ಬೆಂಗಳೂರು : ಪ್ರಧಾನಿ ಭದ್ರತಾ ವೈಫಲ್ಯದ ಹೆಸರಿನಲ್ಲಿ ಬಿಜೆಪಿಯವರು ಪಂಜಾಬ್ ಸರ್ಕಾರದ ಮೇಲೆ ಗೂಬೆ ಕೂರಿಸೋಕೆ ಹೊರಟಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ರ್ಯಾಲಿಗೆ ತಡೆ ವಿಚಾರವಾಗಿ ಬಿತ್ತರವಾಗುತ್ತಿರುವ ಮಾಹಿತಿ ಹಾಗೂ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಸರ್ಕಾರದವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಕ್ತಾರರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಪಂಜಾಬ್ ಸರ್ಕಾರದ ಮೇಲೆ ಗೂಬೆ ಕೂರಿಸೋಕೆ ಹೊರಟಿದ್ದಾರೆ ಎಂದರು.


ಇದನ್ನೂ ಓದಿ : ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ ಘೋಷಿಸಿದ ರಾಜ್ಯ ಸರ್ಕಾರ


ಪಂಜಾಬ್ ನಲ್ಲಿ ದಲಿತ ಮುಖ್ಯಮಂತ್ರಿ ಇದ್ದಾರೆ. ದೇಶದಲ್ಲಿ ಪ್ರಥಮ ದಲಿತ ಮುಖ್ಯಮಂತ್ರಿ. ಸಿಎಂ ಚೆನ್ನಿಯವರು(Charanjit Singh Channi) ಸರಳ,ಮೃದುಭಾಷಿ. ಅಂತಹ ವ್ಯಕ್ತಿ ಮೇಲೆ ಆರೋಪ ಮಾಡುತ್ತಿದ್ದಾರೆ. ಸರ್ಕಾರ ಕೆಳಗಿಳಿಸೋಕೆ ಬಿಜೆಪಿಯವರು ಮಾಡುತ್ತಿದ್ದಾರೆ. ಭದ್ರತಾ ವೈಫಲ್ಯ ಆಗಿರೋದು ಕೇಂದ್ರದ್ದು. ಐಬಿ, ಇಂಟೆಲಿಜೆನ್ಸ್, ಭದ್ರತಾ ಪಡೆ ಪರಿಶೀಲನೆ ಮಾಡುತ್ತೆ. ನಾಲ್ಕು ಸ್ಥಾನಗಳಲ್ಲಿ ಅವರು ಲ್ಯಾಂಡ್ ಆಗಬೇಕು. ಪ್ರತಿ ಮಿನಿಟು ಮಿನಿಟ್ ಮಾಹಿತಿ ಅವರಿಗಿರುತ್ತದೆ. ಭದ್ರತಾ ವೈಫಲ್ಯ ಅಂದರೆ ಹೇಗೆ? ಇಲ್ಲಿ ಯಾರದ್ದು ತಪ್ಪಾಗಿದೆ. ಅವರ ಅಪೇಕ್ಷೆಯಂತೆ ರ್ಯಾಲಿಗೆ ಜನ ಸೇರಿಲ್ಲ. ಅವರು ರ್ಯಾಲಿ ಹೈಲೈಟ್ ಮಾಡಬೇಕಿತ್ತು. ಆದರೆ ಅಂತಹ ಸನ್ನಿವೇಶ ಆಗಲಿಲ್ಲ. 70 ಸಾವಿರ ಜನ ಸೇರ್ತಾರೆಂಬ ನಿರೀಕ್ಷೆ ಅವರಿಗಿತ್ತು. ಆದರೆ ಅಲ್ಲಿ ಸೇರಿದ್ದು ಕೇವಲ 700 ಜನ ಮಾತ್ರ. ಪೊಲೀಸರೇ ನಾಲ್ಕೈದು ಸಾವಿರ ಜನ ಇದ್ದರು. ಹೀಗಾಗಿ ಅವರೇ ರದ್ಧು ಮಾಡೋಕೆ ಹೊರಟಿದ್ದಾರೆ. ಅದಕ್ಕೆ ಕಾರಣಬೇಕಲ್ಲ ಅದಕ್ಕೆ ಇದನ್ನ ತೋರಿಸ್ತಿದ್ದಾರೆ ಎಂದರು.


