ಬೆಳಗಾವಿ : ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿಯಾಗಿದ್ದ ಬಸವಸಿದ್ಧಲಿಂಗ ಸ್ವಾಮೀಜಿ ನೇಣಿಗೆ ಶರಣಾಗಿದ್ದಾರೆ. ಮಡಿವಾಳೇಶ್ವರ ಮಠದಲ್ಲೇ ಬಸವಸಿದ್ಧಲಿಂಗ ಸ್ವಾಮೀಜಿ  ನೇಣು ಬಿಗಿದುಕೊಂಡಿದ್ದಾರೆ. ಸ್ಥಳಕ್ಕೆ ಬೈಲಹೊಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ  ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಆಗಿರುವ ಬಸವ ಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೇಗಿನಹಾಳ ಗ್ರಾಮದ ಮಠದಲ್ಲೇ  ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 


ಇದನ್ನೂ ಓದಿ : Vegetable Price: ಮತ್ತೆ ಏರಿಕೆಯಾಯ್ತೇ ತರಕಾರಿ ಬೆಲೆ? ಹೀಗಿದೆ ನೋಡಿ ಇಂದಿನ ದರ ವಿವರ


ಕೆಲವು ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರು ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.  ಈ ಆಡಿಯೋದಲ್ಲಿ ಸದ್ಯ ಆತ್ಮಹತ್ಯೆ ಮಾಡಿಕೊಂಡ ಬಸವಸಿದ್ಧಲಿಂಗ ಸ್ವಾಮೀಜಿ ಹೆಸರು ಉಲ್ಲೇಖವಾಗಿತ್ತು ಎಂದು ಹೇಳಲಾಗಿತ್ತು. ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬಳಿಕ  ಈ ಆಡಿಯೋ ಕೂಡಾ ವೈರಲ್ ಆಗಿತ್ತು.  ಇದರಿಂದಲೇ ನೊಂದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಘಟನೆಗೆ ನಿಖರ ಕಾರಣ ಏನು ಎನ್ನುವುದು ಇನ್ನು ತಿಳಿದು ಬಂದಿಲ್ಲ. ಸ್ವಾಮೀಜಿಯ ಈ ನಡೆಯ ಹಿಂದಿನ ಕಾರಣ ತ ತನಿಖೆಯಿಂದ ಹೊರ ಬೀಳಬೇಕಾಗಿದೆ. 


ಇದನ್ನೂ ಓದಿ : ಮಳೆ ಅವಾಂತರ: ಮನೆಗೋಡೆ ಕುಸಿದು ಯುವಕ ಸಾವು, ಕೆರೆಯಂತಾದ ಬೇಗೂರು ಠಾಣೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.