ಗದಗ : ಕೆಎಸ್‌ಆರ್‌ಟಿಸಿ ಮಹಾಯಡವಟ್ಟು ಮಾಡಿಕೊಂಡಿದ್ದು, ರಾಜ್ಯದ ಟಿಕೆಟ್‌ನಲ್ಲಿ ಮಹಾರಾಷ್ಟ್ರ ಸರ್ಕಾರದ ಲಾಂಚನ ಪ್ರಿಂಟ್‌ ಮಾಡಿದೆ ಇದರಿಂದ ನಾಡದ್ರೋಹಿ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಕನ್ನಡಪರ ಸಂಘಟನೆ ಪ್ರತಿಭಟನೆ ನಡೆಸಿ ಒತ್ತಾಯಿಸಿದೆ.


COMMERCIAL BREAK
SCROLL TO CONTINUE READING

ಕೆಎಸ್.ಆರ್.ಟಿಸಿ ಇಲಾಖೆ ಸದಾ ಒಂದಿಲ್ಲ ಒಂದು ಸುದ್ಧಿಗೆ ಗ್ರಾಸವಾಗಿರುತ್ತೆ. ಈಗ ಮತ್ತೊಂದು ಯಡವಟ್ಟಿನಿಂದ ಮತ್ತೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಕೆಎಸ್.ಆರ್.ಟಿಸಿ ಟಿಕೆಟ್‌ನಲ್ಲಿ ಕರ್ನಾಟಕ ಸರ್ಕಾರದ ಗಂಡಭೇರುಂಡ ಲಾಂಛನದ ಬದಲಾಗಿ ಮಹಾರಾಷ್ಟ್ರ ಸರ್ಕಾರದ ಲಾಂಚನ ಪ್ರಿಂಟ್ ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರದ ಲಾಂಚನದ ಪ್ರಿಂಟ್ ಇರೋ ಟಿಕೆಟ್‌ಗಳನ್ನ ಪ್ರಯಾಣಿಕರಿಗೆ ನೀಡಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್ ಮುಕ್ತ ಕರ್ನಾಟಕ : ಹೆಚ್‌ಡಿಕೆ, ಕೆಸಿಆರ್ ಸಂಕಲ್ಪ


ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ದೋಣಿ ಗ್ರಾಮದಿಂದ ಗದಗ ನಗರಕ್ಕೆ ಬರುವ ಸರಕಾರಿ ಬಸ್‌ನಲ್ಲಿ ಈ ಟಿಕೆಟ್‌ಗಳನ್ನು ಹಂಚಲಾಗಿದೆ ಎಂದು ಕನ್ನಡಪರ ಸಂಘಟನೆ ಆರೋಪಿಸಿದೆ. ಇದೊಂದೇ ಮಾರ್ಗವಲ್ಲ ಬದಲಾಗಿ ಬಹುತೇಕ ನಗರಗಳಿಗೆ, ಹಳ್ಳಿಗಳಿಗೆ ತಾಲೂಕುಗಳಿಗೆ ಹೋಗುವ  ಬಸ್‌ಗಳಲ್ಲಿ ಇದೇ ಲಾಂಚನ ಇರುವ ಟಿಕೆಟ್ ನೀಡಲಾಗ್ತಿದೆ.  


ಇದನ್ನೂ ಓದಿ: ಅಮರ ಶಿಲ್ಪಿ ಜಕ್ಕಣ್ಣ ನಿನ್ನ ನೋಡಿ ಬೆರಗಾದ, ಕುಂಚರಾಜ ರವಿಮರ್ಮ ಮೈಮರೆತು ಶರಣಾದ..!


ಏನಿದು ಟಿಕೆಟ್ ವಿವಾದ...! : ಮಹಾರಾಷ್ಟ್ರ ರಾಜ್ಯ ಪರಿವಾರನ್, ಜೈ ಮಹಾರಾಷ್ಟ್ರ ಅಕ್ಷರಗಳು ಮತ್ತು ಮಹಾರಾಷ್ಟ್ರ ಸರಕಾರದ ಲಾಂಚನ ಪ್ರಿಂಟ್ ಆಗಿರೋ ಟಿಕೆಟ್ ಗಳನ್ನ ಹಂಚುತ್ತಿದ್ದಾರೆ. ಅಂದಹಾಗೆ ಕರ್ನಾಟಕ ಸರ್ಕಾರದ ಟಿಕೆಟ್‌ನಲ್ಲಿ ರಾಜ್ಯ ಲಾಂಛನವಾಗಿರೋ ಗಂಡಭೇರುಂಡ ಲಾಂಛನ ಇರುತ್ತದೆ. ಆದ್ರೆ ಗದಗನಲ್ಲಿ ಮಾತ್ರ ಕೆಲವು ಬಸ್‌ಗಳಲ್ಲಿ ಮಹಾರಾಷ್ಟ್ರ ಟಿಕೆಟ್ ಹಂಚಿಕೆಯಾಗಿದೆ. ಇದರಿಂದ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳು ದಿಢೀರ್ ಪ್ರತಿಭಟನೆಗಿಳಿದಿವೆ. ನಗರದ ಹಳೆ ಬಸ್ ನಿಲ್ದಾಣದಲ್ಲಿ ಯಡವಟ್ಟು ಮಾಡಿದ ನಾಡದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿವೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.