ಲಿಂಬಾವಳಿ ಹೆಣ್ಮಕ್ಕಳ ಮೇಲೆ ರೇಪ್‌ ಮಾಡಲ್ಲ, ಅವರ ನಡವಳಿಕೆಯೇ ಬೇರೆ : ಹೆಚ್‌ಡಿಕೆ

ಶಾಸಕ ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳನ್ನ ರೇಪ್‌ ಮಾಡುವವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

Written by - Krishna N K | Last Updated : Sep 4, 2022, 04:07 PM IST
  • ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳನ್ನ ರೇಪ್‌ ಮಾಡುವವರಲ್ಲ
  • ಬಹುಶಃ ಅವರ ಒಂದು ಸಿಡಿ ಇದೆ ಅದನ್ನ ನೋಡಿದ್ರೆ ಏನು ಅಂತ ಗೊತ್ತಾಗತ್ತೆ
  • ಪರೋಕ್ಷವಾಗಿ ಲಿಂಬಾವಳಿ ಹಳೆ ಪ್ರಕರಣದ ಕುರಿತು ಟಾಂಗ್‌ ನೀಡಿದ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ
ಲಿಂಬಾವಳಿ ಹೆಣ್ಮಕ್ಕಳ ಮೇಲೆ ರೇಪ್‌ ಮಾಡಲ್ಲ, ಅವರ ನಡವಳಿಕೆಯೇ ಬೇರೆ : ಹೆಚ್‌ಡಿಕೆ title=

ಮಂಡ್ಯ: ಶಾಸಕ ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳನ್ನ ರೇಪ್‌ ಮಾಡುವವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅರವಿಂದ ಲಿಂಬಾವಳಿ ಹೆಣ್ಣು ಮಕ್ಕಳನ್ನ ರೇಪ್ ಮಾಡಲ್ಲ. ಬಹುಶಃ ಅವರ ಒಂದು ಸಿಡಿ ಇದೆ ಅದನ್ನ ನೋಡಿದ್ರೆ ಏನು ಅಂತ ಗೊತ್ತಾಗತ್ತೆ. ಅವರದ್ದು ಒಂದು ಸಿಡಿ ಇದೆ ಅದನ್ನ ನೋಡಿದ್ರೆ ಅವರು ಏನು ಅಂತ ಗೊತ್ತಾಗತ್ತೆ. ಆದ್ರೆ ಅದನ್ನು ನೋಡದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ. ಅವರು ಹೆಣ್ಣು ಮಕ್ಕಳ ಮೇಲೆ ಆ ರೀತಿ ಮಾಡಲ್ಲ. ಅವರ ನಡವಳಿಕೆಯೇ ಬೇರೆ ಇದೆ ಎಂದು ಪರೋಕ್ಷವಾಗಿ ಲಿಂಬಾವಳಿ ಹಳೆ ಪ್ರಕರಣದ ಕುರಿತು ಟಾಂಗ್‌ ನೀಡಿದರು. 

ಇದನ್ನೂ ಓದಿ: ನಡುರಸ್ತೆಯಲ್ಲಿಯೇ ಎರಡು ಗುಂಪುಗಳ ನಡುವೆ ಮಾರಾಮಾರಿ : ಮಚ್ಚು, ರಾಡ್‌ ಕಂಡು ಬೆಚ್ಚಿ ಬಿದ್ದ ಜನ

ಅಲ್ಲದೆ, ಜನಪ್ರತಿನಿಧಿಗಳ ಬಳಿ ಅಹವಾಲು ತಂದಾಗ ಗೌರವಯುತವಾಗಿ ಮನವಿ ಸ್ವೀಕಾರ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದು ಅನ್ನೋದನ್ನ ಅವರಿಗೆ ಮನವರಿಕೆ ಮಾಡಬೇಕು. ಆ ರೀತಿ ಆ ಹೆಣ್ಣು ಮಗಳ ಮೇಲೆ ಅಗೌರವವಾಗಿ ನಡೆದುಕೊಂಡಿದ್ದು ಒಬ್ಬ ಜನಪ್ರತಿನಿಧಿಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದರು.

ಮುರುಘಾ ಶ್ರೀ ಬಗ್ಗೆ ಚರ್ಚೆ ಅನಾವಶ್ಯಕ 

ಚಿತ್ರದುರ್ಗ ಮುರುಘಾ ಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಹೆಚ್‌ಡಿಕೆ, ಜನರ ಮನಸ್ಸಿನಲ್ಲಿ ಅಪನಂಬಿಕೆ ಬಾರದೆ ಇರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಕಾನೂನಿನ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಿರುವುದು ಸರ್ಕಾರದ ಕರ್ತವ್ಯ. ಈ ವಿಚಾರವನ್ನ ನಾವು ಸಾರ್ವಜನಿಕವಾಗಿ ಚೆರ್ಚೆ ಮಾಡುವಂತದ್ದು ಅನಾವಶ್ಯಕ. ಘಟನೆ ನಡೆದಿರುವ ಬಗ್ಗೆ ಸತ್ಯಾಂಶಗಳ ಆಧಾರದ ಮೇಲೆ ಕ್ರಮ ಆಗಬೇಕು ಎಂದರು.

ಇದನ್ನೂ ಓದಿ: ಲಂಚಕೋರರಿಗೆ ಮುಖ ಮರೆಸಿಕೊಳ್ಳಲು ಹಿಂದುತ್ವ ಒಂದು ಮುಖವಾಡ- ಸಿದ್ಧರಾಮಯ್ಯ ವಾಗ್ದಾಳಿ

ಮೋದಿ ರಾಜ್ಯಕ್ಕೆ ಗೊಂಬೆ ಕುಣಿಸಲು ಬರ್ತಾರಾ..?

ಪದೇ ಪದೇ ರಾಜ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನದ ಬಗ್ಗೆ ಕಿಡಿಕಾರಿರುವ ಹೆಚ್‌.ಡಿ. ಕುಮಾರಸ್ವಾಮಿ, ಏನ್‌ ಮಾಡೋಕೆ ಅವರು ರಾಜ್ಯಕ್ಕೆ ಬರ್ತಾರೆ.. ಏನಿದೆ, ಏನ್ ಕೊಟ್ಟಿದಿವಿ ಅಂತಾ ಬರ್ತಾರೆ.. ಇಲ್ಲೇನು ಗೊಂಬೆ ಕುಣಿಸೋಕೆ ಬರ್ತಾರಾ..?. ಕಳೆದ ಮೂರ್ನಾಲ್ಕು ವರ್ಷದಲ್ಲಿ ಸುಮಾರು 40 ಸಾವಿರ ಕೋಟಿ ರೂ. ಬೆಳೆ ನಾಶವಾಗಿದೆ. ಇದ್ಯಾವ್ದಕ್ಕೂ ಧ್ವನಿ ಎತ್ತದೆ, ಕೇಂದ್ರ ಸರ್ಕಾರ ನೆರವು ನೀಡದೆ ಇಲ್ಲಿಗೆ ಬರೀ ಭಾಷಣ ಮಾಡಲು ಬರ್ತಾರೆ ಎಂದು ಮೋದಿ ವಿರುದ್ಧ ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News