ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ ಘೋಷಿಸಿದ ರಾಜ್ಯ ಸರ್ಕಾರ

Ambarish Memorial: ನಟ, ರಾಜಕಾರಣಿ ದಿಗಂಗತ ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

Edited by - Zee Kannada News Desk | Last Updated : Jan 6, 2022, 06:20 PM IST
  • ನಟ, ರಾಜಕಾರಣಿ ದಿಗಂಗತ ಅಂಬರೀಶ್‌ ಸ್ಮಾರಕ ನಿರ್ಮಾಣ
  • 12 ಕೋಟಿ ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ
  • ಕಂಠೀರವ ಸ್ಟುಡಿಯೋದಲ್ಲೇ ಅಂಬಿ ಸ್ಮಾರಕ
ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ ಘೋಷಿಸಿದ ರಾಜ್ಯ ಸರ್ಕಾರ   title=
ಸಚಿವ ಜೆ.ಸಿ ಮಾಧುಸ್ವಾಮಿ

ಬೆಂಗಳೂರು: ನಟ, ರಾಜಕಾರಣಿ ದಿಗಂಗತ ಅಂಬರೀಶ್‌ (Ambareesh) ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, ಕಂಠೀರವ  ಸ್ಟುಡಿಯೋದಲ್ಲೇ (Kanthirava Studio) ಸ್ಮಾರಕ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಕಂಠೀರವ ಸ್ವುಡಿಯೋದಲ್ಲೇ ಅಂಬರೀಶ್‌ ಸ್ಮಾರಕ (Ambarish Memorial) ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 12 ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಕೆರೆಗಳಿಗೆ ನೀರು ತುಂಬಿಸಲು ಅನುದಾನ:

ಬೆಂಗಳೂರಿನ 22 ಕೆರೆ, ಹೊಸಕೋಟೆ ಕೆರೆಗಳಿಗೆ ನೀರು ತುಂಬಿಸಲು 93 ಕೋಟಿ ರೂ. ಮಂಜೂರು ಮಾಡಲಾಗಿದೆ. ಕಾರ್ಕಳ ಕೋರ್ಟ್‌ ಕಟ್ಟಡ ನಿರ್ಮಾಣಕ್ಕೆ 19 ಕೋಟಿ ರೂ. ಹಾಗೂ ಕೋಲಾರದ ಮುಳಬಾಗಿಲು ಕೋರ್ಟ್‌ ಕಟ್ಟಡಕ್ಕೆ 16.3 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠಕ್ಕೆ 22 ಎಕರೆ ಭೂಮಿ ಮಂಜೂರು:

ದೊಡ್ಡ ಬಳ್ಳಾಪುರ ಮಾರುತಿ ಎಜುಕೇಶನ್‌ ಟ್ರಸ್ಟ್‌ಗೆ ಭೂಮಿ ನಿಯಮ ತಿದ್ದುಪಡಿ ಮಾಡಿ 2.8 ಎಕರೆ ಭೂಮಿ ಮಂಜೂರ ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಅಲ್ಲದೆ, ಆದಿಚುಂಚನಗಿರಿ ಮಠಕ್ಕೆ 22 ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆದಿಚುಂಚನಗಿರಿ ಮಠಕ್ಕೆ ಹಾಸನ ಜಿಲ್ಲೆ ಹೊಳೆನರಸೀಪುರದ ಹಿರಿಸಾವೆ ಬಳಿ ಭೂಮಿ ನೀಡಲಾಗುವುದು. ಶಾಲೆ, ವಿದ್ಯಾರ್ಥಿ ನಿಲಯ, ಧ್ಯಾನಮಂದಿರ, ಅನಾಥಾಶ್ರಮ ನಿರ್ಮಾಣಕ್ಕೆ ಈ 22 ಎಕರೆ ಭೂಮಿ ಬಳಸಿಕೊಳ್ಳಲಾಗುವುದು ಎಂದರು.

ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯಲು ಸಂಪುಟ ಅಸ್ತು:

ಮುದ್ರಾಂಕ ಇಲಾಖೆಗೆ ಐಟಿ ಸರ್ವಿಸ್‌ ಒದಗಿಸಲು ಅನುದಾನ ನೀಡಲಾಗಿದೆ. ಇದಕ್ಕಾಗಿ 406 ಕೋಟಿ ರೂ. ಅನುದಾನ ನೀಡಲಾಗುವುದು. ಇನ್ನು ಜಲಜೀವನ್‌ ಮಿಷನ್‌ ಅಡಿ ನೀರಿಗಾಗಿ 9,152 ಕೋಟಿ ನಿಗದಿ ಮಾಡಲಾಗಿದೆ. ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯಲು ಸಚಿವ ಸಂಪುಟ ಅಸ್ತು ಎಂದಿದೆ ಎಂದು ಸಚಿವರು ತಿಳಿಸಿದರು.

ಶುಶ್ರೂಷಕರ 80 ಹುದ್ದೆಗಳಿಗೆ ನೇರ ನೇಮಕಾತಿ:

ಶುಶ್ರೂಷಕರ 80 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀದಲಾಗಿದೆ. ಗುತ್ತಿಗೆ ಆಧಾರದಲ್ಲಿ ಇದ್ದವರಿಗೆ 20 ಅಂಕಗಳವರೆಗೆ ಗ್ರೇಸ್‌ ನೀಡಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಇದನ್ನೂ ಓದಿ:  2A reservation:ಎಳ್ಳು-ಬೆಲ್ಲ‌ದ ಜೊತೆ ಪಂಚಮಸಾಲಿ ಸಮಾಜಕ್ಕೆ 'ಮೀಸಲಾತಿ'ಯ ಸಿಹಿ ಕೊಡ್ತಾರಾ ಸಿಎಂ ಬೊಮ್ಮಾಯಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News