ಜನ ಸೇರಿಲ್ಲವೆಂದು ಈ ಆರೋಪ ಮಾಡ್ತಿದ್ದಾರೆ. ಹವಾಮಾನ ಚೆನ್ನಾಗಿಲ್ಲವೆಂಬುದು ಗೊತ್ತಿದೆ. ಅಧಿಕಾರಿಗಳೇ ಮಾಹಿತಿ ಒದಗಿಸಿದ್ದಾರೆ. ರೈತರು ಪ್ರತಿಭಟನೆ(Farmers Protest) ಹಮ್ಮಿಕೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳೋಕೆ ಸೆಕ್ಯೂರಿಟಿ ಲ್ಯಾಪ್ಸ್ ತೋರಿಸ್ತಿದ್ದಾರೆ. ಪ್ರಧಾನಿಗೆ ಅತಿ‌ಹೆಚ್ಚಿನ ಸೆಕ್ಯೂರಿಟಿ ಇರುತ್ತದೆ. ನೆಹರು, ಇಂದಿರಾ, ರಾಜೀವ್ ಗೆ ಇಷ್ಟು ಸೆಕ್ಯೂರಿಟಿ ಇರಲಿಲ್ಲ. ಈಗ ಮೋದಿಯವರಿಗೆ 10 ಪಟ್ಟು ಸೆಕ್ಯೂರಿಟಿ ಇದೆ. ಉತ್ತಮ ಉಪಕರಣಗಳು ಲಭ್ಯವಿವೆ. ಆದರೂ ಪಂಜಾಬ್ ಸಿಎಂ ಮೇಲೆ ಗೂಬೆ ಕೂರಿಸ್ತಾರೆ. ಪ್ರಧಾನಿ ಬಂದರೆ 10 ಬಾರಿ ಚೆಕ್ ಮಾಡ್ತಾರೆ. ಭದ್ರತಾ ಸಿಬ್ಬಂದಿಗಳು ಚೆಕ್ ಮಾಡ್ತಾರೆ. ಚೆಕ್ ಮಾಡಿಯೇ ಪ್ರಧಾನಿಗೆ ಬಿಡ್ತಾರೆ. ಆದರೆ ಇಲ್ಲಿ ಹೇಗೆ ಸೆಕ್ಯೂರಿಟಿ ಪೇಲ್ಯೂರ್ ಆಗುತ್ತೆ. ಸೆಕ್ಯೂರಿಟಿ ಪೇಲ್ಯೂರ್ ಆದರೆ ಅವರೇ ಹೊಣೆ. ಪಂಜಾಬ್ ಸಿಎಂ ಮೇಲೆ ಗೂಬೆಕೂರಿಸ್ತಾರೆ ಎಂದರು.
ಪ್ರಧಾನಿ ಭದ್ರತಾ ವೈಫಲ್ಯ ಆಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದು ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದ್ದಾರೆ. ಇದರಲ್ಲಿ ಒಬ್ಬ ಮಾಜಿ ಮುಖ್ಯ ಕಾರ್ಯದರ್ಶಿಯ ಸಹ ಇದ್ದಾರೆ. ಈ ಸಮಿತಿಯವರು ಮೂರು ದಿನದಲ್ಲಿ ವರದಿ ಕೊಡ್ತಾರೆ. ಇದನ್ನ‌ ಪಂಜಾಬ್ ಸಿಎಂ ನನ್ನ‌ಜೊತೆ ಹೇಳಿದ್ದಾರೆ. ನಾನು ಅವರ ಜೊತೆ ಬೆಳಗ್ಗೆ ಮಾತನಾಡಿದ್ದೇನೆ. ಪಂಜಾಬ್ ಸಿಎಂ ಸರಳ,ಸಜ್ಜನ. ಇದಕ್ಕಿಂತ ಇನ್ನೇನು ಬೇಕು. ಪ್ರಚಾರಕ್ಕಾಗಿ ಈ ರೀತಿ ಮಾಡಿದರೆ ಹೇಗೆ. ಇದು ಪಂಜಾಬ್ ಜನತೆಗೆ ಅನ್ಯಾಯ ಮಾಡಿದಂತೆ ಎಂದರು.


ಇದನ್ನೂ ಓದಿ : BBMP ಚುನಾವಣೆಗೆ ಭಾರೀ ಸಿದ್ಧತೆ; ರಾಜಧಾನಿ ಟ್ರಾಫಿಕ್ ಸಮಸ್ಯೆಗೆ 'ಮಾಸ್ಟರ್ ಪ್ಲಾನ್'ಗೆ ಸಂಪುಟ ಒಪ್ಪಿಗೆ


ನಾನು ಹೋಗಬೇಕಾದ್ರು ಮೋದಿ(PM Narendra Modi) ಬರುತ್ತಿದ್ದಾರೆ ಅಂದ್ರೆ ಐದು ನಿಮಿಷ ಮೊದಲೇ ಟ್ರಾಫಿಕ್ ನಿಲ್ಲಿಸುತ್ತಾರೆ. ನಾನು ನನ್ನ ಕಚೇರಿಗೆ ಹೋಗುವಾಗಲೂ ಮೋದಿ ಬರುತ್ತಿದ್ದಾರೆಂದ್ರೆ ತಡೆಯುತ್ತಾರೆ. ನಾನು ಗಲಾಟೆ ಮಾಡಿದ ಬಳಿಕ ಬಿಟ್ಟಿದ್ದಾರೆ. ಇದು ನನಗೇ ಆದ ಅನುಭವ. ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ. ರಾಜಕೀಯ ಲಾಭಕ್ಕೆ ಎಮೋಷನಲ್  ಪಾಲಿಟಿಕ್ಸ್ ಮಾಡುವುದು ಬೇಡ. ನಿವೃತ್ತಿ ನ್ಯಾಯಮೂರ್ತಿ ಇಂದ ಈಗಾಗಲೇ ಪ್ರಕರಣ ತನಿಖೆಗೆ ಕೊಡಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಪ್ರಕರಣವನ್ನ ತನಿಖೆಗೆ ನೀಡಿದೆ. ಬೆಳಿಗ್ಗೆ ಈ ಬಗ್ಗೆ ನನಗೆ ಪಂಜಾಬ್ ಸಿಎಂ ಮಾಹಿತಿ ನೀಡಿದ್ದಾರೆ ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.