವೆಂಬರ್  21ರವರೆಗೆ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಟೆಕ್ ಶೃಂಗಸಭೆ- 2020 

Last Updated : Nov 19, 2020, 08:03 AM IST
  • ಮಾಹಿತಿ ತಂತ್ರಜ್ಞಾನ (Information Technology) ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಬೆಂಗಳೂರು ಪ್ರತಿವರ್ಷ ತಾಂತ್ರಿಕ ಶೃಂಗಸಭೆಯನ್ನು ಆಯೋಜಿಸುತ್ತಿದೆ.
  • ಈಗ ನಡೆಯುತ್ತಿರುವುದು ಬೆಂಗಳೂರು ಅಂತರರಾಷ್ಟ್ರೀಯ ತಾಂತ್ರಿಕ ಶೃಂಗಸಭೆಯ 23ನೇ ಆವೃತ್ತಿ.
  • ಇಂದಿನಿಂದ ನವೆಂಬರ್ 21ರವರೆಗೆ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಟೆಕ್ ಶೃಂಗಸಭೆ- 2020
ಇಂದು ಬೆಂಗಳೂರು ಟೆಕ್ ಶೃಂಗಸಭೆ ಉದ್ಘಾಟಿಸಲಿರುವ ಮೋದಿ title=

ಬೆಂಗಳೂರು: ದೇಶದಲ್ಲೇ ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ಈ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಬೇಕೆಂದು ಆಯೋಜಿಸುತ್ತಿರುವ ಬೆಂಗಳೂರು ಅಂತರಾಷ್ಟ್ರೀಯ ಟೆಕ್ ಶೃಂಗಸಭೆ- 2020 ಅನ್ನು (Bengaluru Tech Summit) ಆಯೋಜಿಸಲಾಗುತ್ತಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಉದ್ಘಾಟಿಸಲಿದ್ದಾರೆ.

ಇಂದಿನಿಂದ ನವೆಂಬರ್  21ರವರೆಗೆ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಟೆಕ್ ಶೃಂಗಸಭೆ- 2020 ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ‌ ಮಧ್ಯಾಹ್ನ 12 ಗಂಟೆಗೆ  ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಸ್ವಿಸ್ ಒಕ್ಕೂಟದ ಉಪಾಧ್ಯಕ್ಷ ಗೈ ಪಾರ್ಮೆಲಿನ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಗಣ್ಯರು, ಉದ್ಯಮಿಗಳು, ತಂತ್ರಜ್ಞರು, ಸಂಶೋಧಕರು, ನಾವೀನ್ಯಕಾರರು, ಹೂಡಿಕೆದಾರರು, ನೀತಿ ನಿರೂಪಕರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ.

ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್), ನವೋದ್ಯಮದ ವಿಷನ್ ಗ್ರೂಪ್, ಭಾರತ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್ (STPI) ಮತ್ತು ಎಂಎಂ ಆಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಸಹಯೋಗದಲ್ಲಿ ಕರ್ನಾಟಕ ಈ ಶೃಂಗಸಭೆಯನ್ನು ಆಯೋಜಿಸುತ್ತಿದೆ.

ನಿಮ್ಮ Mi, Redmi ಸ್ಮಾರ್ಟ್‌ಫೋನ್‌ಗಳು ಮತ್ತೆ ಮತ್ತೆ ರೀಬೂಟ್ ಆಗುತ್ತವೆಯೇ? ಇಲ್ಲಿದೆ ಪರಿಹಾರ

"ಮುಂದಿನದು ಈಗಲೇ" (Next is Now) ಎಂಬುದು ಈ ವರ್ಷದ ಶೃಂಗಸಭೆಯ ಥೀಮ್ ಆಗಿದೆ. ಹಾಗಾಗಿ ಸಭೆಯಲ್ಲಿ ಕೊರೊನೋತ್ತರ ಸವಾಲುಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಡೆಸಬಹುದಾದ ಆವಿಷ್ಕಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ.

ಮಾಹಿತಿ ತಂತ್ರಜ್ಞಾನ (Information Technology) ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಬೆಂಗಳೂರು ಪ್ರತಿವರ್ಷ ತಾಂತ್ರಿಕ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಈಗ ನಡೆಯುತ್ತಿರುವುದು ಬೆಂಗಳೂರು ಅಂತರರಾಷ್ಟ್ರೀಯ ತಾಂತ್ರಿಕ ಶೃಂಗಸಭೆಯ 23ನೇ ಆವೃತ್ತಿ. 2020ರ ಈ ಸಮ್ಮೇಳದಲ್ಲಿ 5000ಕ್ಕೂ ಹೆಚ್ಚು ಉದ್ಯಮಿಗಳು, 250ಕ್ಕೂ ಹೆಚ್ಚು ತಂತ್ರಜ್ಞರು ಹಾಗೂ ವಿಜ್ಞಾನಿಗಳು ಭಾಗವಹಿಸುತ್ತಿದ್ದಾರೆ.

ಎಚ್ಚರ! ಚೀನೀ ಸರ್ವರ್‌ ಸಂಪರ್ಕ ಹೊಂದಿರುವ 5 ಹಣಕಾಸು ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಗೂಗಲ್

ಜಾಗತಿಕ ಅವಿಷ್ಕಾರಗಳ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಯುಎಸ್‍ಎ (USA), ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ನೆದರ್ ಲ್ಯಾಂಡ್, ಸಿಂಗಪುರ, ಫಿನ್ ಲ್ಯಾಂಡ್, ಆಸ್ಟ್ರೇಲಿಯಾ, ಸ್ವಿಟ್ಜರ್‍ಲ್ಯಾಂಡ್, ಜಪಾನ್ ಮತ್ತು ಇಸ್ರೇಲ್‍ನಂತಹ 25 ಕ್ಕೂ ಹೆಚ್ಚು ಪ್ರಮುಖ ದೇಶಗಳು ಭಾಗವಹಿಸುತ್ತಿರುವುದು ವಿಶೇಷ.

ಇದೆ ವೇಳೆ ಭಾರತದಲ್ಲಿರುವ ರಾಜ್ಯಗಳ ನಡುವೆ ತಾಂತ್ರಿಕ ವಿಜ್ಞಾನದ ಸಮನ್ವಯ ಹಾಗೂ ವಿನಿಮಯ ಹೆಚ್ಚಿಸುವ, ಭಾರತೀಯ ನಾವೀನ್ಯತೆಯ ಮೈತ್ರಿ, ಜಂಟಿ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ, ಕೈಗಾರಿಕೆ ಚಟುವಟಿಕೆಗಳ ಕುರಿತು ರಾಜ್ಯಗಳ ನಡುವೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮತ್ತು ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ 'ಇಂಡಿಯಾ ಇನ್ನೋವೇಷನ್ ಅಲಯನ್ಸ್’ ಅನ್ನು ಸ್ಥಾಪಿಸಲಾಗಿದೆ.
 

Trending News